ಉದ್ಯಮಿ ಮುಮ್ತಾಝ್ ಅಲಿ ನಿಧನಕ್ಕೆ ಯು.ಟಿ ಖಾದರ್ ಸಂತಾಪ
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಸ್ಪೀಕರ್

ಕೃಷ್ಣಾಪುರ: ಉದ್ಯಮಿ, ಸಾಮಾಜಿಕ ಮುಂದಾಳು ಮುಮ್ತಾಝ್ ಅಲಿ ಅವರ ಅನಿರೀಕ್ಷಿತ ಅಗಲಿಕೆಗೆ ಸ್ಪೀಕರ್ ಯು.ಟಿ ಖಾದರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಆತ್ಮೀಯರಾಗಿದ್ದ ಮುಮ್ತಾಝ್ ಅಲಿ ಕೃಷ್ಣಾಪುರ ಅವರ ಅನಿರೀಕ್ಷಿತ ನಿಧನವು ದಿಗ್ಭ್ರಮೆ ಮತ್ತು ದುಃಖ ನೋವು ತಂದಿದೆ. ಸಮಾಜಕ್ಕೆ ಮತ್ತು ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದದ, ಸಾಮರಸ್ಯದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಹೇಳಿದ್ದಾರೆ.
ಸಮಾಜಕ್ಕೆ ಅವರ ಕೊಡುಗೆಯು ಅನನ್ಯವಾದುದು. ಇದೀಗ ಹಲವಾರು ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳ ನೇತೃತ್ವ ಅನಾಥವಾಗಿದೆ. ಅವರ ನಿಧನದ ಸುದ್ದಿ ಸಹಿಸಲಾರದಷ್ಟು ದುಖ ತಂದಿದೆ. ಅವರನ್ನು ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆಂದು ಕುಟುಂಬಿಕರು ಆರೋಪಿಸಿದ್ದು, ಅವರು ಯಾರೇ ಆಗಿರಲಿ ಅವರ ಮೇಲೆ ಕಠಿಣ ಕ್ರಮ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಮೃತರ ಕುಟುಂಬಿಕರು, ಸ್ನೇಹಿತರಿಗೆ ದುಖ ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಎಂದು ಜರ್ಮನಿ ಪ್ರವಾಸದಲ್ಲಿರುವ ಯು.ಟಿ ಖಾದರ್ ಅವರು ಪ್ರಾರ್ಥಿಸಿದ್ದಾರೆ.





