Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉಳ್ಳಾಲ| ಅಂಬ್ಲಮೊಗರು ಶಾಲೆಯ ಮುಖ್ಯ...

ಉಳ್ಳಾಲ| ಅಂಬ್ಲಮೊಗರು ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಶೆಟ್ಟಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ4 Sept 2025 6:26 PM IST
share
ಉಳ್ಳಾಲ| ಅಂಬ್ಲಮೊಗರು ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಶೆಟ್ಟಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಮಂಗಳೂರು: ಉಳ್ಳಾಲ ತಾಲೂಕಿನ ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಜಗದೀಶ ಶೆಟ್ಟಿ ಎ. ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

1988ರ ನ.1ರಂದು ಶಿಕ್ಷಕರಾಗಿ ವೃತ್ತಿ ಬದುಕಿಗೆ ಕಾಲಿಟ್ಟ ಇವರು 37 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿದ್ದಾರೆ.

ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇರಾಬಾಳೆಪುಣಿ ಬಂಟ್ವಾಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ್ಲಮೊಗರುನಲ್ಲಿ ಸೇವೆ ಸಲ್ಲಿಸಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಾಧನೆ:-

► ಅಂಬ್ಲಮೊಗರುನಲ್ಲಿ ಪ್ರೌಢಶಾಲೆ ಸ್ಥಾಪನೆ

► ಸ್ಥಳೀಯ ಜಾಗ ಸ್ವಾಧೀನತೆಯ ಕುಮ್ಕಿ ಹಕ್ಕುದಾರರ ಮನವೊಲಿಸಿ ಪ್ರೌಢ ಶಾಲೆಗೆ 2.27 ಎಕ್ರೆ ಜಾಗ ಮಂಜೂರು

