Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ದ.ಕ.ಜಿಪಂ ಸಭಾಂಗಣದಲ್ಲಿ ಮೊಳಗಿದ...

ದ.ಕ.ಜಿಪಂ ಸಭಾಂಗಣದಲ್ಲಿ ಮೊಳಗಿದ ಸೌಹಾರ್ದತೆ: ಜನಪ್ರತಿನಿಧಿಗಳು, ಧಾರ್ಮಿಕ- ಸಾಂಸ್ಕೃತಿಕ ಮುಖಂಡರು, ಪಕ್ಷದ ನೇತಾರರು ಭಾಗಿ

ವಾರ್ತಾಭಾರತಿವಾರ್ತಾಭಾರತಿ9 July 2025 7:45 PM IST
share
ದ.ಕ.ಜಿಪಂ ಸಭಾಂಗಣದಲ್ಲಿ ಮೊಳಗಿದ ಸೌಹಾರ್ದತೆ: ಜನಪ್ರತಿನಿಧಿಗಳು, ಧಾರ್ಮಿಕ- ಸಾಂಸ್ಕೃತಿಕ ಮುಖಂಡರು, ಪಕ್ಷದ ನೇತಾರರು ಭಾಗಿ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಲ ಸಮಯದ ಹಿಂದೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ - ಸಾಂಸ್ಕೃತಿಕ ಸಂಘಟನೆಗಳು ಹಾಗೂ ಪಕ್ಷಗಳ ಮುಖಂಡರ ಸೌಹಾರ್ದತೆಯ ಮಾತುಗಳಿಗೆ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣ ಸಾಕ್ಷಿಯಾಯಿತು.

ಗೃಹ ಸಚಿವ ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದವರೆಲ್ಲರೂ ಜಿಲ್ಲೆಯ ಸೌಹಾರ್ದತೆಯನ್ನು ಮರುಸ್ಥಾಪಿಸುವ ಕುರಿತಂತೆ ಸಲಹೆ, ಕ್ರಮಗಳ ಬಗ್ಗೆ ಗಮನ ಸೆಳೆದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪಕ್ಷಗಳು ಹಾಗೂ ಜನಪ್ರತಿನಿಧಿಗಳ ರಾಜಕೀಯ ಅಜೆಂಡಾ ದ್ವೇಷಕ್ಕೆ ಕಾರಣವಾಗಬಾರದು ಎಂದರು.

ಕಾನೂನು ಉಲ್ಲಂಘಿಸಿದವರಿಗೆ ಬೆಂಬಲ ನೀಡುವ ಕೆಲಸ ಸರಕಾರ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಭಿನ್ನಭಿಪ್ರಾಯಗಳನ್ನು ದೂರವಿರಿಸಿ ಸಾಮರಸ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜತೆಗೂಡಿಕೊಂಡು ಪರಸ್ಪರ ಮಾತನಾಡಿಕೊಂಡು ಒಗ್ಗಟ್ಟಿನಿಂದ ಸೌಹಾರ್ದತೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪ್ರಮುಖರಿಂದ ವ್ಯಕ್ತವಾದ ಮಾತುಗಳು:-

"ಸಾಮರಸ್ಯ, ಸಹಜೀವನಕ್ಕೆ ಹೆಸರಾದ ಜಿಲ್ಲೆಯಲ್ಲಿ ಕೆಲ ಆಚಾರ ವಿಚಾರ ತಿಳಿಯದವರಿಂದ ಅಹಿತಕರ ಘಟನೆಗಳು ನಡೆದು ಅಭದ್ರತೆ ಕಾಡುವಂತಾಗಿದೆ. ಇದು ಆಗಬಾರದು. ಸಹ ಜೀವನ ಸಾಮರಸ್ಯದಿಂದ ಹೆಜ್ಜೆ ಹಾಕೋಣ" - ಅಜಿತ್ ಕುಮಾರ್ ರೈ ಮಾಲಾಡಿ, ಬಂಟ ಸಂಘದ ಪ್ರಮುಖರು.

