ತೊಕ್ಕೊಟ್ಟು ಕಿಯೋನಿಕ್ಸ್ ಯುವ.ಕಾಮ್‌ಗೆ ರಾಜ್ಯಮಟ್ಟದ ಪ್ರಶಸ್ತಿ

ಉಳ್ಳಾಲ: ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತೊಕ್ಕೊಟ್ಟುವಿನ ಕಿಯೋನಿಕ್ಸ್ ಯುವ.ಕಾಮ್ ಕಂಪ್ಯೂಟರ್ ತರಬೇತಿ ಸಂಸ್ಥೆಯು ರಾಜ್ಯಮಟ್ಟದ ಅತ್ಯುತ್ತಮ ನಿರ್ವಹಣಾ ಕೇಂದ್ರಗಳ ಪೈಕಿ ಎಂಟನೇ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಿಯೋನಿಕ್ಸ್ ಸಂಸ್ಥೆಯ 50ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯದ ಅತ್ಯುತ್ತಮ ನಿರ್ವಹಣಾ ಕೇಂದ್ರಗಳ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 21 ಕಿಯೋನಿಕ್ಸ್ ಕೇಂದ್ರಗಳು ಆಯ್ಕೆಯಾಗಿದ್ದು, ಅವುಗಳ ಪೈಕಿ ತೊಕ್ಕೊಟ್ಟುವಿನ ಕಿಯೋನಿಕ್ಸ್ ಯುವ.ಕಾಮ್ ಎಂಟನೇ ಸ್ಥಾನ ಗಳಿಸಿದೆ.
ಸಮಾರಂಭದಲ್ಲಿ ಕಿಯೋನಿಕ್ಸ್ ಯುವ.ಕಾಮ್ ಸಂಸ್ಥೆಯ ಮಾಲಕ ಶಾದತ್ ನಾಲೂರು ಅವರು ಕರ್ನಾಟಕ ಸರ್ಕಾರದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
Next Story




