ಸೂರಲ್ಪಾಡಿ ಅಲ್ಖೈರ್ ಇಸ್ಲಾಮಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು: ಸೂರಲ್ಪಾಡಿ ಅಲ್ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಗುರುಗಳಿಗೆ ಕೃತಜ್ಞತೆಯ ನಮನ ಸಲ್ಲಿಸಿದರು. ಈ ಸಂದರ್ಭ ಒಂದು ದಿನವೂ ರಜೆ ಮಾಡದೆ ನಿಸ್ವಾರ್ಥ ಸೇವೆ ಸಲ್ಲಿಸಿದ ಶಿಕ್ಷಕಿ ಮಾಧವಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಅಧ್ಯಕ್ಷ ಮುಶ್ತಾಕ್ ಸಾದ್, ಗೌರವಾಧ್ಯಕ್ಷ ಅಬ್ದುಲ್ ಮಜೀದ್, ಮಲ್ಹರುಲ್ ಅವಾಖಿಫ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಸಾಗರ್, ಸದರ್ ಮುಅಲ್ಲಿಂ ಇಲ್ಯಾಸ್ ನಿಜಾಮಿ, ಮುಖ್ಯ ಶಿಕ್ಷಕಿ ಕಲಂದರ್ ಬೀವಿ, ಅರಬಿಕ್ ವಿಭಾಗದ ಮುಖ್ಯಸ್ಥ ದಾವೂ್ ಹುದವಿ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮುಖ್ತಾರ್, ಖಜಾಂಚಿ ಬಿ.ಎಸ್. ಶರೀಫ್, ಸಂಚಾಲಕ ಅಲಿ ಅಬ್ಬಾಸ್, ಗ್ರಾಪಂ ಸದಸ್ಯ ಇರ್ಫಾನ್, ಟ್ರಸ್ಟಿ ಆರ್.ಎಸ್.ಮುಹಮ್ಮದ್, ಅರಬಿಕ್ ಉಸ್ತಾದ್ ಶಂಸುದ್ದೀನ್ ಹುದವಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶೈಹಾನ್ ಸ್ವಾಗತಿಸಿದರು. ಜುಹಾ ಫಾತಿಮಾ ವಂದಿಸಿದರು. ರಝಾ ಕಾರ್ಯಕ್ರಮ ನಿರೂಪಿಸಿದರು.
Next Story





