ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ’ಇಲೆಕ್ಟ್ರಿಕಲ್ ಪಾಯಿಂಟ್’ : ನ.27ರಿಂದ 2026ರ ಜ.10ರವರೆಗೆ ಕಡಿಮೆ ದರಗಳು, ಖಚಿತ ಉಡುಗೊರೆಯ ಆಫರ್

ಮಂಗಳೂರು, ನ.26: ವಿವಿಧ ನಮೂನೆಯ ಅಲಂಕಾರಿಕ ದೀಪ, ಫ್ಯಾನ್ ಗಳು ಮತ್ತಿತರ ಇಲೆಕ್ಟ್ರಿಕ್ ಸಾಧನಗಳ ಮಾರಾಟದಲ್ಲಿ ಕರಾವಳಿ ಕರ್ನಾಟಕದ ಮುಂಚೂಣಿ ಸಂಸ್ಥೆಯಾದ ನಗರದ ಕದ್ರಿ ರಸ್ತೆಯ ಬಂಟ್ಸ್ ಹಾಸ್ಟೆಲ್ ಬಳಿಯಿರುವ ’ಇಲೆಕ್ಟ್ರಿಕಲ್ ಪಾಯಿಂಟ್’ ನ. 27ರಂದು ಬೆಳ್ಳಿ ಹಬ್ಬ ಸಂಭ್ರಮ ಆಚರಿಸಲಿದೆ.
2000ರ ನ.27ರಂದು ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಸಂಸ್ಥೆ ಇಂದು ಬೃಹದಾಗಿ ಬೆಳೆದಿದೆ. ವಿವಿಧ ಕಂಪೆನಿಗಳ ಅಲಂಕಾರಿಕ ದೀಪಗಳು, ಫ್ಯಾನ್ ಗಳು, ವಾಟರ್ ಹೀಟರ್ ಗಳು, ಎಲ್ಇಡಿ ಟ್ಯೂಬ್ ಫಿಟ್ಟಿಂಗ್ಸ್, ಎಲ್ಇಡಿ ಪ್ಯಾನಲ್ ಫಿಟ್ಟಿಂಗ್ಸ್, ಎಲ್ಇಡಿ ಸ್ಟ್ರಿಪ್ ಲೈಟ್ಸ್, ಎಲ್ಇಡಿ ಬಲ್ಬ್ಸ್ ಮೊಡ್ಯುಲರ್ ಸ್ವಿಚಸ್ ಮತ್ತಿತರ ಸಾಧನೆಗಳ ಮಾರಾಟದಲ್ಲಿ ಕರಾವಳಿ ಕರ್ನಾಟಕದ ಮುಂಚೂಣಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.
ಸಂಸ್ಥೆಯ ಗ್ರಾಹಕಪರ ಕಾಳಜಿ, ಗ್ರಾಹಕರ ಸತತ ಪ್ರೀತಿ ವಿಶ್ವಾಸ ಗಳಿಸುವಲ್ಲಿ ’ಇಲೆಕ್ಟ್ರಿಕಲ್ ಪಾಯಿಂಟ್’ಗೆ ಸಹಕಾರಿಯಾಗಿದೆ. ಸಂಸ್ಥೆಯ ವಿಶಾಲ ಸ್ಥಳಾವಕಾಶ, ದೇಶ-ವಿದೇಶಗಳ ವಿವಿಧ ಖ್ಯಾತ ಕಂಪೆನಿಗಳ ಉತ್ಪಾದನೆಗಳು, ಸಾಮಗ್ರಿಗಳ ಅತ್ಯುತ್ತಮ ಜೋಡಣೆ ಮತ್ತು ಪ್ರದರ್ಶನ, ಆಯ್ಕೆಯಲ್ಲಿ ನುರಿತ ಸಿಬ್ಬಂದಿಯ ಮಾರ್ಗದರ್ಶನ ಇಂತಹ ಹಲವಾರು ಅಂಶಗಳು ’ಇಲೆಕ್ಟ್ರಿಕಲ್ ಪಾಯಿಂಟ್’ನ ಉನ್ನತಿಗೆ ಕಾರಣವಾಗಿವೆ.