► 1.28 ಕೋಟಿ ರೂ. ಅನುದಾನದ ಪ್ರೌಢಶಾಲಾ ಕಟ್ಟಡ ನಿರ್ಮಾಣ

► ಶಾಲೆಯ ದಾಖಲಾತಿ 106 ರಿಂದ 217 ಕ್ಕೆ ಏರಿಕೆ

► ಸಹಶಿಕ್ಷಕರ ಆರ್ಥಿಕ ಸಹಕಾರದಲ್ಲಿ ಉಚಿತ ಶಾಲಾ ಬಸ್ ವ್ಯವಸ್ಥೆ

► ದಾನಿಗಳ ಸಹಕಾರದಿಂದ ಉಚಿತ ಎಲ್ ಕೆ ಜಿ, ಯು ಕೆ ಜಿ

► 1 ರಿಂದ 8 ನೇ ತರಗತಿ ವರೆಗೆ ದ್ವಿಭಾಷಾ (ಕನ್ನಡ ಮತ್ತು ಆಂಗ್ಲ)ಮಾಧ್ಯಮ ತರಗತಿ

► ದಾನಿಗಳ ಸಹಕಾರದಿಂದ ನಾಲ್ಕು ಮಂದಿ ಗೌರವ ಶಿಕ್ಷಕರ ನೇಮಕಾತಿ

► ದಾನಿಗಳ ಸಹಕಾರದಲ್ಲಿ ಶಾಲಾ ಸಹಾಯಕಿ ನೇಮಕಾತಿ

► ದಾನಿಗಳ ಸಹಕಾರದಿಂದ ಸ್ಮಾರ್ಟ್ ಟಿ ವಿ, ಕಂಪ್ಯೂಟರ್ ಮೂಲಕ ಬೋಧನೆ

► ಶಾಶ್ವತ ದತ್ತಿನಿಧಿ ಸ್ಥಾಪಿಸಿ ಪ್ರತಿಭಾ ಪುರಸ್ಕಾರ

► ದಾನಿಗಳ ಸಹಕಾರದಲ್ಲಿ ಕಂಪ್ಯೂಟರ್ ಕೊಠಡಿ ನಿರ್ಮಾಣ

► ನಾವೀನ್ಯಯುತ ಪೀಠೋಪಕರಣಗಳ ಪೂರೈಕೆ

► ದಾನಿಗಳ ಸಹಕಾರದಲ್ಲಿ ಅಕ್ಷರ ದಾಸೋಹ, ದಾಸ್ತಾನು, ಶೌಚಾಲಯಗಳ ನವೀಕರಣ

► ದಾನಿಗಳ ಸಹಕಾರದಲ್ಲಿ ಕಟ್ಟಡ ಸುರಕ್ಷತೆಗೆ ಶೀಟ್ ಅಳವಡಿಕೆ

► ದಾನಿಗಳ ನೆರವಿನಿಂದ ಶಾಲಾ ಶತಮಾನೋತ್ಸವ ಸ್ಮರಣಾರ್ಥ ಕ್ಷೇತ್ರಶಿಕ್ಷಣಾಧಿಕಾರಿಗಳ ಇಲಾಖೆ ಉಪಯೋಗಕ್ಕೆ ಬೊಲೆರೋ ಕಾರು ಕೊಡುಗೆ

► ಒಂದು ಕೋಟಿ ವೆಚ್ಚದ ಶಾಲಾ ಶತಮಾನೋತ್ಸವ ಸ್ಮಾರಕ ಭವನ ನಿರ್ಮಾಣ ಹಂತದಲ್ಲಿದೆ

► ಶಾಲಾ ಸ್ಥಳದಾನಿಯವರ ಹೆಸರಿನಲ್ಲಿ ಅವರ ಮಕ್ಕಳ ಕೊಡುಗೆಯಾಗಿ ಬಯಲು ರಂಗಮಂದಿರ ನಿರ್ಮಾಣ ಹಂತದಲ್ಲಿ ಇದೆ

► ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಪಂದ್ಯಾಟ, ಸ್ಕೌಟ್ ಗೈಡ್ ಮೇಳ ಹಾಗೂ ಉತ್ಸವ, ಎನ್ ಎಸ್ ಎಸ್ ಶಿಬಿರ, ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ ಹಲವು ಬಾರಿ ಆ ಯೋಜನೆ ಮಾಡಲಾಗಿದೆ.

ಸಂಪನ್ಮೂಲ ವ್ಯಕ್ತಿಯಾಗಿ:-

► ಸ್ಕೌಟ್ ಶಿಕ್ಷಕರಾಗಿ 35 ವರ್ಷಗಳಿಂದ ಮಕ್ಕಳಿಗೆ ತರಬೇತಿ

► ಸ್ಕೌಟ್ ಗೈಡ್ ರಾಷ್ಟ್ರೀಯ ಸಂಸ್ಥೆಯಿಂದ ಅಸಿಸ್ಟೆಂಟ್ ಲೀಡರ್ ಟ್ರೈನರ್ ಉನ್ನತ ತರಬೇತಿ ಪಡೆದು ರಾಜ್ಯದಲ್ಲಿ ಅನೇಕ ಶಿಕ್ಷಕರಿಗೆ ತರಬೇತಿ ನೀಡಿರುವುದು ಮತ್ತು ದೆಹಲಿ, ಒರಿಸ್ಸಾ , ಕೇರಳ, ಮಧ್ಯಪ್ರದೇಶ, ನೇಪಾಳ, ವಾರಣಾಸಿ, ಅಂಡಮಾನ್ ಮುಂತಾದ ರಾಜ್ಯಗಳಲ್ಲಿ ತರಬೇತುದಾರರ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಅನುಭವ.

► ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾಗಿ ರಾಜ್ಯಮಟ್ಟದ ಸಮುದಾಯ ಅಭಿವೃದ್ಧಿ ಶಿಬಿರ, ರಾಜ್ಯಮಟ್ಟದ ಕಬ್ ಬುಲ್ ಬುಲ್ ಉತ್ಸವ, ಎರಡು ಬಾರಿ ಜಿಲ್ಲಾ ಮಟ್ಟದ ಸ್ಕೌಟ್ ಗೈಡ್ ಮೇಳ ಹಾಗೂ ಉತ್ಸವ ಮತ್ತು ತಾಲೂಕು ಮಟ್ಟದ ಅನೇಕ ಸ್ಕೌಟ್ ಮತ್ತು ಗೈಡ್ಸ್ ಮೇಳ ಹಾಗೂ ಉತ್ಸವಗಳ ನೇತೃತ್ವ ವಹಿಸಿ ಯಶಸ್ವಿ ಆಯೋಜನೆ.

