ಬಿ.ಸಿ.ರೋಡ್: ಕಾಂಚನಾ ಹೋಂಡಾ ಶೋರೂಂನ ದಶಮಾನೋತ್ಸವ
ನೂತನ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆ

ಬಂಟ್ವಾಳ, ಫೆ.14: ಹೋಂಡಾ ಕಂಪೆನಿಯು ಅನಾವರಣ ಮಾಡಿದ ನೂತನ 125 ಸಿಸಿಯ ಎಸ್‌ಪಿ125, ಆ್ಯಕ್ಟಿವಾ 125ನ ಜತೆಗೆ ಆ್ಯಕ್ಟಿವಾ, ಡಿಯೊ ಹಾಗೂ ಯೂನಿಕಾರ್ನ್ ದ್ವಿಚಕ್ರ ವಾಹನಗಳನ್ನು ಬಿ.ಸಿ.ರೋಡ್ ಶಾಂತಿಯಂಗಡಿಯಲ್ಲಿರುವ ಕಾಂಚನಾ ಹೋಂಡಾ ಶೋರೂಮ್‌ನಲ್ಲಿ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದರ ಜೊತೆಗೆ ಶೋರೂಮ್‌ನ ದಶಮಾನೋತ್ಸವವನ್ನು ಆಚರಿಸಲಾಯಿತು.
ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್. ನೂತನ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿ ಗ್ರಾಹಕರುಗಳಿಗೆ ಕೀ ಹಸ್ತಾಂತರಿಸಿದರು.
ಅಪಘಾತದ ಸಂದರ್ಭ ಗಾಯಾಳುಗಳ ತ್ವರಿತ ಚಿಕಿತ್ಸೆಗೆ ಸಹಕರಿಸಿದ ಆದಂರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಂಚನಾ ಹೋಂಡಾ ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್, ಎಜಿಎಂ ಸೇಲ್ಸ್ ಹಾಶಿರ್, ಮಾರ್ಕೆಟಿಂಗ್ ಮ್ಯಾನೇಜರ್ ಸುಶಾಂತ್ ಶೆಟ್ಟಿ, ಸೇಲ್ಸ್ ಮ್ಯಾನೇಜರ್ ಶ್ವೇತಾ, ಸರ್ವೀಸ್ ಮ್ಯಾನೇಜರ್ ಸುಧೀರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಯೂಟ್ಯೂಬರ್ ಅರ್ಪಿತ್ ಕಾರ್ಯಕ್ರಮ ನಿರೂಪಿಸಿದರು.
ದ.ಕ. ಜಿಲ್ಲೆಯಲ್ಲಿರುವ ಕಾಂಚನಾ ಹೋಂಡಾ ಶೋರೂಮ್‌ಗಳಲ್ಲಿ ಬಿಡುಗಡೆಯಾಗಿರುವ ಹೋಂಡಾದ ನೂತನ ದ್ವಿಚಕ್ರ ವಾಹನಗಳಿಗೆ 10 ವರ್ಷಗಳ ವಾರೆಂಟಿ ಸೌಲಭ್ಯ ಸಿಗಲಿದೆ. ಅಲ್ಲದೇ ಈ ವಾಹನಗಳಿಗೆ ಆರು ಸಾವಿರ ಕಿ.ಮೀ.ನಲ್ಲಿ ಇಂಜಿನ್ ಆಯಿಲ್ ಬದಲಾವಣೆ ಮಾಡಿದರೆ ಸಾಕಾಗುತ್ತದೆ. ಅದಲ್ಲದೆ ಹೋಂಡಾದ ಯಾವುದೇ ಹೊಸ ದ್ವಿಚಕ್ರ ವಾಹನ ಖರೀಸುವ ಗ್ರಾಹಕರಿಗೆ 10 ಸಾವಿರ ರೂ. ವರೆಗೆ ಉಳಿತಾಯ ಲಭ್ಯವಾಗಲಿದೆ. ಅತೀ ಕಡಿಮೆ ಮುಂಗಡ ಪಾವತಿ ಮತ್ತು ಅತೀ ಕಡಿಮೆ ಇಎಂಐ ವ್ಯವಸ್ಥೆಯನ್ನೂ ಮಾಡಿಕೊಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8447749116, 9945564997 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.