ಸಸಿಹಿತ್ಲು: ಶತಾಯುಷಿ ಸೈಯದ್ ಹಮ್ಮಬ್ಬ ಕೋಯಕುಟ್ಟಿ ಕಲೀಫಾ ನಿಧನ

ಸುರತ್ಕಲ್: ಇಲ್ಲಿನ ಮುಕ್ಕ ಸಸಿಹಿತ್ಲುವಿನಲ್ಲಿ ಅಂತ್ಯವಿಶ್ರಮಿಸುತ್ತಿರುವ ಹಝ್ರತ್ ಸೈಯದ್ ಮೌಲಾನ ಫತಾಹ್ ವಲಿಯುಲ್ಲಾ ಅವರ ವಂಶಸ್ಥ, ಶತಾಯುಷಿ ಸೈಯದ್ ಹಮ್ಮಬ್ಬ ಕೋಯಕುಟ್ಟಿ ಕಲೀಫಾ (109) ಶುಕ್ರವಾರ ಬೆಳಗ್ಗೆ ನಿಧನರಾದರು.
ಇವರು ಹಝ್ರತ್ ಸೈಯದ್ ಮಸೀದಿಯ ಸ್ಥಾಪಕ ಅಧ್ಯಕ್ಷರಾಗಿ, ದರ್ಗಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಲೀಫಾ ಅವರ ದಫನ ಕಾರ್ಯವು ಇಂದು(ಅ.16) ಜುಮಾ ನಮಾಝ್ ಗೂ ಮುನ್ನ ಸಸಿಹಿತ್ಲು ದರ್ಗಾ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
Next Story




