ಮಲ್ಲಾರ್ ಮುಹಿಯುದ್ದೀನ್ ಜುಮಾ ಮಸೀದಿ: ನೂತನ ಪದಾಧಿಕಾರಿಗಳ ಆಯ್ಕೆ

ಯುಕೆ ಹಮೀದ್
ಕಾಪು, ಫೆ.4: ಪಕೀರ್ಣಕಟ್ಟೆ ಮಲ್ಲಾರ್ ಮುಹಿಯುದ್ದೀನ್ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಯು.ಕೆ.ಹಮೀದ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಮಸೀದಿ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್, ಜೊತೆ ಕಾರ್ಯದರ್ಶಿಗಳಾಗಿ ಎಂ.ಸಲೀಂ, ಅರಫಾತ್, ಕೋಶಾಧಿಕಾರಿಯಾಗಿ ಫಯಾಝ್ ಅಲಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಹುಸೇನ್, ಬಿ. ಹೈದರ್, ಅಬೂಬಕರ್, ಸಿದ್ದೀಕ್ ಮೊಯ್ದಿನ್, ಸಫ್ವಾನ್ ಶಬ್ಬೀರ್ ಹುಸೇನ್, ಹನೀಫ್ ಅಬೂಬಕರ್ರನ್ನು ಆರಿಸಲಾಯಿತು.
Next Story