ಸುಭದ್ರ ಕುಟುಂಬ ಇಂದಿನ ಸಮಾಜದ ಅಗತ್ಯ: ಹುಸೈನ್ ಸಲಫಿ
ಅಡ್ಯಾರ್ ಕಣ್ಣೂರಿನಲ್ಲಿ ಫ್ಯಾಮಿಲಿ ಕಾನ್ಫರೆನ್ಸ್ ಕಾರ್ಯಕ್ರಮ

ಮಂಗಳೂರು: ಅಡ್ಯಾರ್ ಕಣ್ಣೂರಿನಲ್ಲಿ ಇಂದು ನಡೆದ ಫ್ಯಾಮಿಲಿ ಕಾನ್ಫರೆನ್ಸಿನಲ್ಲಿ ಮುಖ್ಯ ಭಾಷಣ ಮಾಡಿದ ಮೌಲವಿ ಹುಸೈನ್ ಸಲಫಿ ಶಾರ್ಜಾ ಮಾತನಾಡಿ, ಸಂತುಷ್ಟ ಕುಟುಂಬಕ್ಕೆ ವಿಶ್ವಾಸ ಪರಿಶುದ್ಧತೆಯೇ ಬುನಾದಿಯಾಗಿದೆ, ಹಾಗಾದಲ್ಲಿ ಮಾತ್ರವೇ ನೈತಿಕತೆ ಹೊಂದಿರುವ ಸಮಾಜವನ್ನು ಸೃಷ್ಟಿಸಲು ಸಾಧ್ಯ, ಹೀಗೆ ಕುಟುಂಬದಲ್ಲಿ ಒಳಿತುಂಟಾದರೆ, ಒಂದು ಉತ್ತಮ ಸಮಾಜ ನಿರ್ಮಾಣವಾಗುವುದು, ಉತ್ತಮ ಸಮಾಜ ಈ ನಾಡಿಗೆ, ರಾಷ್ಟ್ರದ ಅಭಿವೃದ್ಧಿಗೆ ಅತೀ ಅಗತ್ಯ ಎಂದರು.
ಕರ್ನಾಟಕ ಸಲಫಿ ಅಸೋಸಿಯೇಶನ್ (ರಿ), ಮಂಗಳೂರು ಮತ್ತು ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಷನ್ ಜಂಟಿಯಾಗಿ ಹಮ್ಮಿಕೊಂಡಿದ್ದ ಫ್ಯಾಮಿಲಿ ಕಾನ್ಫರೆನ್ಸ್ ನಲ್ಲಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಪೀಕರ್ ಯು ಟಿ ಖಾದರ್ ಕೆ ಎಸ್ ಎ ಯು ಜನಪರ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಉನ್ನತ ಅಂಕ ಗಳಿಸಿದ ಅಲ್ ಬಯಾನ್ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಆರಂಭದಲ್ಲಿ ಕರ್ನಾಟಕ ಸಲಫಿ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಡಾ. ಹಫೀಝ್ ಸ್ವಲಾಹಿ ಮಾತನಾಡುತ್ತಾ ವಕ್ಫ್ ಆಸ್ತಿಗಳಲ್ಲಿ ನಮ್ಮ ಪೂರ್ವಜರು ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ದಾನ ಮಾಡಿದ ಚರಾಸ್ಥಿ-ಸ್ಥಿರಾಸ್ಥಿಗಳಾಗಿವೆ. ಆದರೆ ಭಾರತೀಯ ಮನಸ್ಸುಗಳನ್ನು ಒಡೆದು ಅಧಿಕಾರದ ಗದ್ದುಗೆಯಲ್ಲಿ ಮುಂದುವರಿಯುವ ಪ್ರಯತ್ನದ ಭಾಗ ಮಾತ್ರವೇ ಆಗಿದೆ ಇಂದಿನ ನೂತನ ವಕ್ಫ್ ಆಕ್ಟ್ ಎಂದರು. ಇದನ್ನು ಕರ್ನಾಟಕ ಸಲಫಿ ಅಸೋಸಿಯೇಶನ್ ಬಲವಾಗಿ ವಿರೋಧಿಸುತ್ತದೆ. ಕುಟುಂಬ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಎಂಬ ವಿಷಯದಲ್ಲಿ ಶಿಹಾಬ್ ಎಡಕ್ಕರ ಮಾತನಾಡಿದರು.
ನಂತರ ಮಾಡನಾಡಿದ ಕರ್ನಾಟಕ ಸಲಫಿ ಅಸೋಸಿಯೇಶನ್ ಇದರ ಪ್ರಧಾನ ಕಾರ್ಯದರ್ಶಿ ಯಾಸಿರ್ ಅಲ್ ಹಿಕಮಿ ಸಂಘಟನೆಯ ಮುಂದಿನ ಯೋಜನೆಗಳನ್ನು ವಿವರಿಸಿದರು.
ನಂತರ Wisdom Islamic Organisation ಇದರ ಪ್ರಧಾನ ಕಾರ್ಯದರ್ಶಿ TK ಅಶ್ರಫ್ ಮಾತನಾಡಿ ಕುಟುಂಬದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯ ಈ ಹಿಂದೆಂದಿಗಿಂತ ಅತೀ ಹೆಚ್ಚಿನ ಅಗತ್ಯವಿದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಲ್ ಬಯಾನ್ ಅರೇಬಿಕ್ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಇಜಾಝ್ ಸ್ವಲಾಹಿ, ನಝೀರ್ ಸಲಫಿ, ಹಸೈನಾರ್ ಸ್ವಲಾಹಿ, ನಿಶಾದ್ ಸ್ವಲಾಹಿ, ಅಶ್ಫಾಕ್ ಉಳ್ಳಾಲ್, ಸೈಯದ್ ಶಾಝ್, ಮುಹಮ್ಮದ್ ಬಜಾಲ್, ಸಿರಾಜ್ ಸಜಿಪ, ಅಬ್ದುಲ್ ರಶೀದ್ ಇಂಜಿನಿ ಯರ್, ಫಿರೋಝ್ ಉಳ್ಳಾಲ್, ಹಿಂದೂಸ್ತಾನ್ ಬಾವಾ, ಕನ್ನಡ ಕುರ್'ಆನ್ ಅನುವಾದಕ ಹಂಝ ಪುತ್ತೂರು ವೇದಿಕೆಯಲ್ಲಿದ್ದರು. ಆರಂಭದಲ್ಲಿ ಅಬ್ದುಲ್ಲ ಫರ್ಹಾನ್ ಸ್ವಾಗತಿಸಿದರು. ಖಲೀಲ್ ತಲಪಾಡಿ ಧನ್ಯವಾದಗೈದರು. ಅಹ್ಮದ್ ಎಸ್ ಎಂ ಕಾರ್ಯಕ್ರಮ ನಿರೂಪಿಸಿದರು.







