ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ್ ಪತನ: ಮಂಗಳೂರು ವಿಮಾನ ದುರಂತವನ್ನು ನೆನಪಿಸುವ ಅವಘಡ

PC : PTI
ಮಂಗಳೂರು, ಜೂ.12: ಬಜ್ಪೆ ಕೆಂಜಾರಿನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿ 15 ವರ್ಷಗಳಾಗುವಷ್ಟರಲ್ಲಿ ಇನ್ನೊಂದು ದುರಂತ ಸಂಭವಿಸಿದೆ.
ಗುಜರಾತಿನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 242 ಮಂದಿ ಮೃತಪಟ್ಟಿದ್ದಾರೆ. ಒಬ್ಬರು ಬದುಕುಳಿದಿದ್ದಾರೆ.
2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಬಜ್ಪೆ ಕೆಂಜಾರಿನ ಮಂಗಳೂರು ಅಂತರ್ ರಾಷ್ಟ್ರೀಯ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಇಳಿಯುವ ವೇಳೆ ಪತನ ಗೊಂಡು 8 ಮಂದಿ ಸಿಬ್ಬಂದಿ ಸಹಿತ 158 ಮಂದಿ ಮೃತಪಟ್ಟಿದ್ದರು. ಲ್ಯಾಂಡ್ ಆಗುವ ಸಂದರ್ಭ ರನ್ವೇ ಯಿಂದ ಜಾರಿದ ವಿಮಾನವು ಪ್ರಯಾಣಿಕರ ಕಣ್ಣೆದುರೇ ಇಬ್ಭಾಗಗೊಂಡಿತ್ತು. ಈ ಪೈಕಿ 8 ಮಂದಿ ಜೀವದ ಹಂಗು ತೊರೆದು ಜಿಗಿದು ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಪೈಲಟ್ ಮತ್ತು ಸಿಬ್ಬಂದಿ ಸಹಿತ ವಿಮಾನದಲ್ಲಿದ್ದ 158 ಮಂದಿ ಕೊನೆಯುಸಿರೆಳೆದಿದ್ದರು.
ಈಗ ಅಂತದ್ದೆ ಇನ್ನೊಂದು ದೊಡ್ಡ ದುರಂತ ಅಹಮದಾಬಾದ್ ನಲ್ಲಿ ಸಂಭವಿಸಿದೆ.
Next Story





