Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮನಪಾ: ಗದ್ದಲದಲ್ಲೇ ಕಳೆದ ಕೊನೆಯ ಸಾಮಾನ್ಯ...

ಮನಪಾ: ಗದ್ದಲದಲ್ಲೇ ಕಳೆದ ಕೊನೆಯ ಸಾಮಾನ್ಯ ಸಭೆ!

ಆಡಳಿತ - ವಿಪಕ್ಷ ಸದಸ್ಯರ ವಾಗ್ವಾದಕ್ಕೆ ಎರಡೂವರೆ ತಾಸು ವ್ಯರ್ಥ

ವಾರ್ತಾಭಾರತಿವಾರ್ತಾಭಾರತಿ27 Feb 2025 6:12 PM IST
share
ಮನಪಾ: ಗದ್ದಲದಲ್ಲೇ ಕಳೆದ ಕೊನೆಯ ಸಾಮಾನ್ಯ ಸಭೆ!

ಮಂಗಳೂರು, ಫೆ. 27: ಮಹಾನಗರ ಪಾಲಿಕೆಯ ಪ್ರಸಕ್ತ ಐದು ವರ್ಷಗಳ ಆಡಳಿತಾವಧಿಯ ಕೊನೆಯ ದಿನವಾದ ಗುರುವಾರದಂದು ಕೊನೆಯ ಸಾಮಾನ್ಯ ಸಭೆಯು ಗೊಂದಲಮಯಗೊಂಡು, ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಕೆಸರೆರಚಾಟಕ್ಕೆ ಸಾಕ್ಷಿಯಾಯಿತು. ಐದು ವರ್ಷಗಳ ಬಿಜೆಪಿಯ ಪಾಲಿಕೆ ಆಡಳಿತ ಶೂನ್ಯ ಎಂದು ವಿಪಕ್ಷ ಸದಸ್ಯರು ಆರೋಪಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಅನುದಾನವೇ ಸಿಗುತ್ತಿಲ್ಲ ಎಂದ ಆಡಳಿತ ಪಕ್ಷ ಪ್ರತ್ಯಾರೋಪಿಸಿತು.

ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಪ್ರಶ್ನೋತ್ತರ ವೇಳೆಯು ಸುಮಾರು ಎರಡೂವರೆ ತಾಸು ಧ್ವನಿವರ್ಧಕಗಳೇ ಕಿತ್ತು ಬರುವ ರೀತಿಯ ಸದಸ್ಯರ ಮಾತಿನ ಸಮರದೊಂದಿಗೆ ನಡೆಯಿತು.

ನಾಡಗೀತೆಯ ಬಳಿಕ ಮೇಯರ್‌ರವರು ಹಿಂದಿನ ಸಭೆಯ ನಡಾವಳಿಗಳನ್ನು ಸ್ಥಿರೀಕರಣಗೊಳಿಸಿ ಪ್ರಶ್ನೋತ್ತರಕ್ಕೆ ಅವಕಾಶ ನೀಡಿದರು.

