ಭೀಮದಲ್ಲಿ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಆಫರ್

ಮಂಗಳೂರು, ಆ.5: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ 2025ರ ಅಗಸ್ಟ್ 1ರಿಂದ ಆಗಸ್ಟ್ 17ರ ರವರೆಗೆ ಭೀಮದ ಎಲ್ಲಾ ಮಳಿಗೆಗಳು ಹಾಗೂ ಆನ್‌ಲೈನ್‌ನಲ್ಲಿ ಚಿನ್ನ ಮತ್ತು ಬೆಳ್ಳಿ, ವಜ್ರ ಆಭರಣಗಳ ಖರೀದಿಯಲ್ಲಿ ವಿಶೇಷ ರಿಯಾಯತಿ ಲಭ್ಯವಿರುತ್ತದೆ.
ಭೀಮ ಶುಭ ವರಮಹಾಲಕ್ಷ್ಮೀ ಯು ಗ್ರಾಹಕರಿಗೆ ಚಿನ್ನ ಮತ್ತು ಬೆಳ್ಳಿಯ ದರಗಳ ಮೇಲೆ ಶೇ 10ವರೆಗೆ ರಿಯಾಯಿತಿ ಯನ್ನು ನೀಡುತ್ತಿದೆ. ಹೀಗಾಗಿ ಇವುಗಳ ಮೇಲೆ ಹೂಡಿಕೆ ಮಾಡಲು ಇದು ಒಂದು ಸುವರ್ಣ ಅವಕಾಶವಾಗಿದೆ. ವಜ್ರಪ್ರಿಯರಿಗಾಗಿ ಭೀಮ ವಜ್ರದ ಆಭರಣಗಳ ಪ್ರತಿ ಕ್ಯಾರೆಟ್ ಮೇಲೆ ಫ್ಲಾಟ್ 7,000 ರಿಯಾಯಿತಿ ನೀಡುತ್ತಿದೆ ಮತ್ತು ಚಿನ್ನದ ದರಗಳ ಮೇಲೆ ಫ್ಲಾಟ್ ಶೇ 10ರಷ್ಟು ರಿಯಾಯಿತಿಯನ್ನು ನೀಡುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಇಚ್ಚಿಸುವ ಗ್ರಾಹಕರಿಗೆ. ಚಿನ್ನ ಮತ್ತು ಬೆಳ್ಳಿಯ ದರಗಳ ಮೇಲೆ ಫ್ಲಾಟ್ ಶೇ 10ರಷ್ಟು ರಿಯಾಯತಿಯ ಜೊತೆಗೆ ಮೇಕಿಂಗ್ ಚಾರ್ಜ್‌ನ ಮೇಲೆ ಶೇ 20ರಷ್ಟು ರಿಯಾಯಿತಿ ಸಿಗುತ್ತದೆ. ವಜ್ರದ ಮೌಲ್ಯದ ಮೇಲೆ ಹೆಚ್ಚಿನ ಶೇ 20ರಷ್ಟು ರಿಯಾಯಿತಿಯ ಜೊತೆಗೆ ಚಿನ್ನದ ದರಗಳ ಮೇಲೆ ಶೇ 10ರಷ್ಟು ರಿಯಾಯಿತಿ ಲಭ್ಯವಿದೆ. ಅಷ್ಟೇ ಅಲ್ಲ. ಪ್ರತಿ 50, 000 ರೂಪಾಯಿ ಬೆಲೆಯ ಖರೀದಿಯ ಮೇಲೆ ಗ್ರಾಹಕರಿಗೆ 1,000 ರೂಪಾಯಿ ರಿಯಾಯಿತಿ ಸಹ ಸಿಗಲಿದೆ.
ಒಂದು ಶತಮಾನದಷ್ಟು ದೀರ್ಘ ಪರಂಪರೆಯನ್ನು ಹೊಂದಿರುವ ಭೀಮ, ತನ್ನ ಅತ್ಯಂತ ನವಿರಾದ ಕಲೆಗಾರಿಕೆ, ಕರಕುಶಲತೆ ಮತ್ತು ನವೀನ ವಿನ್ಯಾಸಗಳಿಗೆ ಬಹಳಷ್ಟು ಹೆಸರುವಾಸಿಯಾಗಿದೆ. ಭೀಮ ತಯಾರಿಸುವ ಪ್ರತಿಯೊಂದು ಅಭರಣವು ಸಹ ಬ್ರ್ಯಾಂಡ್‌ನ ಪ್ರಮಾಣಿತ ಗುಣಮಟ್ಟದ ಬದ್ಧತೆಗೆ ಸಾಕ್ಷಿಯಾಗಿದೆ. ಗುಣಮಟ್ಟ ಮತ್ತು ಶುದ್ಧತೆಯನ್ನು ತಲೆತಲಾಂತರಗಳಿಂದ ಕಾಪಾಡಿಕೊಂಡು ಬಂದಿರುವ ಭೀಮ, ಆಭರಣದ ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಿನ ಜೊತೆಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಮತ್ತು ನಿರಂತರವಾಗಿ ತನ್ನ ಗ್ರಾಹಕರ ನಿಷ್ಠೆ ಮತ್ತು ಪ್ರಶಂಸೆಗೆ ಪಾತ್ರವಾಗಿದೆ ಎಂದು ಭೀಮ ಗೋಲ್ಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.







