'ಮಾದರಿ ಮದುವೆ' ಅಭಿಯಾನ : ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಯೂಸುಫ್ ಗೌಸಿಯ ಸಾಜ/ಇಕ್ಬಾಲ್ ಬಪ್ಪಳಿಗೆ/ ರಫೀಕ್ ಹಾಜಿ
ಪುತ್ತೂರು : ಮದುವೆಗಳಲ್ಲಿ ಕಂಡುಬರುತ್ತಿರುವ ದುಂದುವೆಚ್ಚಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಸುನ್ನಿ ಯುವಜನ ಸಂಘವು ಹಮ್ಮಿಕೊಂಡ 'ಮಾದರಿ ಮದುವೆ' ಅಭಿಯಾನದ ಸಮಾರೋಪ ಸಮ್ಮೇಳನವು ಮೇ.2ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಭಾಗವಹಿಸಲಿದ್ದಾರೆ.
ಪ್ರಸ್ತುತ ಸಮ್ಮೇಳನದ ಯಶಸ್ಸಿಗಾಗಿ ಸ್ಥಳೀಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯೂಸುಫ್ ಗೌಸಿಯ ಸಾಜ ಹಾಗೂ ಸಂಚಾಲಕರಾಗಿ ಇಕ್ಬಾಲ್ ಬಪ್ಪಳಿಗೆಯವರನ್ನು ಆರಿಸಲಾಯಿತು. ಬೆಂಗಳೂರಿನ ರಾಯಲ್ ಗ್ರೂಪ್ ಎಂ.ಡಿ.ರಫೀಕ್ ಹಾಜಿ ಮೈದಾನಿಮೂಲೆ ಕೋಶಾಧಿಕಾರಿಯಾಗಿರುವರು. ಉಲಮಾ ಸಾದಾತುಗಳು ಹಾಗೂ ಉಮರಾ ಪ್ರಮುಖರನ್ನು ಒಳಗೊಂಡ ಸಲಹಾ ಸಮಿತಿ ಸೇರಿದಂತೆ 313 ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ತಂಙಳ್ ಎರುಮಾಡ್ ಪ್ರಾರ್ಥನೆ ನಡೆಸಿದರು. ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಅನಸ್ ಸಿದ್ದೀಕಿ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್, ಸಹ ಕಾರ್ಯದರ್ಶಿ ಮುಹಮ್ಮದ್ ಅಲೀ ಸಖಾಫಿ, ಮನ್ಸೂರ್ ಅಲಿ ಕೋಟೆಗದ್ದೆ ಮಾತನಾಡಿದರು. ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ಸ್ವಾಗತಿಸಿ, ಕಾರ್ಯದರ್ಶಿ ಸಾಲಿಹ್ ಮುರ ಧನ್ಯವಾದವಿತ್ತರು.