ಈ ಸಂದರ್ಭ ವಿಪಕ್ಷ ನಾಯಕ ಅನಿಲ್ ಕುಮಾರ್ ಮಾತು ಆರಂಭಿಸಿ, ಪಾಲಿಕೆಯಲ್ಲಿ ಇಂದು ಬಿಜೆಪಿ ಆಡಳಿತದ ಐದು ವರ್ಷಗಳ ಕೊನೆಯ ದಿನವಾಗಿದೆ. ಕಳೆದ ಐದು ವರ್ಷಗಳಲ್ಲಿ ಒಳಚರಂಡಿಗಾಗಿ 300 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ಸುಮಾರು ಮೂರು ವರ್ಷಗಳಿಂದ ನಗರದಲ್ಲೆಡೆ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ವಿಪಕ್ಷ ಗಮನ ಸೆಳೆಯುತ್ತಾ ಬಂದಿದ್ದರೂ, ಅದನ್ನು ಸರಿಪಡಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ರಾಜಕಾಲುವೆಗಳಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜಲಸಿರಿಯಡಿ 24*7 ನೀರಿನ ವಾಗ್ದಾನ ನೀಡಿ 797 ಕೋಟಿ ರೂಗಳ ಕುಡಿಯುವ ನೀರಿನ ಯೋಜನೆ ಐದು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಕನಿಷ್ಟ ಯಾವುದೇ ಒಂದು ವಾರ್ಡ್‌ನಲ್ಲಿಯೂ 24*7 ನೀರು ಕೊಡುವ ವ್ಯವಸ್ಥೆ ಜಾರಿಯಾಗಿಲ್ಲ. ಯೋಜನೆ ಪೂರ್ಣಗೊಳ್ಳಲು ಇನ್ನೂ ಮೂರ್ನಾಲ್ಕು ವರ್ಷಗಳೇ ಬೇಕಾದೀತು. ಪೈಪ್‌ಲೈನ್ ಬಿಡಿಭಾಗ ಖರೀದಿಯಾಗಿದೆ. ಮೀಟರ್‌ಗಳು ಖರೀದಿಸಿ ಕೆಲ ವರ್ಷಗಳಾದರೂ ಅಳವಡಿಕೆ ಮಾಡದೆ ತುಕ್ಕು ಹಿಡಿಯುತ್ತಿದೆ. ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿಲ್ಲ. ಒಟ್ಟಿನಲ್ಲಿ ಪಾಲಿಕೆಯ ಐದು ವರ್ಷಗಳ ಆಡಳಿತ ದೌರ್ಭಾಗ್ಯ, ಆಡಳಿತ ವೈಫಲ್ಯ ಎಂದು ವಿಪಕ್ಷ ನಾಯಕರು ಆರೋಪ ಮುಂದುವರಿಸುತ್ತಿದ್ದಂತೆಯೇ ವಿಪಕ್ಷ ಸದಸ್ಯೆ ಶಕೀಲಾ ಕಾವ ಮಧ್ಯ ಪ್ರವೇಶಿಸಿ, ಸದನದಲ್ಲಿ ರಾಜಕೀಯ ಪ್ರೇರಿತ ಮಾತುಗಳನ್ನಾಡಲಾಗುತ್ತಿದೆ ಎಂದರು.


ನಾವು ವಾಸ್ತವವನ್ನು ತಿಳಿಸುತ್ತಿದ್ದೇವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಮನೆಯನ್ನು ಬಡವರಿಗೆ ಪಾಲಿಕೆ ಆಡಳಿತದಿಂದ ನೀಡಲಾಗಿಲ್ಲ. ಮನಪಾದಲ್ಲಿ ತ್ರಿಬಲ್ ಇಂಜಿನ್ ಸರಕಾರವಿದ್ದಾಗಲೂ ನೀರಿನ ದರವನ್ನು ಹೆಚ್ಚಿಸುವ ಜತೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನೂ ಹೆಚ್ಚಿಸಿ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ವಿಪಕ್ಷ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ ಹಾಗೂ ವಿನಯ್ ರಾಜ್ ಆರೋಪಿಸಿದರು.

ಈ ಸಂದರ್ಭ ಆಡಳಿತ ಪಕ್ಷದ ಇತರ ಸದಸ್ಯರೂ ಎದ್ದು ನಿಂತು ವಿಪಕ್ಷದ ವಿರುದ್ಧ ಆರೋಪಗಳ ಸುರಿಮಳೆಗೈದರು. ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಜಗದೀಶ್, ಪೂರ್ಣಿಮಾ, ಸಂಗೀತಾ ನಾಯಕ್ ಸೇರಿದಂತೆ ಪ್ರತ್ಯಾರೋಪಿಸಿದ ಆಡಳಿತ ಪಕ್ಷದ ಸದಸ್ಯರು, ಮನಪಾದಿಂದ ಉತ್ತಮ ಆಡಳಿತ ನೀಡಲಾಗಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಬಳಿಕ ಒಂದೇ ಒಂದು ರೂಪಾಯಿ ಅಭಿವೃದ್ಧಿಗಾಗಿ ಬಂದಿಲ್ಲ. ಸರಕಾರ ಅಧಿಕಾರಿಗಳ ವರ್ಗಾವಣೆಯಲ್ಲೇ ನಿರತವಾಗಿದೆ ಎಂದು ಆರೋಪಿಸಿದರು.


