ಮಂಗಳೂರಿನ ಬಿಜೈಯ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಸೂಪರ್ ಇಯರ್ ಸೇಲ್

ಮಂಗಳೂರು, ಆ.8: ನಗರದ ಬಿಜೈಯಲ್ಲಿರುವ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಐದನೇ ವಾರ್ಷಿಕ ಉತ್ಸವದ ಪ್ರಯುಕ್ತ ಸೂಪರ್ ಇಯರ್ ಸೇಲ್ ಈಗಾಗಲೆ ಆರಂಭಗೊಂಡಿದ್ದು, ಆ.17ರವರೆಗೆ ಇದು ಮುಂದುವರಿಯಲಿದೆ. ಐದನೇ ವಾರ್ಷಿಕ ಉತ್ಸವದ ಪ್ರಯುಕ್ತ ಆಯ್ದ ಶ್ರೇಣಿಗಳ ಮೇಲೆ ಶೇ.50ರವರೆಗೆ ರಿಯಾಯಿತಿ ಇದೆ. ಅದಲ್ಲದೆ 5 ಸಾವಿರ ರೂ.ಗಿಂತ ಮೇಲ್ಪಟ್ಟು ವಸ್ತುಗಳನ್ನು ಖರೀದಿಸಿದರೆ ಹೆಚ್ಚುವರಿ ಶೇ.5ರಷ್ಟು ರಿಯಾಯಿತಿ ಇದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ನಾಲ್ಕು ಮಹಡಿಗಳ ಬೃಹತ್ ಶಾಪಿಂಗ್ ಮಾಲ್ ಹೊಂದಿರುವ ಇದು ಕರ್ನಾಟಕದಲ್ಲೇ ಅತಿದೊಡ್ಡ ಶೋರೂಂ ಆಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ. ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್ ಕಲೆಕ್ಷನ್‌ನಿಂದ ಮಕ್ಕಳ ಉಡುಗೆಗಳವರೆಗೆ, ಅತ್ಯುತ್ತಮ ಮತ್ತು ನೂತನ ಕಲೆಕ್ಷನ್ ಲಭ್ಯವಿದೆ.
ಪುಟ್ಟ ಮಕ್ಕಳ ಮೋಜಿಗೂ ಸ್ಥಳವನ್ನು ಮೀಸಲಿರಿಸಲಾಗಿದೆ. ವ್ಯಾಪಕ ಸಂಗ್ರಹದ, ಅತ್ಯುತ್ತಮ ಗುಣಮಟ್ಟದ ಉತ್ತಮ ಶ್ರೇಣಿಯ ಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮಿ ಸಿಲ್ಕ್ಸ್ ಈಗಾಗಲೇ ಮಂಗಳೂರಿನಲ್ಲಿ ಮನೆ ಮಾತಾಗಿದೆ.