"ಸೌಹಾರ್ದತೆಯಿಂದ ಬಾಳಿ ಬದುಕಿದ ನಮ್ಮ ಜಿಲ್ಲೆಯಲ್ಲಿ ಕೆಲವರಿಂದ ಸೌಹಾರ್ದತೆಗೆ ಧಕ್ಕೆ ಆಗಿರುವುದು ನನ್ನಂತವರಿಗೆ ನೋವು ತಂದಿದೆ. ದ.ಕ ಜಿಲ್ಲೆಯ ಘನತೆಯನ್ನು ಉಳಿಸಿ ಸೌಹಾರ್ದತೆಯನ್ನು ಬೆಳೆಸಬೇಕು"- ಡಾ. ಶಾಂತಾರಾಮ ಶೆಟ್ಟಿ, ಹಿರಿಯ ವೈದ್ಯರು.

"ಜಿಲ್ಲೆಯ ಎಲ್ಲ ಜನರು ಶಾಂತಿ ಬಯಸುತ್ತಾರೆ. ಹಾಗಾಗಿ ಎಲ್ಲರೂ ಕಾನೂನನ್ನು ಪಾಲಿಸಿ ಪೊಲೀಸರಿಗೆ ಅವರ ಕೆಲಸ ಮಾಡಲು ಬಿಟ್ಟರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ" - ವಂ. ಮ್ಯಾಕ್ಸಿಂ, ಕ್ರೈಸ್ತ ಧರ್ಮ ಪ್ರಾಂತ್ಯದ ಪ್ರಮುಖರು.

"ಸಮಾಜದ ಸುಭದ್ರತೆಯನ್ನು ಕಾಪಾಡುವುದು ಸರಕಾರದ ಕೆಲಸ. ದೈವಿಕವಾಗಿ ಅನುಗ್ರಹ ಹೊಂದಿರುವ ಜಿಲ್ಲೆಯಲ್ಲಿ ದ್ವೇಷ ಭಾಷಣ, ಅಪರಾಧ ಕೃತ್ಯಗಳು ನಡೆಯುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧ ಕೃತ್ಯಗಳನ್ನು ಎಸಗುವವರನ್ನು ಅಪರಾಧಿಗಳನ್ನಾಗಿ ಮಾತ್ರವೇ ಪರಿಗಣಿಸಿ, ಜಾತಿ ಧರ್ಮ ನೋಡದೆ ಕಾನೂನು ಕ್ರಮ ಜರಗಿಸಬೇಕು. ಅಪರಾಧಿಗಳಿಗೆ ಶಿಕ್ಷೆಯನ್ನು ಕಠಿಣಗೊಳಿಸಬೇಕು" -ಅಝೀಝ್ ದಾರಿಮಿ, ಧಾರ್ಮಿಕ ವಿದ್ವಾಂಸ.

"ಕಾನೂನು ಪ್ರಕಾರ ಅಪರಾಧಿಗಳನ್ನು ಅಪರಾಧ ಸ್ಥಾನದಲ್ಲಿ ಇರಿಸಿದಾಗ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ" - ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಮಾಜಿ ಜಿಲ್ಲಾಧ್ಯಕ್ಷರು.

"ಜಿಲ್ಲೆಯ ಅಹಿತಕರ ಘಟನೆಗಳಿಂದ ಮನಸ್ಸುಗಳು ಒಡೆದಿವೆ. ಅಂತರ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಮುಖಂಡರ ನೇತೃತ್ವದಲ್ಲಿ ರ‍್ಯಾಲಿ ನಡೆಸಬೇಕು" -ಮುಹಮ್ಮದ್ ಕುಂಞಿ, ಶಾಂತಿಪ್ರಕಾಶನದ ವ್ಯವಸ್ಥಾಪಕರು.

"ಅಶಾಂತಿ ಹುಟ್ಟಲು ಕಾರಣ ಏನು ಎಂಬ ಬಗ್ಗೆ ವಿವೇಚನೆ ತಳ ಮಟ್ಟದಿಂದ ಆಗಬೇಕು. ನನ್ನದೇ ಶ್ರೇಷ್ಟ ಎಂಬ ಮನೋಭಾವದಿಂದ ದ್ವೇಷ ಮಾತ್ರ ಮೂಡಲು ಸಾಧ್ಯ. ಸಹೋದರತ್ವ, ಸಹಬಾಳ್ವೆಯ ಬದುಕು ಬೇಕಾದರೆ ಒಬ್ಬರಿಗೊಬ್ಬರು ರೀತಿ ರಿವಾಜು, ಧಾರ್ಮಿಕ ನಂಬಿಕೆಗಳನ್ನು ಗೌರವಿಸಬೇಕು" -ಎಂ.ಬಿ. ಪುರಾಣಿಕ್, ವಿಎಚ್‌ಪಿ ಮುಖಂಡರು.