ವಿಪಕ್ಷ ನಾಯಕ ಮಾತನಾಡುವಾಗ ಅಡ್ಡಿ ಪಡಿಸಿ ಹಕ್ಕುಚ್ಯುತಿ ಮಾಡಲಾಗಿದೆ ಎಂದು ವಿಪಕ್ಷ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು. ಆಡಳಿತ ಹಾಗೂ ವಿಪಕ್ಷ ಸದಸ್ಯರು ಮೈಕ್ ಇನ್ನೇನು ಸ್ಪೋಟಗೊಳ್ಳುವುದೋ ಎನ್ನುವ ರೀತಿಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದರು. ಒಂದು ಹಂತದಲ್ಲಿ ವಿಪಕ್ಷ ನಾಯಕ ಹಾಗೂ ಸದಸ್ಯರು ಮೇಯರ್ ಪೀಠದೆದುರು ತೆರಳಿ ಪ್ರತಿಪಕ್ಷದ ನಾಯಕರ ಹಕ್ಕನ್ನು ಕಸಿಯಲಾಗಿದೆ ಎಂದು ಆಕ್ಷೇಪಿಸಿದರು. ಅಷ್ಟು ಹೊತ್ತಿಗಾಗಲೇ ಸುಮಾರು ಒಂದೂವರೆ ತಾಸು ಕಳೆದಿತ್ತು. ಸದಸ್ಯರನ್ನು ನಿಯಂತ್ರಿಸಲು ವಿಫಲ ರಾದ ಮೇಯರ್ ಬೆಲ್ ಬಾರಿಸಿದರಾದರೂ ಸಭೆ ಮುಂದೂಡುವುದಾಗಿ ಘೋಷಣೆ ಮಾಡದೆ ಸದನದಿಂದ ಹೊರ ನಡೆದರು. ಆಡಳಿತ ಪಕ್ಷದ ಸದಸ್ಯರೂ ಸದನದಿಂದ ಹೊರನಡೆದರು.

ಬಳಿಕ ಸುಮಾರು 15 ನಿಮಿಷಗಳ ಬಳಿಕ ಮತ್ತೆ ಉಪ ಮೇಯರ್ ಹಾಗೂ ಸದಸ್ಯರ ಜತೆ ಸದನ ಪ್ರವೇಶಿಸಿದ ಮೇಯರ್ ಮನೋಜ್ ಕುಮಾರ್, ಐದು ವರ್ಷದ ಆಡಳಿತದ ಅನಿಸಿಕೆ ಹಂಚಿಕೊಳ್ಳಲು ಇಂದು ಸದಸ್ಯರಿಗೆ ಅವಕಾಶ ನೀಡಲಾಗಿತ್ತು. ವಿಪಕ್ಷ ನಾಯಕರು ಆರೋಪದಲ್ಲಿ ನಿರತರಾದ ಕಾರಣ ಸಭೆ ಮುಂದೂಡಬೇಕಾಯಿತು ಎನ್ನುತ್ತಿದ್ದಂತೆಯೇ, ವಿಪಕ್ಷ ನಾಯಕರು ಆರೋಪ ಮಾಡಿಲ್ಲ. ನೈಜ ವಿಚಾರವನ್ನು ಸದನದಲ್ಲಿ ಹೇಳುತ್ತಿರುವಾಗ ಅವರ ಧ್ವನಿ ಅಡಗಿಸುವ ಪ್ರಯತ್ನ ಆಗಿದೆ. ಆದರೆ ನಾಗರಿಕರ ಧ್ವನಿ ಅಡಗಿಸಲು ಆಗದು ಎಂದು ಸದಸ್ಯ ವಿನಯರಾಜ್ ಮೇಯರ್ ಮಾತಿಗೆ ಅಡ್ಡಿಪಡಿಸಿದರು.

ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕೊನೆಯ ಸಭೆಯನ್ನು ಅಡ್ಡಿಪಡಿಸುವ ನಿಟ್ಟಿನಲ್ಲಿ ಪೂರ್ವಯೋಜಿತ ವಾಗಿ ವಿಪಕ್ಷ ಸದಸ್ಯರು ಬಂದಿದ್ದಾರೆ. ನಾಳೆಯಿಂದ ಆಡಳಿತಾಧಿಕಾರಿ ಆಡಳಿತ ಬರಲಿದೆ. ಇವರು ಆಡಳಿತ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಯಾವುದೇ ಅಭಿವೃದ್ದಿ ಕಾರ್ಯ ಆಗಿಲ್ಲ ಎಂದು ಮಾತಿನ ಮೂಲಕ ಕೆಣಕಿದರು.


