ಕುದ್ರೋಳಿ ಉಸ್ಮಾನ್ ಹಸನ್ ನಿಧನ
ಉಸ್ಮಾನ್ ಹಸನ್
ಮಂಗಳೂರು, ಜು.10 : ಜಮಾಅತೆ ಇಸ್ಲಾಮೀ ಹಿಂದ್ ನಾಯಕ, ದಿವಂಗತ ಕುದ್ರೋಳಿ ಹಸನಬ್ಬ ಅವರ ಪುತ್ರ ಉಸ್ಮಾನ್ ಹಸನ್ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಬುಧವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಸೌದಿ ಅರೇಬಿಯಾದಲ್ಲಿ ಸುಮಾರು ಮೂರು ದಶಕಗಳ ಕಾಲ ಉದ್ಯೋಗದಲ್ಲಿದ್ದ ಅವರು ಈಗ ಮಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಉಸ್ಮಾನ್ ಹಸನ್ ಅವರು ಪರೋಪಕಾರಿ ಮನೋಭಾವದವರಾಗಿದ್ದರು.
ಅವರು ಪತ್ನಿ, ಒಬ್ಬ ಪುತ್ರ , ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕಾಗಿ ಕಂದಕ್ ನಲ್ಲಿರುವ ಅಶ್ರಫ್ ಹಸನ್ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಿದ್ದು, ದಫನ ಕಾರ್ಯ ಗುರುವಾರ ಝುಹರ್ ನಮಾಝಿನ ಬಳಿಕ ಬಂದರ್ ನ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Next Story