ಸಂಘಟಕರಾಗಿ:-

► ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಕಳೆದ 14 ವರ್ಷಗಳಿಂದ ತಾಲೂಕು ಅಧ್ಯಕ್ಷರಾಗಿ ನಿಷ್ಠಾವಂತ ನಾಯಕರಾಗಿ ಸಂಘಟನೆ

► ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾಗಿ

► ತಾಲೂಕು ಸಾಕ್ಷರತಾ ಮುಂದುವರಿಕೆ ಕಲಿಕಾ ಕೇಂದ್ರದ ಕಾರ್ಯದರ್ಶಿಯಾಗಿ

► ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿಯಾಗಿ

► ಮೀಂಜ ಬಂಟರ ಸಂಘದ ಅಧ್ಯಕ್ಷರಾಗಿ ತನ್ನ ಅವಧಿಯಲ್ಲಿ ದಾನಿಗಳ ನೆರವಿನಿಂದ ಸ್ವಂತ ನಿವೇಶನ ಖರೀದಿಸಿ ಮಿನಿ ಸಭಾಭವನ ಹಾಗೂ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು ಅಲ್ಲದೆ , ಸಮುದಾಯದ ಉಪಯೋಗಕ್ಕೆ ಒಂದು ಎಕರೆ ಜಾಗವನ್ನು ಮಹದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಂದ ದಾನವಾಗಿ ಪಡೆಯುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮ.

ವಿದ್ಯಾರ್ಹತೆ:-

► ಶಿಕ್ಷಕ ತರಬೇತಿ

► ಬಿ ಎ ಪದವಿ

► ಕನ್ನಡ ರತ್ನ

► ಹಿಂದಿ ರತ್ನ

► ಹೈಯರ್ ಗ್ರೇಡ್ ಡ್ರಾಯಿಂಗ್

ಪ್ರಗತಿಪರ ಕೃಷಿಕರಾಗಿ:- ಭತ್ತ ,ಅಡಿಕೆ ,ತೆಂಗು ,ಬಾಳೆ, ರಬ್ಬರ್ ಕೃಷಿ ಅಲ್ಲದೆ ರಂಬುಟನ್, ಬಟರ್ ಫ್ರೂಟ್, ಮ್ಯಾಂಗಸ್ಟಿನ್ ಮುಂತಾದ ಹಣ್ಣುಗಳ ಕೃಷಿಯಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಅವರು ಪ್ರಗತಿಪರ ಕೃಷಿಕ .

ಪಡೆದ ಪ್ರಶಸ್ತಿ ಪುರಸ್ಕಾರಗಳು:-

► ಉತ್ತಮ ಶಿಸ್ತು ಶಾಲಾ ಪ್ರಶಸ್ತಿ

► ಉತ್ತಮ ನೈರ್ಮಲ್ಯ ಶಾಲಾ ಪ್ರಶಸ್ತಿ

► ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ

► ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

► ಕೇರಳ ರಾಜ್ಯ ತುಳು ಅಕಾಡೆಮಿ ಪ್ರಶಸ್ತಿ

► ಸ್ಕೌಟಿಂಗ್ ದೀರ್ಘ ಸೇವಾ ಪ್ರಶಸ್ತಿ

► ಉತ್ತಮ ಜೇಸಿ ಶಿಕ್ಷಕ ಪ್ರಶಸ್ತಿ

► ರೋಟರಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

►ಕರಾವಳಿ ಸಾಂಸ್ಕೃತಿಕ ಪರಿಷತ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

► ಶಾಲಾ ಶತಮಾನೋತ್ಸವ ಗೌರವ ಸನ್ಮಾನ

ಕೌಟುಂಬಿಕ ಮಾಹಿತಿ:-

ಇವರು ಮಂಜೇಶ್ವರ ಕುಳೂರು ಎಲಿಯಾಣದ ಕೃಷಿ ಕುಟುಂಬದ ಸೇಕಪ್ಪ ಶೆಟ್ಟಿ ಮತ್ತು ಕಮಲ ದಂಪತಿಗಳ ಐವರು ಮಕ್ಕಳಲ್ಲಿ ಓರ್ವ. ಇವರ ಪತ್ನಿ ತಲಪಾಡಿ ಪಟ್ನ ಸರಕಾರಿ ಶಾಲಾ ಶಿಕ್ಷಕಿ.

ಮಕ್ಕಳಿಬ್ಬರು ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿ ಸ್ವಂತ ಉದ್ಯೋಗದಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X