ತೊಕ್ಕೊಟ್ಟು: 'ಸಾಗರ್ ಸಿಲ್ಕ್ಸ್ ಆ್ಯಂಡ್ ಸಾರೀಸ್'ನ ನೂತನ ಮಳಿಗೆ ಶುಭಾರಂಭ

ಮಂಗಳೂರು, ಫೆ.16: ತೊಕ್ಕೊಟ್ಟು ಜಂಕ್ಷನ್ನಲ್ಲಿ 'ಸಾಗರ್ ಸಿಲ್ಕ್ಸ್ ಆ್ಯಂಡ್ ಸಾರೀಸ್'ನ ನೂತನ ಮಳಿಗೆಯು ರವಿವಾರ ಬೆಳಗ್ಗೆ ಶುಭಾರಂಭಗೊಂಡಿತು.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಆಗಿನ್ನೂ ಅಭಿವೃದ್ಧಿ ಹೊಂದದ ತೊಕ್ಕೊಟ್ಟುವಿನಲ್ಲಿ ಧೈರ್ಯದಿಂದ ವಸ್ತುಗಳ ಮಳಿಗೆಯನ್ನು ಆರಂಭಿಸಿದ್ದ ಇಸ್ಮಾಯೀಲ್ ಗ್ರಾಹಕರ ವಿಶ್ವಾಸಗೊಳಿಸುವ ಮೂಲಕ ಈ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. 200ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿ ಅವರ ಕುಟುಂಬದ ಬಾಳು ಬೆಳಗಿಸಿರುವುದು ಶ್ಲಾಘನೀಯ ಎಂದರು.
ಅತ್ಯಂತ ತಾಳ್ಮೆಯಿಂದ ಗ್ರಾಹಕರ ಜೊತೆ ವ್ಯವಹರಿಸಿ ಅವರ ಪ್ರೀತಿ, ವಿಶ್ವಾಸ ಗಳಿಸುವುದು ಸಣ್ಣ ಸಂಗತಿಯಲ್ಲ. ಈವತ್ತು ಸಾಗರ್ ಬಟ್ಟೆ ಮಳಿಗೆಯು ತೊಕ್ಕೊಟ್ಟು ಪರಿಸರಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಸರಗೋಡು, ಮಂಗಳೂರಿಗರು ಕೂಡ ಸಾಗರ್ ಮಳಿಗೆಗೆ ಬರುವಂತಾಗಿದೆ. ಇದು ಇಸ್ಮಾಯೀಲ್ ಅವರ ವ್ಯಾಪಾರದ ಗುಟ್ಟಾಗಿದೆ. ಆ ಮೂಲಕ ಯುವ ಸಮೂಹಕ್ಕೆ ಇಸ್ಮಾಯೀಲ್ ಸ್ಫೂರ್ತಿಯಾಗಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ತೊಕ್ಕೊಟ್ಟು ಸೈಂಟ್ ಸೆಬೆಸ್ಟಿಯನ್ ಚರ್ಚ್ನ ಫಾ. ಸಿಪ್ರಿಯಾನ್ ಪಿಂಟೋ, ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ, ಚಾರ್ಟಡ್ ಅಕೌಂಟೆಂಟ್ ಅಬ್ದುಲ್ ಸಮದ್, ತೊಕ್ಕೊಟ್ಟು ವರ್ತಕರ ಸಂಘದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕೌನ್ಸಿಲರ್ ಗಳಾದ ಬಾಝಿಲ್ ಡಿಸೋಜ, ಅಯ್ಯೂಬ್ ಮಂಚಿಲ, ವೀಣಾ ಉಳಿಯ, ಸಿಪಿಎಂ ನಾಯಕ ಕೃಷ್ಣಪ್ಪ ಸಾಲ್ಯಾನ್, ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ, ಕೆಥೊಲಿಕ್ ಸಂಘಟನೆಯ ಮುಖಂಡ ರಾಬರ್ಟ್ ವರ್ಗೀಸ್, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಪತ್ರಕರ್ತ ವಿದ್ಯಾಧರ ಶೆಟ್ಟಿ, ಉದ್ಯಮಿ ರಮಾನಾಥ ಎಂ. ಕೋಟ್ಯಾನ್, ಸಿವಿಲ್ ಗುತ್ತಿಗೆದಾರ ಅನಿಲ್ ವರ್ಗಿಸ್, ಮನ್ಸೂರ್ ಅಹ್ಮದ್ ಆಝಾದ್, ನವಾಝ್ ಉಳ್ಳಾಲ್, ಮುಹಮ್ಮದ್ ಮೋನು, ಎನ್.ಎಸ್.ಕರೀಂ, ಆರ್.ಎಂ.ಸಲೀಂ ಕುಂಪಲ, ಅಸ್ಗರ್ ಡೆಕ್ಕನ್ ಪ್ಲಾಸ್ಟಿಕ್, ಬಶೀರ್ ಹಾಜಿ ಡೆಕ್ಕನ್ ಪ್ಲಾಸ್ಟಿಕ್ ಭಾಗವಹಿಸಿದ್ದರು.
ಸಾಗರ್ ಕಲೆಕ್ಷನ್ ಮಾಲಕ ಇಸ್ಮಾಯೀಲ್ ಯು.ಎ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಎಂ.ಸಿ.ಅಬ್ದುಲ್ ರಹ್ಮಾನ್, ಹ್ಯಾಡ್ರಿಯನ್ ವೇಗಸ್, ಫಾತಿಮಾ ಶಝಾ, ಯಶ್ಪಾಲ್ ಬಗಂಬಿಲ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಆಶಿಯಾ ಹುದಾ ಕಿರಾಅತ್ ಪಠಿಸಿದರು. ನಸೀರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಯು.ಬಿ. ಸಲೀಂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.
*ನೂತನ ಮಳಿಗೆಯಲ್ಲಿ ಮದುವೆಯ ಎಲ್ಲಾ ವಸ್ತ್ರಗಳು ಲಭ್ಯವಿವೆ. 10 ಸಾವಿರ ರೂ.ಗಿಂತ ಅಧಿಕ ಮೌಲ್ಯದ ವಸ್ತ್ರಗಳನ್ನು ಖರೀದಿಸಿದರೆ ವಿಶೇಷ ಕೊಡುಗೆ ನೀಡಲಾಗುವುದು.1985ರಲ್ಲಿ ಆರಂಭಗೊಂಡ 'ಸಾಗರ್' ಕಂಪೆನಿಯ ಅಧೀನದಲ್ಲಿ ತೊಕ್ಕೊಟ್ಟಿನಲ್ಲಿ ಸಾಗರ್ ಕಲೆಕ್ಷನ್ ಮತ್ತು ಮಂಗಳೂರಿನ ಟೋಕಿಯೊ ಮಾರ್ಕೆಟ್ನಲ್ಲಿ ಸಾಗರ್ ವೆಡ್ಡಿಂಗ್ ಮಳಿಗೆಯು ಕಾರ್ಯಾಚರಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.