"ಸೌಹಾರ್ದತೆಗೆ ಸಂಘಟನೆಗಳ ಜತೆ ಸರಕಾರಿ ಅಧಿಕಾರಿಗಳೂ ಕೈಜೋಡಿಸಬೇಕು" - ಇಬ್ರಾಹೀಂ ಕೋಡಿಜಾಲ್, ಮೂಡಾದ ಮಾಜಿ ಅಧ್ಯಕ್ಷರು.

"ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಪ್ರತಿಪಾದನೆ ಮಾಡದಂತೆ ಎಚ್ಚರಿಕೆ ವಹಿಸುವ ಜತೆಗೆ, ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಮಹತ್ವವನ್ನು ಎತ್ತಿಹಿಡಿಯುವ ಕಾರ್ಯಕ್ರಮ ಮಾಡಲು ಮಾರ್ಗಸೂಚಿ ನೀಡಬೇಕು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಯಾವುದೇ ಧರ್ಮದ ಮುಖಂಡರಾಗಿ ಪರಿಗಣಿಸದೆ ಅಪರಾಧಿಗಳಾಗಿ ಬಿಂಬಿಸಬೇಕು. ಜನಾಂಗೀಯ ಶ್ರೇಷ್ಟತೆ ಅಥವಾ ಅವಹೇಳನ ಮಾಡುವ ಕಲಾ ಪ್ರಕಾರಗಳಿಗೆ ಅವಕಾಶ ನೀಡಬಾರದು" - ಲಕ್ಷ್ಮೀಶ ಗಬ್ಲಡ್ಕ, ಸಾಮಾಜಿಕ ಹೋರಾಟಗಾರರು.

"ದಕ್ಷ ಅಧಿಕಾರಿಗಳಿಂದ ಸಾಮರಸ್ಯ ಕಾಪಾಡಲು ಸಾಧ್ಯ ಎಂಬುದು ಈಗಾಗಲೇ ಜಿಲ್ಲೆಯಲ್ಲಿ ಸ್ಪಷ್ಟವಾಗಿದೆ. ಧಾರ್ಮಿಕ ದ್ವೇಷ ಹರಡುವ ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ. ಪ್ರತಿಯೊಬ್ಬ ಧಾರ್ಮಿಕ ನಾಯಕರೂ ತಮ್ಮ ಜನರ ಬಗ್ಗೆ ಜವಾಬ್ಧಾರಿ ವಹಿಸುವುದು ಮುಖ್ಯ" -ಸನ್ನಿ ಡಿಸೋಜಾ, ರೈತ ಮುಖಂಡರು.

"ಅಧಿಕಾರಿಗಳು ಪ್ರಾಮಾಣಿಕವಾಗಿದ್ದರೆ ಸಮಾಜ ಗೌರವಿಸುತ್ತದೆ. ಅಹಿತಕರ ಘಟನೆಗಳ ಸಂದರ್ಭ ಸರಕಾರ ಅಥವಾ ಆಡಳಿತದಲ್ಲಿರುವ ಜನಪ್ರತಿನಿಧಿಗಳ ಮೌನವೂ ಸಮಾಜದ ಅಶಾಂತಿಗೆ ಕಾರಣವಾಗುತ್ತದೆ" - ಯಾದವ ಶೆಟ್ಟಿ, ರೈತ ಮುಖಂಡರು.