ಐದು ವರ್ಷಗಳಿಂದ ಏನೂ ಮಾಡಲಾಗದೆ ಇದೀಗ ರಾಜ್ಯ ಸರಕಾರವನ್ನು ದೂರುವ ಹಂತಕ್ಕೆ ಬಿಜೆಪಿ ಆಡಳಿತ ತಲುಪಿದೆ. ಇದಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪಟ್ಟು ಬಿಡದೆ ಪ್ರವೀಣ್ ಚಂದ್ರ ಆಳ್ವ ಮಾತಿನ ವರಸೆ ಮುಂದುವರಿಸಿ ದಾಗ ಪರಸ್ಪರ ಸದಸ್ಯರ ನಡುವೆ ಮಾತಿನ ಕೆಸರೆರಾಚ ಆರಂಭವಾಗಿ ಮತ್ತೆ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಮೇಯರ್ ಮನೋಜ್ ಕುಮಾರ್ ಸಭೆಯನ್ನು ನಿಯಂತ್ರಿಸಲು ಯತ್ನಿಸುತ್ತಾ, ತಾನು ಮಾತನಾಡಿದ ಬಳಿಕ ಎಲ್ಲರಿಗೂ ಅವಕಾಶ ನೀಡುತ್ತೇನೆ ಎಂದರೂ ಸದಸ್ಯರು ಪರಸ್ಪರ ಮಾತಿನಲ್ಲೇ ನಿರತರಾದರು.

ಕೊನೆಯ ಸಭೆಯಾದ ಕಾರಣ ಮೇಯರ್‌ರವರು ವಿಪಕ್ಷ ನಾಯಕರ ಮಾತನ್ನು ಪೂರ್ಣವಾಗಿ ಕೇಳಿದ ಬಳಿಕ ಉತ್ತರ ನೀಡಬೇಕು ಎಂದು ಹಿರಿಯ ಸದಸ್ಯ ಶಶಿಧರ್ ಹೆಗ್ಡೆ ಅವರು ಹೇಳಿದರಾದರೂ ಸಭೆ ನಿಯಂತ್ರಣಕ್ಕೆ ಬಾರದೆ ಗೊಂದಲದಲ್ಲೇ ಮುಂದುವರಿಯಿತು. ಈ ನಡುವೆ ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮಾತನಾಡಲು ಎದ್ದು ನಿಂತರಾದರೂ ಸದಸ್ಯರ ವಾಗ್ವಾದದಿಂದ ಅವಕಾಶ ದೊರಕದೆ ಸಭೆಯಿಂದ ಹೊರನಡೆದರು.

ಮತ್ತೆ ಮಧ್ಯ ಪ್ರವೇಶಿಸಿದ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿಯವರು, ಬಿಜೆಪಿ ಆಡಳಿತಾವಧಿಯ ಕೇಂದ್ರಹಾಗೂ ರಾಜ್ಯ ಸರಕಾರಗಳ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ನಗರದಲ್ಲಿ ಆಗಿದ್ದರೂ ಈ ರೀತಿ ಕೊನೆಯ ಸಭೆಯನ್ನು ಸುಗಮವಾಗಿ ನಡೆಯಲು ಬಿಡದೆ ರಾಜಕೀಯ ಮಾಡುತ್ತಿರುವರಿಗೆ ಜನರು ಖಂಡಿತಾ ಬುದ್ದಿ ಕಲಿಸುತ್ತಾರೆ ಎಂದರು.

ಈ ಸಂದರ್ಭ ಮತ್ತೆ ಕೆರಳಿದ ಪ್ರವೀಣ್ ಚಂದ್ರ ಆಳ್ವ, ಹೌದು, ಜನರು ನೋಡುತ್ತಿದ್ದಾರೆ. ನೀವು ಎಷ್ಟು ಸುಳ್ಳು ಹೇಳಿದ್ದೀರಿ ಎಂದು. ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿಯವರ ಮಹಾತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಕನಸನ್ನು ನುಚ್ಚು ನೂರು ಮಾಡಲಾಗಿದೆ. 1000 ಕೋಟಿ ರೂ. ಹಣವನ್ನು ಮನಪಾ ಆಡಳಿತ ಮುಳುಗಿಸಿದೆ. 1 ಕಿ.ಮೀ. ಉದ್ದದ ರಿವರ್ ಫ್ರಂಟ್ ಇನ್ನೂ ಮಾಡಲಾಗಿಲ್ಲ ಎಂದು ಆರೋಪಿಸಿದರು.

