ತಲಪಾಡಿ | ಮಟ್ಕಾ ಅಡ್ಡೆಗೆ ಪೊಲೀಸ್ ದಾಳಿ: ನಾಲ್ವರ ಬಂಧನ

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪ ಬಾರ್ ಒಂದರ ಬಳಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಇನ್ ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ಪೊಲೀಸರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಲಪಾಡಿ ಅಲಂಕಾರ ಗುಡ್ಡೆ ನಿವಾಸಿ ಗುಣಕರ ಶೆಟ್ಟಿ ಯಾನೆ ಗುಣಪಾಲ ಶೆಟ್ಟಿ(47), ಹೊಸಂಗಡಿ ನಿವಾಸಿ ಜೆ.ಸೋನಾಲ್(23), ಮಂಜೇಶ್ವರ ಶಾಂತಿ ಗ್ರಾಮ ನಿವಾಸಿಗಳಾದ ಸುಚೇಂದ್ರ ಕುಮಾರ್ (26) ಮತ್ತು ಸಚಿನ್ (24) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಜೂಜಾಟ ಕ್ಕೆ ಬಳಸಿದ ನಗದು 4,220 ರೂ, ಹಾಗೂ ಇತರ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