"ಜಿಲ್ಲೆಯ ಕುರಿತಂತೆ ಋಣಾತ್ಮಕ ಸುದ್ದಿಗಳು ಪ್ರಸಾರ ಮಾಡುವ ಬಗ್ಗೆ ಮಾದ್ಯಮ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಹೂಡಿಕೆ ಮಾಡುವವರು ಹಿಂದೆ ಸರಿದು ಅಭಿವೃದ್ಧಿಗೆ ಮಾರಕಾಗುತ್ತದೆ" -ಪುಷ್ಪರಾಜ್ ಜೈನ್, ಕ್ರೆಡೈ ಪ್ರಮುಖರು.

"ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಘದ ಸಂಪೂರ್ಣ ಬೆಂಬಲ ಇದೆ" - ಶ್ರೀನಿವಾಸ ಇಂದಾಜೆ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು.

"ಜಿಲ್ಲೆಯಲ್ಲಿ ಸೈದ್ಧಾಂತಿಕ ವಿಚಾರವಾಗಿಯೇ ಮತೀಯ ಕಲಹಗಳಿಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆಗೆ ಕೆಲವೊಂದು ಮತೀಯ ಶಕ್ತಿಗಳು ನಡೆಸುವ ಕಾದು ನೋಡುವ ತಂತ್ರಕ್ಕೆ ಶಾಶ್ವತ ಪರಿಹಾರ ನೀಡುವ ಕೆಲಸ ಆಗಬೇಕು. ಸಾಂವಿಧಾನಿಕ ಅರಿವು ಕಾರ್ಯಕ್ರಮ ವಿವಿಧ ಅಕಾಡೆಮಿಗಳು, ವಿವಿ ಪೀಠಗಳ ಮೂಲಕ ನಡೆಸಬೇಕು" - ಮುನೀರ್ ಕಾಟಿಪಳ್ಳ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ.

"ರಾಷ್ಟ್ರ ಭಕ್ತಿ, ಸೌಹಾರ್ದತೆಯ ಪಾಠವನ್ನು ಮನೆ, ಶಾಲೆ, ದೇವಸ್ಥಾನ, ಮದ್ರಸ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ನೀಡಬೇಕು. ಅಕ್ರಮ ಗೋಹತ್ಯೆ, ಗೋ ಸಾಗಾಟವನ್ನು ತಡೆದರೆ ಗಲಭೆ ಕಡಿಮೆ ಆಗುತ್ತದೆ. ಮಾದಕ ವಸ್ತುಗಳ ನಿಯಂತ್ರಣ ಮಾಡುವ ಕಾರ್ಯ ಆಗಬೇಕು. ಈ ನಡುವೆ ನಮ್ಮನ್ನು ಬೆಳೆಸಿದ ಸೈದ್ಧಾಂತಿಕ ವಿಚಾರಗಳನ್ನು ನಾವು ಉಳಿಸಬೇಕಾಗಿದೆ" - ಹರೀಶ್ ಪೂಂಜಾ, ಶಾಸಕರು.

"ಜಿಲ್ಲೆಯಲ್ಲಿ ಅಶಾಂತಿಗೆ ಗೋ ಹತ್ಯೆ, ಗೋ ಸಾಗಾಟದ ಪ್ರಕರಣಗಳೂ ಕಾರಣವಾಗಿವೆ. ಮಂಗಳೂರು ಮತ್ತು ಹುಬ್ಬಳ್ಳಿ ಹೊರತುಪಡಿಸಿ ರಾಜ್ಯದಲ್ಲಿ ಬೇರೆಲ್ಲೂ ವಧಾಗೃಹಗಳಿಲ್ಲ. ಹಾಗಿದ್ದರೂ 100ಕ್ಕೂ ಅಧಿಕ ಅಕ್ರಮ ವಧಾಗ್ರಹಗಳು ಕಾರ್ಯ ನಿರ್ವಹಿಸುತ್ತಿವೆ. ಪೊಲೀಸರು ಈ ಬಗ್ಗೆ ಕ್ರಮ ವಹಿಸಿದಾಗ ಜನ ನಿಲ್ಲಿಸಲು ಹೋಗುತ್ತಾರೆ. ಆಗ ಸಂಘರ್ಷಕ್ಕೆ ಕಾರಣವಾಗುತ್ತದೆ. ಎಲ್ಲರನ್ನೂ ಒಂದೇ ರೀತಿಯಾಗಿ ಪರಿಗಣಿಸಿದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಲಿದೆ" - ವೇದವ್ಯಾಸ ಕಾಮತ್, ಶಾಸಕರು.

