ಉಳ್ಳಾಲ ನಗರಸಭೆಯ ನಿರ್ಗಮನ ಪೌರಾಯುಕ್ತ ಮತ್ತಡಿಗೆ ಬೀಳ್ಕೊಡುಗೆ

ಉಳ್ಳಾಲ: ನಗರಸಭೆಯ ನಿರ್ಗಮನ ಪ್ರಭಾರ ಪೌರಾಯುಕ್ತ ಮತ್ತಡಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಗರ ಸಭೆ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಕೌನ್ಸಿಲರ್ ಗಳು ಮತ್ತಡಿಯವರ ಕರ್ತವ್ಯ ನಿರ್ವಹಣೆ, ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.
ನೂತನ ಪೌರಾಯುಕ್ತ ನವೀನ್ ಹೆಗ್ಡೆಯವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿದ ನಿರ್ಗಮನ ಪ್ರಭಾರ ಪೌರಾಯುಕ್ತ ಮತ್ತಡಿ, ತಮ್ಮ ಸೇವಾನುಭವದ ಬಗ್ಗೆ ಮಾತನಾಡಿದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸಪ್ನಾ ಹರೀಶ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಶ್ರಫ್, ಕಂದಾಯ ನಿರೀಕ್ಷಕ ಚಂದ್ರಹಾಸ್, ಸಮುದಾಯ ಸಂಘಟಕ ರೋಹಿನಾಥ್, ಕೌನ್ಸಿಲರ್ ಖಲೀಲ್, ನಮಿತಾ, ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.
Next Story