ಸುರತ್ಕಲ್: ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ಸಮಾಲೋಚನಾ ಸಭೆ

ಸುರತ್ಕಲ್: ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸುರತ್ಕಲ್ ವತಿಯಿಂದ SMA & SJM ಸಮಾಲೋಚನಾ ಸಭೆ ಮಂಗಳವಾರ ಬೆಳಿಗ್ಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು SMA ಸುರತ್ಕಲ್ ರೀಜಿನಲ್ ಅಧ್ಯಕ್ಷರಾದ ಮನ್ಸೂರ್ ಅಲಿ ರಯ್ಯಾನ್ ಅವರು ವಹಿಸಿದ್ದರು. SMA ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಎ.ಅಹ್ಮದ್ ಬಶೀರ್ ಪಂಜಿಮೊಗರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಯಲು ಮತ್ತು ಮಾದಕ ವಸ್ತುಗಳ ಬಳಕೆಯಿಂದ ನಮ್ಮ ಮಕ್ಕಳನ್ನು ದೂರ ಸರಿಸಲು ಧಾರ್ಮಿಕ ವಿದ್ಯೆ ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಸುನ್ನೀ ಬೋರ್ಡ್ ಮುಫತ್ತಿಷರಾದ ಅಬ್ದುಲ್ ಹಮೀದ್ ಮದನಿ, ಮಕ್ಕಳ ವಿದ್ಯಾಭ್ಯಾಸದ ಕುರಿತು ಮುಖ್ಯ ಪ್ರಭಾಷಣ ಮಾಡಿದರು. SMA ಸುರತ್ಕಲ್ ರೀಜಿನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಮದನಿ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಈ ಸಂದರ್ಭ ಸಭೆಯ ವೀಕ್ಷಕರಾದ SMA ಝೋನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬದ್ರಿಯಾ ನಗರ್, SMA ರಾಜ್ಯ ಸದಸ್ಯರಾದ ಇಕ್ಬಾಲ್ ಕೃಷ್ಣಾಪುರ, SJM ಸುರತ್ಕಲ್ ರೇಂಜ್ ಪಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ,SMA ಸುರತ್ಕಲ್ ಝೋನಲ್ ಕಾರ್ಯದರ್ಶಿ ಹಬೀಬುರ್ರಹ್ಮಾನ್ ಸಖಾಫಿ, ಕೃಷ್ಣಾಪುರ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ನಝೀರ್ ಹಾಜಿ, SMA ಸುರತ್ಕಲ್ ರೀಜಿನಲ್ ಉಪಾಧ್ಯಕ್ಷರಾದ ಇಬ್ರಾಹಿಮ್, NMPT ಉಪಾಧ್ಯಕ್ಷರಾದ ಬಶೀರ್ ಅಹ್ಮದ್, ಕೋಶಾಧಿಕಾರಿ ಅಮೀರುದ್ದೀನ್ 3ನೇ ಬ್ಲಾಕ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಸಖಾಫಿ, ಜೊತೆ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ SPT, ಕೃಷ್ಣಾಪುರ 4ನೇ ಬ್ಲಾಕ್ ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಂತಾದವರು ಉಪಸ್ಥಿತರಿದ್ದರು.
ಉಮರುಲ್ ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ಮುಹಮ್ಮದ್ ಅನ್ಸಾರ್ ವಂದಿಸಿದರು.