ಈ ನಡುವೆ ಮೇಯರ್‌ರವರು ಸದಸ್ಯರನ್ನು ಸಮಾಧಾನ ಪಡಿಸಲೆತ್ನಿಸಿ ಮಾತನಾಡಲು ಪ್ರಯತ್ನಿಸಿದರೂ ಮತ್ತೆ ವಿಪಕ್ಷ ನಾಯಕನಿಗೆ ಮೊದಲು ಮಾತನಾಡಲು ಅವಕಾಶ ನೀಡಬೇಕೆಂಬುದು ಪಟ್ಟು ಹಿಡಿದು ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಒತ್ತಾಯಿಸಿದರು. ಹೀಗೆ ಕೆಲಹೊತ್ತು ಗದ್ದಲದ ಬಳಿಕ ಇನ್ನೇನು ಸಭೆ ಆರಂಭವಾಗುತ್ತದೆ ಎನ್ನುತ್ತಿದ್ದಂತೆಯೇ ಮತ್ತೆ ಸದಸ್ಯರ ನಡುವೆ ವಾಗ್ವಾದ ಮುಂದುವರಿದಾಗ 1.30ರ ಸುಮಾರಿಗೆ ಮೇಯರ್ ಊಟದ ವಿರಾಮದೊಂದಿಗೆ ಸಭೆಯನ್ನು ಮುಂದೂಡಿದರು.

ಉಪ ಮೇಯರ್ ಭಾನುಮತಿ, ಆಯುಕ್ತ ರವಿಚಂದ್ರ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶಶಿಧರ್ ಉಪಸ್ಥಿತರಿದ್ದರು.

ಮಧ್ಯಾಹ್ನ ಊಟದ ಬಳಿಕ 3.30ರ ಹೊತ್ತಿಗೆ ಮುಂದುವರಿದ ಸಭೆಯಲ್ಲಿ ವಿಪಕ್ಷ ಸದಸ್ಯರ ವಿರೋಧದ ನಡುವೆ ಕೆಲ ಆಡಳಿತಾತ್ಮಕ ನಿರ್ಧಾರಗಳನ್ನು ಅಂಗೀಕರಿಸಲಾಯಿತು. ಬೋಳಾರ ವಾರ್ಡ್‌ನಲ್ಲಿರುವ ಗುಜ್ಜರಕೆರೆಯನ್ನು ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ನಿರ್ವಹಣೆಗೆ ನೀಡಲು ನಿರ್ಧರಿಸಲಾಯಿತು. ಈ ಕೆರೆಯ ನೀರು ಮಲಿನವಾಗದಂತೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ದೇವಸ್ಥಾನದ ಸುಪರ್ದಿಗೆ ವಹಿಸುವುದು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕೋರಿಕೆ ಪತ್ರಕ್ಕೆ ಒಪ್ಪಿಗೆ ಸೂಚಿಸುವ ನಿರ್ಣಯ ಕೈಗೊಳ್ಳಲಾಯಿತು.

ವಾರ್ಡ್ ಉಪ ಸಮಿತಿ ನಿಯಮ ಸರ್ಕಾರಕ್ಕೆ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚಿಸಲಾಗಿದ್ದು, ಇವುಗಳ ಸುಲಲಿತ ಕಾರ್ಯನಿರ್ವಹಣೆಗೆ ಎರಡು ಉಪ ನಿಯಮಗಳಿಗೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವೀರರಾಣಿ ಅಬ್ಬಕ್ಕ ರಸ್ತೆ ನಾಮಕರಣ ಪ್ರಸ್ತಾಪ

ವೆಲೆನ್ಸಿಯಾ 48ನೇ ವಾರ್ಡ್‌ನ ಪಂಪ್‌ವೆಲ್ ಜಂಕ್ಷನ್‌ನಿಂದ ಉಳ್ಳಾಲ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ವೀರರಾಣಿ ಅಬ್ಬಕ್ಕ ರಸ್ತೆ ಎಂದು ನಾಮಕರಣ ಮಾಡುವ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಮತ್ತು ಸ್ಥಳೀಯ ಪಾಲಿಕೆ ಸದಸ್ಯ ಸಂದೀಪ್ ಗರೋಡಿ ಮನವಿ ಸಲ್ಲಿಸಿದ್ದರು.

