ಪಟ್ರಮೆ | ಹಯಾತುಲ್ ಇಸ್ಲಾಂ ಮದ್ರಸದ SKSBV ಪದಾಧಿಕಾರಿಗಳ ಆಯ್ಕೆ

ಹಯಾತುಲ್ ಇಸ್ಲಾಂ ಮದ್ರಸದ SKSBV ಪದಾಧಿಕಾರಿಗಳು
ಉಪ್ಪಿನಂಗಡಿ: ಉಪ್ಪಿನಂಗಡಿ ರೇಂಜಿಗೆ ಒಳಪಟ್ಟ ಹಯಾತುಲ್ ಇಸ್ಲಾಂ ಮದ್ರಸ ಪಟ್ರಮೆ(7326)ಯ SKSBV 2025-26ನೇ ಶೈಕ್ಷಣಿಕ ವರ್ಷದ ನೂತನ ಸಮಿತಿಯ ಪದಾಧಿಕಾರಿಗಳನ್ನು ಮತದಾನದ ಮೂಲಕ ರವಿವಾರ ಆಯ್ಕೆಮಾಡಲಾಯಿತು.
ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ ಹಾಗೂ ಮ್ಯಾನೇಜ್ಮೆಂಟ್ ಪದಾಧಿಕಾರಿಗಳು, ಪೋಷಕರ ಸಮ್ಮಖದಲ್ಲಿ ಮತದಾನ ನಡೆಯಿತು. ವಿದ್ಯಾರ್ಥಿಗಳು ಮತದಾನದಲ್ಲಿ ಸಕ್ರೀಯರಾಗಿ ಪಾಲ್ಗೊಂಡರು.
20ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತವನ್ನು ಚಲಾಯಿಸಿದರು. ಒಬ್ಬರಿಗೆ ಮೂರು ಮತ ಚಲಾಯಿಸುವ ಅವಕಾಶವಿತ್ತು. 16 ಮತ ಪಡೆದ ಮುಹಮ್ಮದ್ ಆಶಿಕ್ ಅಧ್ಯಕ್ಷರಾಗಿ ಆಯ್ಕೆಯಾದರು. 12 ಮತ ಪಡೆದ ಮುಹಮ್ಮದ್ ನಿಝಾಮ್ ಕಾರ್ಯದರ್ಶಿಯಾಗಿ ನೇಮಕಗೊಂಡರು. 12 ಮತ ಪಡೆದ ಮುಹಮ್ಮದ್ ಶಹಝಿಲ್ ಖಜಾಂಜಿಯಾಗಿ ಆಯ್ಕೆಯಾದರು.
2025 26ನೇ ಶೈಕ್ಷಣಿಕ ವರ್ಷದ ಅಧ್ಯಯನ ಸಮಯದ ನಾಯಕಿ ಮತ್ತು ಉಪ ನಾಯಕಿಯರನ್ನೂ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ರಾತ್ರಿಯ ಅಧ್ಯಯನ ಸಮಯದ ನಾಯಕಿಯಾಗಿ 15 ಮತಗಳೊಂದಿಗೆ ಶಝ ಫಾತಿಮಾ ಆಯ್ಕೆಯಾದರು. 11 ಮತಗಳೊಂದಿಗೆ ನಸಿಯಾ ಬಾನು ಉಪನಾಯಕಿಯಾಗಿ ಆಯ್ಕೆಯಾದರು. ಬೆಳಿಗ್ಗಿನ ಅಧ್ಯಯನ ಸಮಯದ ನಾಯಕಿಯಾಗಿ ಸ್ವಾಲಿಹ, ಹಾಗೂ ಉಪನಾಯಕಿಯಾಗಿ ರೀಫಾ ಆಯ್ಕೆಯಾದರು.