ಸುರತ್ಕಲ್ : "ಝೇವರ್ ಬೈ ಏಕೆ" ಲೋಕಾರ್ಪಣೆ

ಸುರತ್ಕಲ್ : ಮಹಿಳೆಯರ ಅಚ್ಚುಮೆಚ್ಚಿನ ಆ್ಯಂಟಿಕ್ ಅನುಕರಣೆ ಆಭರಣಗಳ ಬಾಡಿಗೆ ಮತ್ತು ಮಾರಾಟ ಮಳಿಗೆ "ಝೇವರ್ ಬೈ ಏಕೆ" ಬುಧವಾರ ಸುರತ್ಕಲ್ ಎಚ್‌ಎನ್‌ಜಿಸಿ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು.
ಮಳಿಗೆಯ ಮಾಲಕಿ ಅಸ್ಮಾ ಕೌಸರ್ ಅವರ ತಾಯಿ ಸಫಿಯಾ ಅವರು ನೂತನ ಮಳಿಗೆಯನ್ನು ಲೋಕಾರ್ಪಣೆಗೈದರು. ಈ ಸಂದರ್ಭ ಅಬೂಬಕರ್ ಕುಳಾಯಿ, ಮಾಲಕಿ ಅಸ್ಮಾ ಕೌಸರ್ ಅವರ ಪತಿ ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷ ಕ್ಷಣಗಳನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಬಾಡಿಗೆಗೆ ಮತ್ತು ಮಾರಾಟಕ್ಕಾಗಿ ಲಭ್ಯವಿರುವ ಅದ್ಭುತ ಮತ್ತು ವೈಭವಶಾಲಿ ಆಭರಣಗಳ ವಿಶಿಷ್ಟ ಸಂಗ್ರಹವನ್ನು ಹೊಂದಿದೆ.
ಅತ್ಯುತ್ತಮ ಗುಣ ಮಟ್ಟದ ಆ್ಯಂಟಿಕ್ ಅಮೇರಿಕನ್ ಡೈಮಂಡ್, ಪಾಕಿಸ್ತಾನಿ ಸೆಟ್ ಗಳು, ವಧುವಿನ ಮತ್ತು ಪರ್ಲ್ ಸೆಟ್ಟುಗಳು, ರೋಸ್ ಗೋಲ್ಡ್ ಆಭರಣಗಳು, ಬೆರಳು ಉಂಗುರಗಳು, ಬ್ರೇಸ್ಲೆಟ್ ಗಳು, ಮಾಂಗ್ ಟಿಕ್ಕಾ, ಪೋಲ್ಕಿ, ಕುಂದನ್, ಬಳೆಗಳು, ಪಾನಾ, ಬೆಲ್ಟ್ ಗಳು, ರಿವರ್ಸ್ ಎಡಿ, ಶೀಶ್ ಪಟ್ಟಿ ಸೇರಿದಂತೆ ವಿವಿಧ ವಿನೂತನ ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯವಿದೆ.
ಆ್ಯಂಟಿಕ್ ಅನುಕರಣೆ ಆಭರಣಗಳ ಬಾಡಿಗೆ ಮತ್ತು ಮಾರಾಟ ಮಳಿಗೆಯು ಬೃಹತ್ ನಗರಗಳಲ್ಲಷ್ಟೇ ಇದ್ದು, ಸುರತ್ಕಲ್ ನಂತಹಾ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಇದೇ ಪ್ರಥಮ ಮಳಿಗೆಯಾಗಿದೆ. ಇಲ್ಲಿ ವಧುವಿಗೆ ಬೇಕಾಗುವ ಎಲ್ಲಾ ಆಭರಣಗಳು ಬಾಡಿಗೆ ರೂಪದಲ್ಲೂ ದೊರೆಯಲಿದೆ. ಸುರತ್ಕಲ್, ಮುಲ್ಕಿ, ಬಜ್ಪೆ, ಕೈಕಂಬ ಕಿನ್ನಿಗೋಳಿ, ಕಟೀಲು ಸೇರಿದಂತೆ ಸುರತ್ಕಲ್ ಆಸು ಪಾಸಿನ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.