ಹತ್ಯೆಗೀಡಾದ ಅಬ್ದುಲ್‌ರಹಿಮಾನ್ ಮನೆಗೆ ಬಿ.ಕೆ.ಹರಿಪ್ರಸಾದ್ ಭೇಟಿ

ಮಂಗಳೂರು: ಕೊಳತ್ತಮಜಲಿನಲ್ಲಿ ಪರಿಚಿತರಿಂದಲೇ ಮೇ 27ರಂದು ಹತ್ಯೆಯಾಗಿರುವ ಪಿಕ್‌ಅಫ್ ಚಾಲಕ ಅಬ್ದುಲ್ ರಹಿಮಾನ್ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಗುರುವಾರ ಭೇಟಿ ನೀಡಿದರು.
ಈ ಸಂದರ್ಭ ಅವರು ಅಬ್ದುಲ್ ರಹಿಮಾನ್ ಅವರ ಮನೆ ಮಂದಿಗೆ ಸಾಂತ್ವನ ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕೆ.ಕೆ. ಶಾಹುಲ್ ಹಮೀದ್ , ಅಬ್ಬಾಸ್ ಅಲಿ ಬೋಳಂತೂರು, ಬೇಬಿ ಕುಂದರ್, ಕೊಳತ್ತಮಜಲು ಮಸೀದಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಅಬ್ದುಲ್ ರಹಿಮಾನ್ ಅವರೊಂದಿಗೆ ಹಲ್ಲೆಗೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ನೇಹಿತ ಖಲಂದರ್ ಶಾಫಿ ಅವರನ್ನು ಇದೇ ಸಂದರ್ಭದಲ್ಲಿ ಭೇಟಿಯಾಗಿ ಅವರಲ್ಲಿ ಮಾತನಾಡಿ, ಧೈರ್ಯ ತುಂಬಿದರು.
ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಅಬ್ದುಲ್ ರಹಿಮಾನ್ ತಂದೆ ಅಬ್ದುಲ್ ಖಾದರ್ ಅವರು ಬಿ.ಕೆ.ಹರಿಪ್ರಸಾದ್ ಅವರಲ್ಲಿ ಮನವಿ ಮಾಡಿದರು.
ಅಬ್ದುಲ್ ರಹಿಮಾನ್ ಸಹೋದರ ಹನೀಫ್ ಕೊಳತ್ತಮಜಲು ಅವರು ಮೇ 27ರ ಘಟನೆಯ ಬಗ್ಗೆ ಹರಿಪ್ರಸಾದ್ ಅವರಿಗೆ ವಿವರಿಸಿದರು.