"ಸ್ವ ಘೋಷಿತ ಭಾಷಣಕಾರ ಮಾತು ಕೇಳಿ ಪ್ರೇರೇಪಿತರಾಗಿ ಅಹಿತಕರ ಘಟನೆಗಳಿಗೆ ಕಾರಣವಾಗು ತ್ತಿದ್ದು, ಅದಕ್ಕೆ ಉತ್ತೇಜನ ನೀಡುವ, ಹಣಕಾಸು ಒದಗಿಸುವವರನ್ನು ಮೂಲದಿಂದ ಪತ್ತೆಹಚ್ಚಿ ಕಠಿಣ ಕ್ರಮ ಆಗಬೇಕು. ಪ್ರಚೋದನಕಾರಿ ಭಾಷಣ ಮಾಡುವವರನ್ನು ವೇದಿಕೆಯಿಂದಲೇ ಪೊಲೀಸರು ಎಳೆದುಕೊಂಡು ಹೋಗುವ ವ್ಯವಸ್ಥೆ ಆಗಬೇಕು" - ಅಶೋಕ್ ರೈ, ಶಾಸಕರು.

"ಜಿಲ್ಲೆಯನ್ನು ತಪ್ಪಾಗಿ ರಾಷ್ಟ್ರ ಮಟ್ಟದಲ್ಲಿ ಬಿತ್ತರಿಸಲಾಗುವ ಸಂದರ್ಭ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಉಸ್ತುವಾರಿ ಸಚಿವರು ನಿರಂತರವಾಗಿ ಇಂತಹ ಸಭೆನಡೆಸಬೇಕು. ಸರಕಾರ ನಡೆಸುವ ಯಾವುದೇ ಕಾರ್ಯ ಪ್ರಾಮಾಣಿಕವಾಗಿಲ್ಲ ಎಂಬ ಅನುಮಾನ ಸಮಾಜಕ್ಕೆ ಬರಬಾರದು. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಾಗ ಜನರ ಮೇಲೆ ಕಾನೂನು ಹೇರುವ ಕೆಲಸ ಆಗಬಾರದು. ಎಲ್ಲಾ ಕ್ರಿಮಿನಲ್ ಕೃತ್ಯಗಳಿಗೆ ಅಕ್ರಮ ಮರಳುಗಾರಿಕೆಯಂತಹ ಅಕ್ರಮ ಚಟುವಟಿಕೆಗಳು ಕಾರಣವಾಗಿದ್ದು, ಈವರೆಗೂ ಮರಳು ನೀತಿ ಯಾಕಾಗಿಲ್ಲ ಎಂಬುದು ಯಕ್ಷಪ್ರಶ್ನೆ" - ಬ್ರಿಜೇಶ್ ಚೌಟ, ಸಂಸದರು.

ಸಭೆಯಲ್ಲಿ ಶಾಸಕರಾದ ಭಾಗೀರಥಿ ಮುರಳ್ಯ, ಡಾ. ಭರತ್ ಶೆಟ್ಟಿ, ಮಾಜಿ ಶಾಸಕ ನಾಗರಾಜ ಶೆಟ್ಟಿ, ವಕ್ಫ್ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಕಿಶೋರ್ ಅತ್ತಾವರ, ಅಶ್ರಫ್ ಕಿನಾರ, ಜೆಡಿಎಸ್ ಕಾರ್ಯಾಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ಎಸ್‌ಡಿಪಿಐ ಮುಖಂಡ ಅಬ್ದುಲ್ ಜಲೀಲ್ ಕೃಷ್ಣಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ದಲಿತ ಮುಖಂಡರಾದ ಹರಿಯಪ್ಪ, ದೇವದಾಸ್, ಸಾಮಾಜಿಕ ಮುಖಂಡ ರಾದ ಹೈದರ್ ಪರ್ತಿಪಾಡಿ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿ, ಜಿಲ್ಲೆಯ ಶಾಂತಿ ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಿದರು.











share
ವಾರ್ತಾಭಾರತಿ
ವಾರ್ತಾಭಾರತಿ
Next Story
X