’ಇಲೆಕ್ಟ್ರಿಕಲ್ ಪಾಯಿಂಟ್’ ವಿವಿಧ ಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ನೇರ ಮಾರಾಟಗಾರರಾಗಿದ್ದು ಅಲಂಕಾರಿಕ ದೀಪಗಳು, ಫ್ಯಾನ್, ವಿವಿಧ ನಮೂನೆಯ ಎಲ್ಇಡಿ ಸಾಮಗ್ರಿಗಳನ್ನು ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುವ ಕಾರಣ ಕಡಿಮೆ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಿದೆ. ವಿವಿಧ ಸಾಧನಗಳಿಗೆ ವಿವಿಧ ಪ್ರಮಾಣದ ರಿಯಾಯಿತಿಯಿದ್ದು, ಅಲಂಕಾರ ದೀಪಗಳಿಗೆ ಶೇ.45 ರಿಯಾಯಿತಿ ನೀಡಲಾಗುತ್ತದೆ.
ಬೆಳ್ಳಿ ಹಬ್ಬ ಮಾರಾಟ ಯೋಜನೆ ಮತ್ತು ಉಡುಗೊರೆ :
’ಇಲೆಕ್ಟ್ರಿಕಲ್ ಪಾಯಿಂಟ್’ ಬೆಳ್ಳಿ ಹಬ್ಬ ಮಾರಾಟ ಯೋಜನೆಯನ್ನು ಹಮ್ಮಿಕೊಂಡಿದೆ. ನ.27ರಿಂದ 2026 ಜನವರಿ 10ರವರೆಗೆ ಚಾಲ್ತಿಯಲ್ಲಿರುವ ಈ ಯೋಜನೆಯಲ್ಲಿ ಇಲೆಕ್ಟ್ರಿಕಲ್ ಉಪಕರಣ ಮತ್ತು ಸಾಮಗ್ರಿಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. 25ನೇ ವರ್ಷದ ಪ್ರಯುಕ್ತ 25,000 ರೂ.ಗೆ ಮೇಲ್ಪಟ್ಟ ಖರೀದಿಗೆ ಸ್ಥಳದಲ್ಲೇ ಖಚಿತ ಉಡುಗೊರೆ ದೊರೆಯಲಿದೆ. ಅಲಂಕಾರಿಕ ದೀಪಗಳಿಗೆ ಎಂದಿನಂತೆ ಶೇ.45ರಂತೆ ರಿಯಾಯಿತಿ ಇದೆ.
ರವಿವಾರ ಹೊರತು ಇತರ ದಿನಗಳಲ್ಲಿ (ರಜಾ ದಿನಗಳಲ್ಲಿಯೂ) ’ಇಲೆಕ್ಟ್ರಿಕಲ್ ಪಾಯಿಂಟ್’ ಶೋರೂಮ್ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಕ್ರೆಡಿಟ್ ಕಾರ್ಡ್ ಪಾವತಿಗೆ ಅವಕಾಶವಿದೆ.
ಸಂಸ್ಥೆಯ ವಿಳಾಸ :
’ಇಲೆಕ್ಟ್ರಿಕಲ್ ಪಾಯಿಂಟ್’, ಇಲೆಕ್ಟ್ರಿಕಲ್ ಪಾಯಿಂಟ್ ಕಾಂಪ್ಲೆಕ್ಸ್, ಬಂಟ್ಸ್ ಹಾಸ್ಟೆಲ್ ಬಳಿ, ಸಿ.ವಿ. ನಾಯಕ್ ಹಾಲ್ ಎದುರುಗಡೆ, ಕದ್ರಿ ರಸ್ತೆ, ಮಂಗಳೂರು - 575 003. ದೂ.ಸಂ: (0824-2447778 ವಾಟ್ಸ್ಆ್ಯಪ್: 9141691310. Email: electricalpoint@gmail.com Website: electricalpoint.net







