ತಲಪಾಡಿ:ಕಾರು ಢಿಕ್ಕಿ; ಪಾದಚಾರಿಗೆ ಗಾಯ

ಉಳ್ಳಾಲ: ಪಾದಚಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡ ಘಟನೆ ತಲಪಾಡಿಯಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.
ಗದಗ ನಿವಾಸಿ ಶರಣಪ್ಪ (50) ಗಂಭೀರ ಗಾಯಗೊಂಡವರು . ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಗೆ ಕೇರಳ ನೋಂದಾಯಿತ ಕಾರು ಢಿಕ್ಕಿ ಹೊಡೆದಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




