ʼಹವಾಮಾನ ಬದಲಾವಣೆಯ ಸವಾಲುಗಳುʼ ಕುರಿತು ತರಬೇತಿ ಕಾರ್ಯಾಗಾರ

ಮಂಗಳೂರು ಫೆ.21:ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಹವಾಮಾನ ಬದಲಾವಣೆಯ ಕುರಿತು ರಾಜ್ಯ ಕ್ರಿಯಾ ಯೋಜನೆಯ ಕಾರ್ಯತಂತ್ರಗಳು ಮತ್ತು ಅದರಲ್ಲಿ ವಿವಿಧ ಇಲಾಖೆಯ ಪಾತ್ರಗಳ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಗುರುವಾರ ನಡೆಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರಿನ ಪರಿಸರ ಅಧಿಕಾರಿ ಡಾ. ಲಕ್ಷ್ಮಿಕಾಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ ಕುಮಾರ್ ಶೆಟ್ಟಿ ಎನ್. ಅಧ್ಯಕ್ಷತೆ ವಹಿಸಿದ್ದರು.
ತರಬೇತಿ ಮುಖ್ಯಸ್ಥೆ ಲತಾ ಎಂ.ಎಚ್., ಡಾ ಬೋಯಾ ಸರಿತ ಮಾಹಿತಿ ನೀಡಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ.ರಾವ್ ಕರಾವಳಿ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ದಿಂದಾಗುತ್ತಿರುವ ಸಮಸ್ಯೆಗಳ ಹಾಗೂ ಪರಿಹಾರಾತ್ಮಕ ಮಾರ್ಗಗಳ ಕುರಿತು ವಿವರಣೆ ನೀಡಿದರು. ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರೊ.ಡಾ.ಲಕ್ಷ್ಮಿಪತಿ ಮೀನುಗಾರಿಕೆಯಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.





