ಪುತ್ತೂರಿನಲ್ಲಿ ಜೂ.30ರಿಂದ ಜು.6ರವರೆಗೆ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ : ʼಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹʼ

ಪುತ್ತೂರು : ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಇದರ ವತಿಯಿಂದ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ - ಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹವನ್ನು ಜೂ.30ರಿಂದ ಜುಲೈ 6ರವರೆಗೆ ಆಯೋಜಿಸಲಾಗಿದೆ.
ಈ ಸಾಂಸ್ಕೃತಿಕ ಉತ್ಸವವು ಪುತ್ತೂರಿನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ನಡೆಯಲಿದ್ದು, ಪ್ರತಿದಿನ ಸಂಜೆ 4 ಗಂಟೆಯಿಂದ 8 ಗಂಟೆವರೆಗೆ ವಿವಿಧ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ಜರಗಲಿವೆ.
ಉದ್ಘಾಟನಾ ಸಮಾರಂಭ :
ಸಪ್ತಾಹದ ಉದ್ಘಾಟನಾ ಸಮಾರಂಭವು ಜೂ.30 ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ ಎಲ್ ಆಚಾರ್ಯ ಜ್ಯೂವೆಲರ್ಸ್ ಮಾಲಕ ಬಲರಾಮ ಆಚಾರ್ಯ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇದರ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ ಸಮಾರೋಪ :
ಜು.6ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಗಳು, ರಾಜ್ಯ ಮಾನವ ಹಕ್ಕು ಆಯೋಗ ಅಧ್ಯಕ್ಷ ಡಾ .ಟಿ.ಶ್ಯಾಮ ಭಟ್, ದ್ವಾರಕಾ ಸಮೂಹ ಸಂಸ್ಥೆ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ಪುತ್ತೂರು ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ಕೆರೆಮನೆ, ಹೊನ್ನಾವರ (ಉತ್ತರ ಕನ್ನಡ), ಹಿರಿಯ ಕಲಾವಿದ ಶ್ರೀ ಕೊಕ್ಕಡ ಈಶ್ವರ ಭಟ್ ಅವರಿಗೆ 'ಕುರಿಯ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ. ಆರ್.ಕೆ.ಭಟ್ (ಬೆಂಗಳೂರು) ಅವರಿಗೆ ಕುರಿಯ ಸ್ಮ್ರುತಿ ಗೌರವ ಅರ್ಪಣೆ ನಡೆಯಲಿದೆ. ವೆಂಕಟ್ರಾಮ ಭಟ್ (ಸುಳ್ಳ್ಯ) ಅವರಿಂದ ಪೆರುವಾದಿ ಸಂಸ್ಮರಣೆ ನಡೆಯಲಿದೆ .
ಪ್ರತಿದಿನದ ತಾಳಮದ್ದಳೆ ಕಾರ್ಯಕ್ರಮಗಳು:
30-06-2025 (ಸೋಮವಾರ): ತರಣಿಸೇನ ಕಾಳಗ
1-07-2025 (ಮಂಗಳವಾರ): ಸರ್ಪಂಗಳ
2-07-2025 (ಬುಧವಾರ): ದಕ್ಷಾಧ್ವರ
3-07-2025 (ಗುರುವಾರ): ದಮಯಂತಿ ಪುನಃಸ್ವಯಂವರ
4-07-2025 (ಶುಕ್ರವಾರ): ಕೃಷ್ಣಾರ್ಜುನ ಕಾಳಗ
5-07-2025 (ಶನಿವಾರ): ವಿಶೇಷ ತಾಳಮದ್ದಳೆ
6-07-2025 (ಆದಿತ್ಯವಾರ): ಗುರುದಕ್ಷಿಣೆ
ಪ್ರತಿದಿನ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ನಾಡಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕುರಿಯ ಪ್ರತಿಷ್ಠಾನ (ರಿ.) ಉಜಿರೆ ಸಂಚಾಲಕ ಉಜಿರೆ ಅಶೋಕ ಭಟ್ ತಿಳಿಸಿದ್ದಾರೆ.







