ರೋಟರ್ಯಾಕ್ಟ್ ಮಂಗಳೂರು ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ರೋಟರ್ಯಾಕ್ಟ್ ಸಂಸ್ಥೆಯು ಯುವಕರಿಗಾಗಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಸದಸ್ಯರು ಸಂಸ್ಥೆಯ ನೀತಿ, ನಿಯಮ, ಉದ್ದೇಶವನ್ನು ತಿಳಿದುಕೊಂಡು ಕಾರ್ಯಪ್ರವೃತರಾಗಬೇಕು. ನಾಯಕತ್ವಗುಣ ಬೆಳೆಸಬೇಕು. ವ್ಯಕ್ತಿತ್ವ ವಿಕಸನ ಹೊಂದಿಸಿ ಯಶಸ್ಸು ಸಾಧಿಸಬೇಕು ಎಂದು ರೋಟರಿ ಜಿಲ್ಲಾ 3181 ರ ಮಾಜಿ ಗರ್ವನರ್ ರೊ.ಡಾ. ದೇವದಾಸ್ ರೈ ಹೇಳಿದರು.
ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ರೋಟರ್ಯಾಕ್ಟ್ ಮಂಗಳೂರು ಸಿಟಿಯ ಪ್ರಸ್ತುತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ವಿಧಿವಿಧಾನ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ, ಪುತ್ತೂರು ನಗರ ಮೂಲದ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ ಭಾಗವಹಿಸಿದ್ದರು.
ನಿರ್ಗಮನ ಅಧ್ಯಕ್ಷ ಅರ್ಜುನ್ ಪ್ರಕಾಶ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ವಾರ್ಷಿಕ ವರದಿ ವಾಚಿಸಿದರು. ನೂತನ ಅಧ್ಯಕ್ಷ ಅವಿನಾಶ್ ಕುಲಾಲ್ ಮಾತನಾಡಿದರು. ಈ ಸಂದರ್ಭ ನೂತನ ಸದಸ್ಯರಾದ ಅಭಿಷೇಕ್, ದರ್ಶನ್, ಮುಹಮ್ಮದ್, ನೀಮಾ ಅವರನ್ನು ಸ್ವಾಗತಿಸಲಾಯಿತು. ಪೂಜಾ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ವರುಣ್ ರೈ ವಂದಿಸಿದರು.
ನಿರ್ದೇಶಕರಾಗಿ ಪೂಜಾ (ಸಂಸ್ಥೆ ಸೇವೆ), ಜೋಯಸ್ (ಸಮುದಾಯ ಸೇವೆ), ಬಿದ್ದಪ್ಪ(ವೃತ್ತಿಪರ ಸೇವೆ), ಕ್ರಿಶಾ (ಅಂತರ್ಟ್ರೋಯ ಸೇವೆ), ಫ್ಲೋಯಾಲ (ಕೋಶಾಧಿಕಾರಿ), ಅರವಿಂದ್ ಡಿಸೋಜ (ದಂಡಾಧಿಕಾರಿ) ಉಪಸ್ಥಿತರಿದ್ದರು.