ಡಾ.ಅಂಬೇಡ್ಕರ್ ವೃತ್ತ ನಾಮಕರಣ

ಬಂಟ್ಸ್ ಹಾಸ್ಟೆಲ್‌ನಿಂದ ಬರುವ ರಸ್ತೆ, ಹಂಪನಕಟ್ಟೆಯಿಂದ ಬರುವ ಮೂಲ್ಕಿ ಸುಂದರರಾಂ ಶೆಟ್ಟಿ ರಸ್ತೆ ಹಾಗೂ ಶಿವರಾಮ ಕಾರಂತ ರಸ್ತೆ ಸೇರುವ ಜಂಕ್ಷನ್‌ನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣಕ್ಕೆ ತೀರ್ಮಾನಿಸಲಾಯಿತು. ಕಂಕನಾಡಿ ವೆಲೆನ್ಸಿಯಾ ವಾರ್ಡ್ ಉಜ್ಜೋಡಿ ನೆಕ್ಕರೆಮಾರ್ ರಸ್ತೆಗೆ ಬೊಮ್ಮಣ್ಣ ಪೂಜಾರಿ ರಸ್ತೆ ಎಂದು ನಾಮಕರಣಕ್ಕೆ ಸದಸ್ಯ ಸಂದೀಪ್ ಪ್ರಸ್ತಾಪಕ್ಕೆ ಸಮ್ಮತಿಸಲಾಯಿತು.

ಕರಾವಳಿ ವೃತ್ತಕ್ಕೆ ಶ್ರೀಸತ್ಯಸಾರಮಾನಿ ವೃತ್ತ ಹೆಸರು

ಕಂಕನಾಡಿಯ ಕರಾವಳಿ ವೃತ್ತಕ್ಕೆ ಶ್ರೀಸತ್ಯ ಸಾರಮಾನಿ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಮೇಯರ್ ಹಾಗೂ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವನಾ ಸಂಘದ ಮನವಿಗೆ ಒಪ್ಪಿಗೆ ಸೂಚಿಸಲಾಯಿತು.

ಉರ್ವಸ್ಟೋರ್ ಬಸ್ಟೇಂಡ್ ಸಮೀಪದ ಮಾನಸ ಮಂಟಪದಿಂದ ಶ್ರೀಸ್ವಾಮಿ ಅಯ್ಯಪ್ಪ ಭಕ್ತ ಸಮಿತಿ ಕಟ್ಟೆ(ದಡ್ಡಲ್‌ಕಾಡ್ ಕ್ರಾಸ್) ತನಕ ಹೊಸ ಕಾಂಕ್ರಿಟ್ ರಸ್ತೆಗೆ ಶ್ರೀಮಹಾಗಣಪತಿ ದೇವಸ್ಥಾನ ರಸ್ತೆ ಎಂದು ನಾಮಕರಣ ಮಾಡುವಂತೆ ವಾರ್ಡ್ ಸದಸ್ಯ ಗಣೇಶ್ ಹಾಗೂ ಶ್ರೀಮಹಾಗಣಪತಿ ಸೇವಾ ಸಮಿತಿಯ ಕೋರಿಗೆ ಒಪ್ಪಿಗೆ ಸೂಚಿಸಲಾಯಿತು. ಅಳಪೆ ವಾರ್ಡ್‌ನ ಕೋಡಿಕಲ್‌ನಿಂದ ದೆಕ್ಕಾಡಿ ವರೆಗಿನ ರಸ್ತೆಯನ್ನು ವೈದ್ಯನಾಥ ರಸ್ತೆ ಎಂದು ನಾಮಕರಣ ಮಾಡುವ ಸದಸ್ಯೆ ರೂಪಶ್ರೀ ಪೂಜಾರಿ ಪ್ರಸ್ತಾಪಕ್ಕೆ ಒಪ್ಪಿಗೆ ವ್ಯಕ್ತಪಡಿಸಲಾಯಿತು.

ಪಚ್ಚನಾಡಿ ಸಂತೋಷ್ ನಗರದಲ್ಲಿರುವ ಕೇಂದ್ರ ಮೈದಾನವನ್ನು ಸ್ಥಳೀಯ ವೀರ ಸಾವರ್ಕರ್ ಫ್ರೆಂಡ್ಸ್‌ಗೆ ಸ್ವಚ್ಛತಾ ನಿರ್ವಹಣೆಗೆ ಮಾತ್ರ ನೀಡಲು ಅನುಮೋದಿಸಲಾಯಿತು.



share
ವಾರ್ತಾಭಾರತಿ
ವಾರ್ತಾಭಾರತಿ
Next Story
X