ಸೆ.27: ಬೆಳ್ತಂಗಡಿಯಲ್ಲಿ ಎಸ್ ವೈ ಎಸ್ ರಾಜ್ಯ ಕಾರ್ಯಕಾರಿಣಿ ಸಭೆ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯು ಸೆ.27ರಂದು ಬೆಳಗ್ಗೆ 9 ರಿಂದ ಸೆ.28ರ ಪೂ.11ಗಂಟೆಯವರೆಗೆ ಗುರುವಾಯನಕೆರೆ ಸಮೀಪದ ಮನ್ಶರ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಹಫೀಝ್ ಸಅದಿ ಮಡಿಕೇರಿ ಉದ್ಘಾಟಿಸುವರು.
ಸೈಯದ್ ಶಾಫಿ ನಈಮಿ ಹಾಸನ ಪ್ರಾರ್ಥನೆ ನಡೆಸುವರು. ಸುನ್ನೀ ಚಳವಳಿಯ ಉನ್ನತ ನಾಯಕರಾಗಿದ್ದ ಸೈಯದ್ ತಾಜುಲ್ ಉಲಮಾ ಹಾಗೂ ಮೌಲಾನಾ ನೂರುಲ್ ಉಲಮಾ ಪುಣ್ಯ ಸ್ಮರಣೆಗೆ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು ನೇತೃತ್ವ ನೀಡುವರು. ಮನ್ಸೂರ್ ಅಲಿ ಶಿವಮೊಗ್ಗ ತರಬೇತಿ ನಡೆಸುವರು ಎಂದು ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





