ಸದಾನಂದ ಸುವರ್ಣ ಕಲೆಗಾಗಿ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡ ಅಪರೂಪದ ಮೇರು ವ್ಯಕ್ತಿತ್ವ: ದಿನೇಶ್ ಅಮೀನ್ ಮಟ್ಟು
ಕಲಾವಿದರ ಸಂಘಟನೆಗಳಿಂದ ಸದಾನಂದ ಸುವರ್ಣರ ಗೌರವ ಪೂರ್ವಕ ಸ್ಮರಣೆ

ಮಂಗಳೂರು: ಸದಾನಂದ ಸುವರ್ಣ ಕಲೆಗಾಗಿ ತಮ್ಮನ್ನು ಸಂಪೂರ್ಣ ಅರ್ಪಿಸಿ ಕೊಂಡ ಅಪರೂಪದ ಮೇರು ವ್ಯಕ್ತಿತ್ವ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.
ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಜರ್ನಿ ಥಿಯೇಟರ್, ಅಸ್ತಿತ್ವ, ಕಲಾಸಂಗಮ, ಸಂಕೇತ್ ಕಲಾವಿದರು, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ, ಸಮುದಾಯ, ಆಯನ ನಾಟಕದ ಮನೆ, ಭೂಮಿಕ ಮಂಗಳೂರು, ಕಾರಂತೋತ್ಸವ ಸಮಿತಿ ಮುಂಬೈ ಸಂಘಟನೆಗಳ ವತಿಯಿಂದ ಶನಿವಾರ ನಗರದ ತುಳು ಭವನದಲ್ಲಿ ಹಮ್ಮಿಕೊಂಡ ಸುವರ್ಣ ಸ್ಮರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸದಾನಂದ ಸುವರ್ಣರು ಕಲಾವಿದರು, ಕಲಾಪೋಷಕರಾಗಿದ್ದರೂ ಎನ್ನುವುದಕ್ಕಿಂತ ಲೂ ಅವರು ಒಳ್ಳೆಯ ಮನುಷ್ಯ ನಾಗಿ ಬದುಕಿದ್ದರು ಎನ್ನುವುದು ಇತರರಿಗೆ ಸ್ಪೂರ್ತಿ. ಸದಾನಂದ ಸುವರ್ಣ ರಿಗೆ ತಾನು ನಂಬಿದ ಕಲೆಯ ಬಗ್ಗೆ ಬದ್ಧತೆ ಇತ್ತು. ಕಲಾರಂಗದಲ್ಲಿ ಅವರಂತಹ ವ್ಯಕ್ತಿತ್ವವನ್ನು ಕಾಣಲು ಸಾಧ್ಯವಿಲ್ಲ. ಅವರು ಜಾತ್ಯತೀತ ಮನೋಭಾವ ಮಾನವೀಯ ಸ್ಪಂದನ, ಗೆಳೆತನ ಸೇರಿದಂತೆ ಅವರು ಬದುಕು ಇತರರಿಗೆ ಬದುಕಿನಲ್ಲಿ ಪ್ರೇರಣೆ ಯಾಗುವಂತಹುದು ಎಂದು ದಿನೇಶ್ ಅಮೀನ್ ಮಟ್ಟು ಸದಾನಂದ ಸುವರ್ಣ ಜೊತೆಗಿನ ನೆನಪು ಗಳನ್ನು ಬಿಚ್ಚಿಟ್ಟರು.
ಸದಾನಂದ ಸುವರ್ಣರು ಮಹಾನ್ ಕಲಾ ಪೋಷಕ, ನೇರ ನಡೆ ನುಡಿಯ ಸ್ವಾಭಿಮಾನಿ, ಸರಳ ಜೀವಿ ಒಳ್ಳೆಯ ಮನಸ್ಸಿನ ವ್ಯಕ್ತಿ. ಮುಂಬೈಯಲ್ಲಿ ತಾವು ನಾಟಕ ಪ್ರದರ್ಶನ ನೀಡಿ ಬಂದ ಹಣದಿಂದ ಹಲವು ಕಲಾ ಸಂಘ ಗಳ ಬೆಳವಣಿಗೆಗೆ ಪೋತ್ಸಾಹ ನೀಡಿದ ಕಲಾ ಪೋಷಕರಾಗಿದ್ದರು. ಅವರು ಮುಂಬೈ ಮೊಗವೀರ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಅವರ ಗೌರವ ಪ್ರೀತಿಗೆ ಪಾತ್ರರಾಗಿದ್ದರು ಎಂದು ಮುಂಬೈ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ ಸುವರ್ಣ ರೊಂದಿಗಿನ ಒಡನಾಟದ ಬಗ್ಗೆ ವಿವರ ನೀಡಿದರು.
*ಗೌರವಾರ್ಪಣೆ:-ಸದಾನಂದ ಸುವರ್ಣರ ಜೊತೆ ಕೊನೆಯವಕಾಲದಲ್ಲಿ ಆಸರೆಯಾಗಿದ್ದ ಒಲಿವರ್ ಮೆಂಡೋನ್ಸಾ, ಡಾ.ಧೀರಜ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕೊಂಕಣಿ ಸಾಹಿತ್ಯ ಅಕಾಡೆಯ ಅಧ್ಯಕ್ಷ ಜೋಕಿಂ ಸ್ಟೇನಿ ಅಲ್ವಾರೀಸ್ ,ತುಳು ಸಾಹಿತ್ಯ ಅಕಾಡೆಯ ಅಧ್ಯಕ್ಷ ತಾರಾನಾಥ ಕಾಪಿಕಾಡ್ ಮೊದಲಾದವರು ಗೌರವಾರ್ಪಣೆ ಸಲ್ಲಿಸಿದರು. ನಟೇಶ್ ಕಾರ್ಯಕ್ರಮ ನಿರೂಪಿಸಿದರು.
ಒಂದು ದಿನ ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಸದಾನಂದ ಸುವರ್ಣರು ನಿರ್ದೇಶನ ಮಾಡಿದ ಸಿನೆಮಾ, ಟಿ.ವಿ.ಧಾರಾವಾಹಿ,ಇತರ ಕಲಾ ಪ್ರಪಂಚದ ವಿವಿಧ ಘಟಕಗಳ ಕಲಾ ಪ್ರದರ್ಶನ ಗಳೊಂದಿಗೆ ಅವರ ಮುಂಬೈ, ಮಂಗಳೂರಿನ ಅವರ ಒಡನಾಡಿಗಳು ಭಾಗವಹಿಸಿ ಸಂವಾದ, ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದರು. ಕೊನೆಯಲ್ಲಿ ಸದಾನಂದ ಸುವರ್ಣರು ನಿರ್ದೇಶಿಸಿ ನಾಟಕ ಕೋರ್ಟ್ ಮಾರ್ಶಲ್ ಪ್ರದರ್ಶನಗೊಂಡಿತು.







