ಪಣಂಬೂರು: ಗುಂಡು ಹಾರಿಸಿಕೊಂಡು ಎನ್.ಎಂ.ಪಿ.ಎ. ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಸುರತ್ಕಲ್, ಅ.22: CISF ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಣಂಬೂರಿನಲ್ಲಿರುವ ಎನ್.ಎಂ.ಪಿ.ಎ. ಮುಖ್ಯ ದ್ವಾರದ ಬಳಿ ಇಂದು(ಅ.22) ಮುಂಜಾನೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ರಾಯಚೂರು ನಿವಾಸಿ, CISF ಸಬ್ ಇನ್ ಸ್ಪೆಕ್ಟರ್ ಝಾಕಿರ್ ಹುಸೈನ್(54) ಎಂದು ಗುರುತಿಸಲಾಗಿದೆ. ಇವರು ನವ ಮಂಗಳೂರು ಬಂದರ್ ನ ಮುಖ್ಯ ದ್ವಾರದಲ್ಲಿ ರಾತ್ರಿ ಪಾಳಿಯ ಕೆಲಸ ನಿರ್ವಹಿಸಿದ್ದರು. ಇಂದು ಬೆಳಗ್ಗೆ 6:30ರ ಸುಮಾರಿಗೆ ತನ್ನ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣದ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





