ಉಳ್ಳಾಲ ರೇಂಜ್ ಸೈಯದ್ ಮದನಿ ಎಸ್‌ಜೆಎಂ ರೇಂಜ್ ಕಾನ್ಫರೆನ್ಸ್

ಉಳ್ಳಾಲ,ನ.11: ಸೈಯದ್ ಮದನಿ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಆಶ್ರಯದಲ್ಲಿ ಕಲ್ಲಾಪು ಸೇವಂತಿಗುಡ್ಡೆಯ ವಿಖಾಯತುಲ್ ಇಸ್ಲಾಂ ಮದ್ರಸ ಸಭಾಭವನದಲ್ಲಿ ರೇಂಜ್ ಕಾನ್ಫರೆನ್ಸ್ ನಡೆಯಿತು.
ಮುಕ್ಕಚೇರಿ ಮದ್ರಸದ ಮುಅಲ್ಲಿಂ ಶರೀಫ್ ಬಾಖವಿ ದುಆಗೈದರು. ತೋಟ ಮದ್ರಸ ಮುಅಲ್ಲಿಂ ಮುಸ್ತಫ ಸಅದಿ ಕಿರಾಅತ್ ಪಠಿಸಿದರು. ಸೇವಂತಿಗುಡ್ಡೆ ಮಸೀದಿಯ ಇಮಾಂ ಅಬ್ದುಲ್ ಹಕೀಂ ಮದನಿ ಸಭೆಯನ್ನು ಉದ್ಘಾಟಿಸಿದರು. ಯೂನುಸ್ ಇಮ್ದಾದಿ ಅಲ್‌ಫುರ್ಖಾನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮದನಿ ಅರೆಬಿಕ್ ಎಜುಕೇಶನಲ್ ಟ್ರಸ್ಟ್ ಮುಫತ್ತಿಸ್ ಹುಸೈನ್ ಸಅದಿ ಹೊಸ್ಮಾರ್, ಸುಂದರಭಾಗ್ ಮದ್ರಸದ ಸದರ್ ಮುಅಲ್ಲಿಂ ಕೆ. ಎಂ. ಮುಹಿಯುದ್ದೀನ್ ಮದನಿ, ಸೇವಂತಿಗುಡ್ಡೆ ಜಮಾಅತ್ ಅಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಮದ್ರಸದ ಸಂಚಾಲಕ ಜಾಬಿರ್ ಕಲ್ಲಾಪು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಕಾರ್ಯದರ್ಶಿ ತೌಸೀಫ್ ಸೇವಂತಿಗುಡ್ಡೆ, ಸದಸ್ಯರಾದ ಮುಹಮ್ಮದ್, ಫಾರೂಕ್ ಮತ್ತು ಅಬೂಬಕರ್ ಜೆಪ್ಪು, ಅರ್ಶದ್, ಆಸಿಫ್ ಕೆರೆಬೈಲು, ನಿಸಾರ್, ಖಲೀಲ್ ಮೇಲಗುಡ್ಡೆ ಭಾಗವಹಿಸಿದರು.
ಮಾರ್ಗತಲೆ ಮದ್ರಸದ ಸದರ್ ಮುಅಲ್ಲಿಂ ಜಮಾಲ್ ಮದನಿ ತರಗತಿ ನಡೆಸಿದರು. ಮುಕ್ಕಚೇರಿ ಅಲ್ ಮುಬಾರಕ್ ಮದ್ರಸದ ಸದರ್ ಮುಅಲ್ಲಿಂ ವಿ.ಕೆ. ಅಬ್ದುರ‌್ರಹ್ಮಾನ್ ಸಖಾಫಿ ಕಿತಾಬ್ ಪರಿಚಯ ಮಾಡಿದರು. ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಅಲ್ಲಿಂ ನಿಝಾಂ ಅಮಾನಿ ಅರಬಿ ಭಾಷಾ ದಿನ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ವಿಝ್ ಮಾಸ್ಟರ್ ವಿ.ಎ.ಮುಹಮ್ಮದ್ ಸಖಾಫಿ ಕ್ವಿಝ್ ಸ್ಪರ್ಧೆ ನಡೆಸಿದರು. ಜಾಬಿರ್ ಫಾಳಿಲಿ ಸ್ಪರ್ಧೆಯಲ್ಲಿ ವಿಜೇತರಾದರು. ಇರ್ಫಾನ್ ಸಅದಿ ಮತ್ತು ತಂಡ ಪ್ರವಾದಿ (ಸ) ರವರ ಮದ್ಹ್ ಆಲಾಪಿಸಿದರು.
ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅಬ್ದುರ‌್ರಝ್ಝಾಕ್ ಮದನಿ ವಂದಿಸಿದರು.







