ಮಂಗಳೂರು-ಬಜ್ಪೆ ನಡುವೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಪುನರಾರಂಭಿಸಲು ಐವನ್ ಡಿಸೋಜಾರಿಗೆ ಮನವಿ

ಬಜ್ಪೆ : ಮಂಗಳೂರು-ಬಜ್ಪೆ ನಡುವೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗಳನ್ನು ಪುನರಾರಂಭಿಸಬೇಕು ಮತ್ತು ಅವುಗಳನ್ನು ಕಟೀಲುವರೆಗೆ ವಿಸ್ತರಿಸಬೇಕು ಎಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಆಗ್ರಹಿಸಿತು.
ಮನವಿ ಸ್ವೀಕರಿಸಿದ ಐವನ್ ಡಿಸೋಜ ಅವರು, ಕೆಎಸ್ಸಾರ್ಟಿಸಿ ವಿಭಾಗದ ಜಿಲ್ಲಾಧಿಕಾರಿ ರಾಜೇಶ್ ಶೆಟ್ಟಿ ಅವರನ್ನು ಕಚೇರಿಗೆ ಕರೆಸಿಕೊಂಡು, ಬಜ್ಪೆ ನಾಗರಿಕರ ಬೇಡಿಕೆಗಳ ಕುರಿತು ಚರ್ಚಿಸಿದರು.
ಮಂಗಳೂರು-ಬಜ್ಪೆ ನಡುವೆ ಸಂಚರಿಸುತ್ತಿದ್ದ ಸರಕಾರಿ ಬಸ್ ಗಳನ್ನು ಪುನರಾರಂಭಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ, ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್, ರಾಜ್ಯ ದಸಂಸ ಸಂಚಾಲಕರಾದ ಎಂ.ದೇವದಾಸ್, ಗ್ಯಾರಂಟಿ ಅನುಷ್ಠಾನದ ಸಮಿತಿಯ ನಾಯಕರಾದ ಅಲೆಸ್ಟರ್ ಡಿಕುನ್ಹಾ, ಜಿಲ್ಲಾ ಇನ್ಟಕ್ ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ, ಕಾಂಗ್ರೆಸ್ ಮುಖಂಡರಾದ ವಿಕಾಸ್ ಶೆಟ್ಟಿ, ಕಾರ್ಪೊರೇಟರ್ ಸತೀಶ್ ಪೆಂಗಲ್, ಹಿರಿಯರಾದ ಮುಹಮ್ಮದ್ ಮೋನಾಕ, ಅನ್ವರ್ ರಝಾಕ್ ಬಜ್ಪೆ, ಬಿ.ಎಚ್.ಅಬ್ದುಲ್ ಖಾದರ್, ಕುಡುಬಿ ಸಮಾಜದ ನಾಯಕರಾದ ಶೇಖರ್ ಗೌಡ, ಅದ್ದು ಬಜ್ಪೆ, ಮಹಿಳಾ ನಾಯಕಿ ವಿಜಯ ಸುವರ್ಣ, ಕಂದಾವರ ಗ್ರಾ.ಪಂ. ಸದಸ್ಯರಾದ ಶಾಂತ, ಅನಿವಾಸಿ ಉದ್ಯಮಿ ಅಬ್ಬಾಸ್, ಆಫ್ನಾನ್ ಶಾಹಿದ್ ಮೊದಲಾದವರು ಉಪಸ್ಥಿತರಿದ್ದರು.