ಮಂಗಳೂರು: ಯೆನ್‌ಮಾರ್ಕ್ ಬಿಲ್ಡರ್ಸ್‌ನ ‘ರಿವರ್ ಫ್ರಂಟ್ ’ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಜೂ.12: ನಗರದ ಹೊರವಲಯದ ಜಪ್ಪಿನಮುಗೇರುವಿನಲ್ಲಿ ನಿರ್ಮಿಸಲಾದ ಯೆನ್‌ಮಾರ್ಕ್ ಬಿಲ್ಡರ್ಸ್‌ನ ವಸತಿ ಸಮುಚ್ಚಯ 'ರಿವರ್ ಫ್ರಂಟ್' ಗುರುವಾರ ಉದ್ಘಾಟನೆಗೊಂಡಿತು.
ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು ವಸತಿ ಸಮುಚ್ಚಯದ ಮುಖ್ಯ ದ್ವಾರವನ್ನು ಉದ್ಘಾಟಿಸಿ ಮಾತನಾಡಿ ‘ ಜಪ್ಪಿನಮುಗೇರು 40 ವರ್ಷಗಳ ಹಿಂದೆ ಕುಗ್ರಾಮವಾಗಿತ್ತು. ಇವತ್ತು ಬಹಳಷ್ಟು ಅಭಿವೃದ್ಧಿಯಾಗಿದೆ. ಇಲ್ಲಿ ಇಷ್ಟೊಂದು ದೊಡ್ಡದಾಗ ಕಟ್ಟಡ ತಲೆ ಎತ್ತುವಲ್ಲಿ ಯೆನ್‌ಮಾರ್ಕ್ ಬಿಲ್ಡರ್ಸ್‌ನ ಎಂ.ಹುಸೈನ್ (ನೂರ್) ತುಂಬಾ ಶ್ರಮಪಟ್ಟಿದ್ದಾರೆ. ಕೈಗೆಟುಕುವ ದರದಲ್ಲಿ ಜನರಿಗೆ ಅಗತ್ಯದ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವತ್ತು ನಮ್ಮಲ್ಲಿ ಮನೆಯ ಕೊರತೆ ಇದೆ. ವಸತಿ ಸಮುಚ್ಚಯ ನಿರ್ಮಾಣ ತುಂಬಾ ಕಷ್ಟದ ಕೆಲಸ. ಸರಕಾರದ ಪ್ರೋತ್ಸಾಹ ಸಿಗುತ್ತಿಲ್ಲ. ಕಟ್ಟಡ ನಿರ್ಮಿಸುವಾಗ ಆನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ವಿದೇಶದಲ್ಲಿ ಅಂತಹ ಸಮಸ್ಯೆ ಇಲ್ಲ. ಅಲ್ಲಿನ ಸರಕಾರಗಳು ಪ್ರೋತ್ಸಾಹ ನೀಡುತ್ತದೆ ಎಂದರು.
ರಿವರ್ ಫ್ರಂಟ್ ಎಲ್ಲರಿಗೂ ಆಶೀರ್ವಾದ ಕೊಡುವ ತಾಣವಾಗಲಿ ಎಂದು ಪಾಲೇಮಾರ್ ಹಾರೈಸಿದರು. ಬಿ. ಬ್ಲಾಕ್‌ನ ಮುಖ್ಯ ಬಾಗಿಲನ್ನು ಎಕ್ಸ್‌ಪರ್ಟೈಸ್‌ನ ಸಿಒಒ ಕೆ.ಎಸ್.ಶೇಕ್ ಕರ್ನಿರೇ ಉದ್ಘಾಟಿಸಿ ಶುಭ ಹಾರೈಸಿದರು.
ಕಟ್ಟಡದ ಲಿಫ್ಟ್‌ನ್ನು ಮಂಗಳೂರು ಬಿಸಿಸಿಐ ಅಧ್ಯಕ್ಷ ಎಸ್‌ಎಂ ರಶೀದ್ ಹಾಜಿ ಉದ್ಘಾಟಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಭಾಸ್ಕರ್ ರಾವ್ ಕಿಡ್ಸ್ ಪ್ಲೇಯಿಂಗ್ ಏರಿಯಾ ವನ್ನು, ಹಸನ್ ಬಿಲ್ಡ್ ಕಾನ್‌ನ ಆಡಳಿತ ನಿರ್ದೇಶಕ ಹಸನ್ ಸಜ್ಜಾದ್ ಎಚ್‌ಎಚ್ ಈಜುಕೊಳವನ್ನು ಉದ್ಘಾಟಿಸಿದರು.
ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮನಪಾ ಮಾಜಿ ಸದಸ್ಯೆ ವೀಣಾ ಮಂಗಳ , ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅರ್ಕಿಟೆಕ್ ರಿಯಾಝ್ ಆಲಮ್ ಮುಖ್ಯ ಅತಿಥಿಯಾಗಿದ್ದರು.
ಯೆನ್‌ಮಾರ್ಕ್ ಬಿಲ್ಡರ್ಸ್‌ನ ಮಾಲಕರಾದ ಎಂ. ಹುಸೈನ್ (ನೂರ್) ಮತ್ತು ಮುಹಮ್ಮದ್ ಮುನೀರ್ ಗುಲಾಮ್ ಅತಿಥಿಗಳನ್ನು ಸ್ವಾತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಏಳು ಅಂತಸ್ತುಗಳ ಎ ಮತ್ತು ಬಿ ಎರಡು ಬ್ಲಾಕ್‌ಗಳನ್ನು ಹೊಂದಿರುವ ಕಟ್ಟಡದಲ್ಲಿ ಪ್ರತಿಯೊಂದು ಬ್ಲಾಕ್ ನಲ್ಲೂ ತಲಾ 28ರಂತೆ ಒಟ್ಟು 56 ಮನೆಗಳಿವೆ. ವಸತಿ ಸಮುಚ್ಚಯವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.







