ರಬೀವುಲ್ ಅವ್ವಲ್ ತಿಂಗಳ ಚಂದ್ರದರ್ಶನ: ಸೆ.5ರಂದು ಮೀಲಾದುನ್ನಬಿ

ಮಂಗಳೂರು, ಆ.24: ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತಿಳಿಸಿದ್ದಾರೆ.
ಸೆ. 5ರಂದು ಶುಕ್ರವಾರ ರಬೀವುಲ್ ಅವ್ವಲ್ 12 ಮೀಲಾದುನ್ನಬೀ ದಿನಾಚರಣೆ ಆಗಿರುತ್ತದೆ ಎಂದು ಮಸ್ಜಿದ್ ಝೀನತ್ ಭಕ್ಷ್ ಹಾಗೂ ಈದ್ಗಾ ಮಸೀದಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುತ್ತದೆ ಎಂದು ಉಳ್ಳಾಲ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ತೀರ್ಮಾನಿಸಿರುತ್ತಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
Next Story





