’ಮೀಫ್’ ಕೊಡಗು ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಮಂಗಳೂರು, ಜ.19: ಕೊಡಗು ಜಿಲ್ಲೆಯ ಉಮ್ಮತ್ ಒನ್ ಸಂಘಟನೆಯ ಕೋರಿಕೆ ಮೇರೆಗೆ ದ.ಕ. ಮತ್ತು ಉಡುಪಿ ಜಿಲ್ಲಾ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ (ಮೀಫ್)ದ ನಿಯೋಗವು ಶನಿವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಮಡಿಕೇರಿಯ ’ಲೆ ಕೂರ್ಗ್’ ಹೋಟೆಲಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ವಿದ್ಯಾ ಸಂಸ್ಥೆ ಗಳ ಆಡಳಿತ ಪ್ರತಿನಿಧಿಗಳ ಸಭೆ ನಡೆಸಿತು.
ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಹಾಗೂ ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಬ್ಯಾರಿ ಜೋಕಟ್ಟೆ ಮೀಫ್ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಮುದಾಯಕ್ಕೆ ಇಂತಹ ಸಂಘಟನೆಗಳ ಅಗತ್ಯದ ಬಗ್ಗೆ ವಿವರಿಸಿದರು.
ಉಮ್ಮತ್ ಒನ್ ಸಂಸ್ಥೆ ಸಂಘಟಿಸಿದ ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಮೀಫ್ ಒಕ್ಕೂಟದ ಹೊಸ ಘಟಕ (ಚಾಪ್ಟರ್) ಮೀಫ್ ಕೊಡಗು ಜಿಲ್ಲಾ 18 ವಿದ್ಯಾ ಸಂಸ್ಥೆಗಳ ಅಡ್‌ಹಾಕ್ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕೆ.ಎ. ಶಾದಾಲಿ ಆಕ್ಸ್ಫರ್ಡ್ ಶಾಲೆ ಕುಂಜಿಲ, ಉಪಾಧ್ಯಕ್ಷರಾಗಿ ಎನ್.ಕೆ. ಮೆಹಬೂಬ್ ಮಾಸ್ಟರ್ ನಾಪೊಕ್ಲು, ಜಿ.ಎಚ್. ಹನೀಫ್ ಕ್ರೆಸೆಂಟ್ ಮಡಿಕೇರಿ, ಮನಿ ಮುಹಮ್ಮದ್ ಆಂಗ್ಲೋ ವರ್ಣಕುಲರ್ ಸ್ಕೂಲ್ ನೆಲ್ಲಿಯಹು ದುಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ. ಬಶೀರ್ ಬ್ರೈಟ್ ಪಬ್ಲಿಕ್ ಸ್ಕೂಲ್ ವಿರಾಜಪೇಟೆ, ಜತೆ ಕಾರ್ಯದರ್ಶಿಗಳಾಗಿ ಎಸ್.ಎನ್. ಅಸ್ಮಾ ಮೌಂಟೇನ್ ವ್ಯೂವ್ ಸ್ಕೂಲ್ ವಿರಾಜಪೇಟೆ, ಅರ್ಷದ್ ಸಿ.ಎ.ನೇತಾಜಿ ಸ್ಕೂಲ್ ಅಮ್ಮಥಿ, ಖಜಾಂಚಿ ಯಾಗಿ ಅಸಿಫ್ ಹಾಜಿ ಹುದಾ ಸ್ಕೂಲ್ ಕುಶಾಲನಗರ ಆಯ್ಕೆಯಾಗಿದ್ದಾರೆ.
ಘಟಕಕ್ಕೆ ಮೀಫ್ ವತಿಯಿಂದ ಸಂಯೋಜರಾಗಿ ಪರ್ವೀಝ್ ಅಲಿ, ಮುಖ್ಯ ಸಲಹೆಗಾರರಾಗಿ ಉಮ್ಮತ್ ಒನ್ ಟ್ರಸ್ಟಿನ ಅಧ್ಯಕ್ಷ ಬಶೀರ್ ಹಾಗೂ ಟ್ರಸ್ಟಿ ಸಲೀಮ್ ನಾಪೊಕ್ಲು ಅವರನ್ನು ಆಯ್ಕೆ ಮಾಡಲಾಯಿತು.
ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್, ಕಾರ್ಯದರ್ಶಿಗಳಾದ ಅನ್ವರ್ ಗೂಡಿನಬಳಿ, ಶಾರೀಕ್ ನೋಬಲ್, ಪರ್ವೀಝ್ ಅಲಿ, ಶಹಾಮ್ ಆಲ್ ಫುರ್ಖಾನ್, ರಹ್ಮತುಲ್ಲ ಬುರೂಜ್ ಉಪಸ್ಥಿತರಿದ್ದರು. ಉಮ್ಮತ್ ಒನ್ ಅಧ್ಯಕ್ಷ ಬಶೀರ್ ಸ್ವಾಗತಿಸಿದರು. ಕಾರ್ಯದರ್ಶಿ ಖಾಲಿದ್ ಹಾಜಿ ವಂದಿಸಿದರು. ಸಲೀಮ್ ನಾಪೊಕ್ಲು ಕಾರ್ಯಕ್ರಮ ನಿರೂಪಿಸಿದರು.







