Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಎಪ್ರಿಲ್ ಅಂತ್ಯದೊಳಗೆ...

ಮಂಗಳೂರು: ಎಪ್ರಿಲ್ ಅಂತ್ಯದೊಳಗೆ ಮೋತಿಮಹಲ್ ಬಂದ್ !

ವಾರ್ತಾಭಾರತಿವಾರ್ತಾಭಾರತಿ4 April 2025 8:18 PM IST
share
ಮಂಗಳೂರು: ಎಪ್ರಿಲ್ ಅಂತ್ಯದೊಳಗೆ ಮೋತಿಮಹಲ್ ಬಂದ್ !

ಮಂಗಳೂರು: ಭೂ ವಿವಾದದ ಹಿನ್ನೆಲೆಯಲ್ಲಿ ಮಂಗಳೂರಿನ ಮೊದಲ ಬಿಝಿನೆಸ್ ಹೋಟೆಲ್ ಮೋತಿ ಮಹಲ್ ಇದೀಗ ಮುಚ್ಚುವ ಹಂತಕ್ಕೆ ತಲುಪಿದ್ದು, ಎಪ್ರಿಲ್ ಅಂತ್ಯದೊಳಗೆ ಅದರ ಭೂ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಹೋಟೆಲ್ ಮೋತಿಮಹಲ್ ಅನ್ನು ಯಥಾ ಸ್ಥಿತಿಯಲ್ಲಿ ಜಮೀನಿನ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ. ಇದರೊಂದಿಗೆ 3 ಕೋಟಿ ರೂ. ಮೊತ್ತದ ಪರಿಹಾರಧನವನ್ನು ಅವರಿಗೆ ಪಾವತಿಸಬೇಕಾಗಿದೆ.

ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಪಕ್ಕದಲ್ಲಿರುವ ಹೋಟೆಲ್ ಮೋತಿಮಹಲ್ ಇರುವ ಜಮೀನಿನ ಒಡೆತನವು ಸದ್ಯ ಜೆಪ್ಪುವಿನ ಸಂತ ಅಂಥೋನಿ ವೃದ್ಧಾಶ್ರಮಕ್ಕೆ ಸೇರಿದೆ.

ಸ್ಥಳೀಯ ಚರ್ಚ್‌ನ ಆಡಳಿತ ಸಮಿತಿ ಮತ್ತು ಹೋಟೆಲ್ ಮಾಲಕರ ನಡುವೆ ಆರಂಭಗೊಂಡ ಕಾನೂನು ಸಮರವು ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸುದೀರ್ಘ ಕಾನೂನು ಸಮರದಲ್ಲಿ ಅದರ ಮೂಲ ಭೂಮಾಲಕರಿಗೆ ಜಯವಾಗಿದೆ.

ಮಂಗಳೂರಿನ ಹೃದಯಭಾಗವಾಗಿರುವ ಹಂಪನಕಟ್ಟೆಯಲ್ಲಿ ಹೋಟೆಲ್ ಮೋತಿ ಮಹಲ್‌ ಅನ್ನು ಕುಡುಪಿ ಎಸ್‌. ಶೆಣೈ ಅವರು ಸ್ಥಾಪಿಸಿದ್ದರು. ಹಲವು ವರ್ಷಗಳ ಬಳಿಕ ಮಂಗಳೂರಿನ ಖ್ಯಾತ ಉದ್ಯಮಿ ಎ.ಜೆ. ಶೆಟ್ಟಿ ಮೋತಿ ಮಹಲ್‌ ಅನ್ನು ಖರೀದಿಸಿದ್ದರು.

ಆ ಕಾಲದಲ್ಲೇ ಜಿಮ್ ಮತ್ತು ಈಜುಕೊಳ ಸಹಿತ ವಿಲಾಸಿ ಸೌಲಭ್ಯಗಳಿದ್ದ ಪ್ರಪ್ರಥಮ ಹೋಟೆಲ್ ಮೋತಿ ಮಹಲ್. ಪ್ರಸಿದ್ಧ ಮಂಗಳ ಮಲ್ಟಿ ಕುಸಿನ್ ರೆಸ್ಟೋರೆಂಟ್, ಮಧುವನ್ ವೆಜ್ ರೆಸ್ಟೋರೆಂಟ್, ಮೆಹ್ಫಿಲ್ ಬಾರ್, ತೈಚಿನ್ ಚೈನೀಸ್ ರೆಸ್ಟೊರೆಂಟ್, ಮೋತಿ ಸ್ವೀಟ್ಸ್ ವಿಭಾಗ, ಶೀತಲ್ ಹೆಸರಿನ ಈಜುಕೊಳ ಹೊಂದಿದ್ದ ಹೋಟೆಲ್ ಮೋತಿಮಹಲ್ ಮಂಗಳೂರಿನ ಪ್ರಪ್ರಥಮ ಬಿಝಿನೆಸ್ ಹಾಗು ಲಕ್ಸುರಿ ಹೋಟೆಲ್ ಆಗಿ ಪ್ರಸಿದ್ಧಿಯನ್ನು ಪಡೆದಿತ್ತು.

ನಗರದ ಆಧುನಿಕ ಜೀವನಶೈಲಿಗೆ ಪೂರಕವಾಗಿರುವ ಹೋಟೆಲ್ನಲ್ಲಿ 90 ಕೊಠಡಿಗಳಿವೆ. 1,000 ಮಂದಿಗೆ ಆಸನಗಳ ಸಭಾಂಗಣವಿದೆ. ಕಳೆದ ಸುಮಾರು ಆರು ದಶಕಗಳಲ್ಲಿ ಹೋಟೆಲ್ ಮೋತಿ ಮಹಲ್ ಕೇವಲ ಹೋಟೆಲ್ ಮಾತ್ರವಾಗಿರದೆ ಮಂಗಳೂರಿನ ಒಂದು ಪ್ರಮುಖ ಹೆಗ್ಗುರುತಾಗಿ ಗುರುತಿಸಲ್ಪಟ್ಟಿದೆ. ಕುಟುಂಬ ಸಮೇತ ಹೋಗುವ ಹೋಟೆಲ್, ಬಿಝಿನೆಸ್ ಮೀಟಿಂಗ್ ಗಳಿಗೆ , ಶುಭ ಸಮಾರಂಭಗಳಿಗೆ , ಪಾರ್ಟಿಗಳಿಗೆ ಇತ್ಯಾದಿ ಎಲ್ಲ ರೀತಿಯ ಸಣ್ಣ ದೊಡ್ಡ ಕಾರ್ಯಕ್ರಮಗಳಿಗೆ ಮೋತಿ ಮಹಲ್‌ಗೆ ಜನ ಹೋಗುತ್ತಿದ್ದರು. ಮೋತಿ ಮಹಲ್‌ನ ವೆಜ್ ರೆಸ್ಟೋರೆಂಟ್ ಇವತ್ತಿಗೂ ಹಿಂದಿನ ಖ್ಯಾತಿಯನ್ನು ಉಳಿಸಿಕೊಂಡಿದೆ. ಎಪ್ರಿಲ್ ಕೊನೆಗೆ ಇದೆಲ್ಲವೂ ನೆನಪಾಗಿ ಮಾತ್ರ ಉಳಿಯಲಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X