ಪ್ರಾಪ್ತಿ ಶೆಟ್ಟಿ, ಆರಾಧ್ಯ ಪಡ್ಕೆಗೆ ರೋಟರಿ ಆನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ

ಮಂಗಳೂರು, ಮೇ 27: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆ, ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸ್ವಸ್ತಿಕಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ 5ನೇ ವಾರ್ಷಿಕ ಪ್ರತಿಷ್ಠಿತ ರೋಟರಿ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ-2026ಯನ್ನು ಯುವ ಸಾಧಕಿಯರಾದ ಪ್ರಾಪ್ತಿ ಶೆಟ್ಟಿ ಮತ್ತು ಆರಾಧ್ಯ ಪಡ್ಕೆ ಪಡೆದಿದ್ದಾರೆ.
ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಗುರುತಿಸಿ ಇವರಿಗೆ ಪ್ರಶಸ್ತಿ ನೀಡಲಾಗಿದೆ.
ಸ್ವಸ್ತಿಕಾ ರಾಷ್ಟ್ರೀಯ ವ್ಯವಹಾರ ಶಾಲೆಯ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಮುಖ್ಯ ಅತಿಥಿಯಾಗಿದ್ದರು.
ರೋಟರಿ ಸಂಸ್ಥೆಯ ಅಧ್ಯಕ್ಷೆ ಸಜ್ನಾ ಭಾಸ್ಕರ್ ಸ್ವಾಗತಿಸಿ, ರೋಟರಿ ಸಂಸ್ಥೆಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ರಂಜನ್ ರಾವ್ ಪ್ರಶಸ್ತಿ ವಿಜೇತರ ಸಾಧನೆಯ ಮಾಹಿತಿ ನೀಡಿದರು.
ಪ್ರಶಸ್ತಿಯ ಪ್ರಾಯೋಜಕ ಮತ್ತು ಸಂಸ್ಥೆಯ ಸಲಹೆಗಾರರಾದ ರಾಜೇಂದ್ರ ಕಲ್ಬಾವಿಯವರು ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಯುವಜನ ಸೇವಾ ಯೋಜನೆಯ ನಿರ್ದೇಶಕರಾದ. ಕೆನ್ಯೂಟ್ ಪಿಂಟೋ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಸಾತ್ವಿಕ್ , ಜೊತೆ ಕಾರ್ಯದರ್ಶಿ ನಮೃತಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪದ್ಮನಾಭ್ ನಾಯ್ಕ್ ವಂದಿಸಿದರು.






