ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಸಮಿತಿ ವಿಸ್ತರಣೆ

ತ್ವಾಖಾ ಅಹ್ಮದ್ ಮುಸ್ಲಿಯಾರ್ - ಅಬ್ದುಲ್ ಹಮೀದ್ ಮುಸ್ಲಿಯಾರ್
ಮಂಗಳೂರು: ರಾಜ್ಯದ ಮುಸ್ಲಿಂ ಸಮುದಾಯದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಪ್ರಾಯೋಗಿಕ ಮಾರ್ಗರೇಖೆಗಳನ್ನು ಸಿದ್ಧಪಡಿಸಿ ಸಮುದಾಯಕ್ಕೆ ನಾಯಕತ್ವ ನೀಡಲು ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಶೈಖುನಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರ ನೇತೃತ್ವದಲ್ಲಿ ರಚಿಸಿದ ಕರ್ನಾಟಕ ಉಲಮಾ ಕೋ-ಆರ್ಡಿನೇಷನ್ ಇದರ ವಿಶೇಷ ಸಭೆಯು ಕಂಕನಾಡಿ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಸೈಯದ್ ಇಸ್ಮಾಯಿಲ್ ಹಾದಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆದು ಮುಂದಿನ ಕಾರ್ಯ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಸಮಿತಿಯನ್ನು ಕೆಳಗಿನಂತೆ ವಿಸ್ತರಣೆ ಮಾಡಲಾಯಿತು.
ನಿರ್ದೇಶಕರಾಗಿ:-
* ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ (ಖಾಝಿ ಮಂಗಳೂರು)
* ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ (ಖಾಝಿ ಉಡುಪಿ)
* ಸೈಯದ್ ಝೖನುಲ್ ಅಬಿದೀನ್ ತಂಙಳ್ ಅಲ್ ಬುಖಾರಿ ದುಗ್ಗಲಡ್ಕ
* ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್
* ಬಿ ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ
* ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ
ಅಧ್ಯಕ್ಷರು : ಸೈಯದ್ ಇಸ್ಮಾಯಿಲ್ ತಂಙಳ್ ಮದನಿ ಅಲ್ ಹಾದಿ ಉಜಿರೆ
ಪ್ರಧಾನ ಕಾರ್ಯದರ್ಶಿ: ಕೆ ಪಿ ಮುಹಮ್ಮದ್ ಶರೀಫ್ ಫೈಝಿ ಕಡಬ
ಕೋಶಾಧಿಕಾರಿ: ಎನ್ ಕೆ ಮುಹಮ್ಮದ್ ಶಾಫಿ ಸಅದಿ ಬೆಂಗಳೂರು
ಉಪಾಧ್ಯಕ್ಷರು : ಕೆ ಎಂ ಉಸ್ಮಾನುಲ್ ಫೈಝಿ ತೋಡಾರ್, ಯು ಕೆ ಮುಹಮ್ಮದ್ ಸಅದಿ ವಳವೂರು, ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ.
ಕಾರ್ಯದರ್ಶಿಗಳು : ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್, ಕೆ ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು, ಕೆ ಎಲ್ ಉಮರ್ ದಾರಿಮಿ.
ಸದಸ್ಯರು: ಸೈಯದ್ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯ, ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಮೂಸ ದಾರಿಮಿ ಕಕ್ಕಿಂಜೆ, ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಮುಹಮ್ಮದ್ ರಫೀಕ್ ಹುದವಿ ಕೋಲಾರಿ, ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಮುಹಮ್ಮದ್ ಅನೀಸ್ ಕೌಸರಿ ಕುಂಬ್ರ, ಉಮರ್ ದಾರಿಮಿ ಸಾಲ್ಮರ, ಎನ್ ಎ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಸಿದ್ದೀಖ್ ದಾರಿಮಿ ಕಡಬ, ಕೆ ಕೆ ಎಂ ಕಾಮಿಲ್ ಸಖಾಫಿ ಸುರಿಬೈಲ್, ಖಾಸಿಂ ದಾರಿಮಿ ಸವಣೂರು, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಅಬೂಸ್ವಾಲಿಹ್ ಫೈಝಿ ತುಂಬೆ, ಸಿದ್ದೀಕ್ ಕೆ ಎಂ ಮೊಂಟುಗೋಳಿ, ಮುಹಮ್ಮದ್ ನವವಿ ಮುಂಡೋಳೆ, ಅಬ್ದುಲ್ ರಹ್ಮಾನ್ ರಝ್ವಿ ಉಡುಪಿ, ಅಶ್ರಫ್ ಫೈಝಿ ಸೋಮವಾರಪೇಟೆ, ಸಿನಾನ್ ಸಖಾಫಿ ಅಜಿಲಮೊಗರ್ ಇವರನ್ನು ಆರಿಸಲಾಯಿತು.
ಸಮಾರಂಭದಲ್ಲಿ ಸೈಯದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನ ಶಾಫಿ ಸಅದಿ ಉದ್ಘಾಟನೆ ಮಾಡಿದರು. ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೖನೀ ಕಾಮಿಲ್ ಸ್ವಾಗತಿಸಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಧನ್ಯವಾದ ಸಲ್ಲಿಸಿದರು.







