ಎಸ್ಐಆರ್: ಮೂಡುಬಿದಿರೆಯಲ್ಲಿ ಬಿಎಲ್ ಒಗೂ ಬಂತು ನೋಟಿಸ್!

ಸಾಂದರ್ಭಿಕ ಚಿತ್ರ (credit: Gemini AI)
ಮೂಡುಬಿದಿರೆ, ಸೆ.10: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR ) ಪ್ರಕ್ರಿಯೆಯಲ್ಲಿ ಮೂಡುಬಿದಿರೆ ತಾಲೂಕಿನ ಬಿಎಲ್ ಒ(BLO) ಒಬ್ಬರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ.
ಬಿ ಎಲ್ ಒ ಅಲಂಗಾರು ನಿವಾಸಿ ವಿದ್ಯಾ ಎಂಬವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಎಸ್ಐಆರ್ ಪ್ರಕ್ರಿಯೆಯ ವೇಳೆ ಜಾತಿ ಉಪನಾಮ ವಿಚಾರದ ಗೊಂದಲ ಕಾರಣ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಬಿಎಲ್ ಒ ವಿದ್ಯಾರಿಗೆ ಬಂದಿರುವ ಚುನಾವಣಾ ಆಯೋಗದ ನೋಟಿಸ್ನಲ್ಲಿ ಸೆ.8ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಅದರಂತೆ ಅವರು ಸೆ.8ರಂದು ಮೂಡುಬಿದಿರೆ ತಾಲೂಕು ಕಚೇರಿಗೆ ತೆರಳಿ ನೋಟಿಸ್ ಗೆ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.
"ನನ್ನ ಗಂಡನ ಜಾತಿ ಉಪನಾಮ ಮತ್ತು ನನ್ನ ತಂದೆಯ ಜಾತಿ ಉಪನಾಮ ಬೇರೆ ಬೇರೆಯಾಗಿದ್ದು, ಇದೇ ವಿಚಾರವಾಗಿ ನೋಟಿಸ್ ಜಾರಿಯಾಗಿರುವ ಸಾಧ್ಯತೆ ಇದೆ. ನೋಟಿಸ್ ಗೆ ಉತ್ತರವಾಗಿ ಈಗಾಗಲೇ ನನ್ನ ಎಸೆಸೆಲ್ಸಿ ಅಂಕಪಟ್ಟಿ ಮತ್ತು ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದೇನೆ'' ಎಂದು ವಿದ್ಯಾ 'ವಾರ್ತಾ ಭಾರತಿ'ಗೆ ಮಾಹಿತಿ ನೀಡಿದ್ದಾರೆ.




