ಎಸ್.ಐ.ಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಬೆಳ್ತಂಗಡಿಗೆ ಆಗಮನ
ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಪರಿಶೀಲನೆ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ಮುಖ್ಯಸ್ಥ ಪ್ರಣಬ್ ಕುಮಾರ್ ಮೊಹಾಂತಿ ಅವರು ರವಿವಾರ ಬೆಳ್ತಂಗಡಿಯ ಹೊಸ ಎಸ್.ಐ.ಟಿ ಕಚೇರಿಗೆ ಆಗಮಿಸಿ ಕಚೇರಿಯ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೊಸ ಕಟ್ಟಡದಲ್ಲಿ ಎಸ್.ಐ.ಟಿ ಕಚೇರಿ ಮಾಡಲಾಗಿದ್ದು, ಕಚೇರಿಯಲ್ಲಿ ಪರಿಶೀಲನೆ ಮಾಡಲು ಮಂಗಳೂರಿನಿಂದ ನೇರವಾಗಿ ಬೆಳ್ತಂಗಡಿಗೆ ರವಿವಾರ ಸಂಜೆ 6 ಗಂಟೆಗೆ ಆಗಮಿಸಿ ಪರಿಶೀಲನೆ ಮಾಡಿದರು.
ಪ್ರಣಬ್ ಮೊಹಾಂತಿ ಅವರ ಜೊತೆಯಲ್ಲಿ ಎಸ್.ಐ.ಟಿ ತಂಡದ ಹಿರಿಯ ಅಧಿಕಾರಿಗಳಾದ ಅನುಚೇತ್ ಐಪಿಎಸ್, ಎಸ್ಪಿ ಸಿ.ಎ.ಸೈಮನ್ ಹಾಗೂ ಇತರ ಅಧಿಕಾರಿಗಳು ಇದ್ದರು.
Next Story





