ಉಳ್ಳಾಲ | ಖಾಸಗಿ ಕಾಲೇಜು ವಿದ್ಯಾರ್ಥಿ ನಾಪತ್ತೆ : ಪ್ರಕರಣ ದಾಖಲು

ಮಾಲಿಕ್ ಅಬೂಬಕರ್
ಉಳ್ಳಾಲ: ದೇರಳಕಟ್ಟೆ ಖಾಸಗಿ ಕಾಲೇಜು ವಿದ್ಯಾರ್ಥಿ ಮಾಲಿಕ್ ಅಬೂಬಕರ್ ನಾಪತ್ತೆಯಾದ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಪಾಲಕ್ಕಾಡ್ ನಿವಾಸಿ ರಾಬಿಯ, ಅಬೂಬಕರ್ ದಂಪತಿಯ ಪುತ್ರ ಮಾಲೀಕ್ ಅಬೂಬಕರ್ ಅವರು ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್ವೈಎಸ್ ಶಿಕ್ಷಣ ಪಡೆಯುತ್ತಿದ್ದು, ಅವರು ತಅಬ್ದುಲ್ ಶರೀಫ್ ಎಂಬವರ ಪಿಜಿಯಲ್ಲಿ ವಾಸವಾಗಿದ್ದರು. ನ.13 ರಂದು ರಾತ್ರಿ ಊಟ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಪಿಜಿಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ .
ಈ ಕುರಿತು ಮಾಲೀಕ್ ಅಬೂಬಕರ್ ಅವರ ತಾಯಿಯ ತಮ್ಮ ಫಿಸಿಯೊತೆರಪಿ ವೈದ್ಯ ಅಝ್ಮಲ್ ಟಿ.ಎ. ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





