SUCC ಕರ್ನಾಟಕ ನೂತನ ಪದಾಧಿಕಾರಿಗಳ ಆಯ್ಕೆ

ಬಿ.ಎಂ.ಬಾವ ಮದನಿ ಬಾಂಬಿಲ
ಬಂಟ್ವಾಳ : ಕರ್ನಾಟಕ ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ನ ಪ್ರಥಮ ಸಭೆಯು ಇತ್ತೀಚೆಗೆ ಬಾಂಬಿಲದಲ್ಲಿ ಶೈಖುನಾ ತೋಡಾರು ಉಸ್ಮಾನ್ ಫೈಝಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಗೌರವಾಧ್ಯಕ್ಷರಾಗಿ ದಾರುಸ್ಸಲಾಂ ಅರಬಿಕ್ ಕಾಲೇಜ್ ವಾದಿತೈಬ ಕಿನ್ಯ ಇದರ ಪ್ರಾಂಶುಪಾಲ ಹಾಜಿ ಕೆ. ಎಂ.ಉಸ್ಮಾನುಲ್ ಫೈಝಿ, ಅಧ್ಯಕ್ಷರಾಗಿ ಹಾಜಿ ಬಿ.ಎಂ.ಬಾವ ಮದನಿ ಬಾಂಬಿಲ, ಉಪಾಧ್ಯಕ್ಷರಾಗಿ ಹಾಜಿ ಮಾಹಿನ್ ದಾರಿಮಿ ಪಾತೂರು, ಹಾಜಿ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಟಿ. ಎಂ.ಹನೀಫ್ ಮುಸ್ಲಿಯಾರ್ ನಂಬದರಬೆಟ್ಟು, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್ ಪಾಟ್ರ ಕೋಡಿ, ಎಸ್.ಐ.ಹನೀಫ್ ದಾರಿಮಿ ಸವಣೂರು, ವರ್ಕಿಂಗ್ ಕಾರ್ಯದರ್ಶಿಯಾಗಿ ಬಿ.ಎಂ. ಅಬ್ದುಲ್ಲಾ ರಹ್ಮಾನಿ ಬಾಂಬಿಲ , ಕೋಶಾಧಿಕಾರಿಯಾಗಿ ಅಬೂ ಸಿರಾಜ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಫಳ್ಲುರ್ರಹ್ಮಾನ್ ಮುಸ್ಲಿಯಾರ್ ಬೆಳ್ಳಾರೆ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ, ಸದಸ್ಯರಾಗಿ ಝೈನುದ್ಧೀನ್ ಮದನಿ ಆತ್ರಾಡಿ, ಕರೀಂ ಮುಸ್ಲಿಯಾರ್ ಮಲಾರ್, ಹಾಜಿ ಇಕ್ಬಾಲ್ ಹನೀಫಿ ಬಿ.ಸಿ.ರೋಡು, ಬಶೀರ್ ದಾರಿಮಿ ಪೆರಾಡಿ, ಉಸ್ಮಾನ್ ಮುಸ್ಲಿಯಾರ್ ಎಚ್.ಕಲ್ಲು ಅವರನ್ನು ಆಯ್ಕೆ ಮಾಡಲಾಯಿತು.





