ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ | ಅಬ್ದುಲ್ ರಹ್ಮಾನ್ ಮರ್ಝೂಕಿ ಅಧ್ಯಕ್ಷ, ಅಬ್ದುಲ್ ರಹ್ಮಾನ್ ಅನ್ವರಿ ಕಾರ್ಯದರ್ಶಿಯಾಗಿ ಆಯ್ಕೆ

ಉಪ್ಪಿನಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಉಪ್ಪಿನಂಗಡಿ ಸೆಕ್ಟರ್‌ನ ಮಹಾಸಭೆಯು ಜ.23 (ಗುರುವಾರ)ರಂದು ನಡೆಯಿತು.
ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ವೀಕ್ಷಕರಾಗಿ ಶಂಶುದ್ದೀನ್ ಹಿಮಾಮಿ ಉರ್ವಲ್ ಪದವು ಅವರು ಮಹಾಸಭೆಯನ್ನು ನಿರ್ವಹಿಸಿದ್ದು, ಅಬ್ದುಲ್ ರಹ್ಮಾನ್ ಮರ್ಝೂಕಿ ಅವರು ಉದ್ಘಾಟಿಸಿದರು. ಇರ್ಷಾದ್ ಮುಯೀನಿ ತರಗತಿ ನಡೆಸಿಕೊಟ್ಟರು.
ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅನ್ವರಿ ವರದಿ ಮಂಡಿಸಿದರು. ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಶರೀಫ್ ಸಖಾಫಿ ಅವರ ನೇತೃತ್ವದೊಂದಿಗೆ ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮರ್ಝೂಕಿ ವಳಾಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಅನ್ವರಿ ಕರ್ವೇಲ್, ಕೋಶಾಧಿಕಾರಿಯಾಗಿ ಶಫೀಕ್ ಫಾಲಿಳಿ ಉಪ್ಪಿನಂಗಡಿ, ಉಪಾಧ್ಯಕ್ಷರಾಗಿ ಸಯ್ಯಿದ್ ಸವಾದ್ ತಂಙಳ್ ಕರ್ವೆಲ್, ದಅವಾ ಕಾರ್ಯದರ್ಶಿ ಮುಸ್ತಫಾ ಹಿರೆಬಂಡಾಡಿ, ಮಾಧ್ಯಮ ಕಾರ್ಯದರ್ಶಿ ಬಾಸಿತ್ ವಳಾಲ್, ಕ್ಯಾಂಪಸ್ ಕಾರ್ಯದರ್ಶಿ ಸುಹೈಲ್ ನೆಕ್ಕಿಲಾಡಿ, GD ಕಾರ್ಯದರ್ಶಿ ಸೀಯರ್ ಉಪ್ಪಿನಂಗಡಿ, QD ಕಾರ್ಯದರ್ಶಿ ಉಬೈದ್ ಕರ್ವೆಲ್, ರೈೆಂಬೊ ಕಾರ್ಯದರ್ಶಿ ಇರ್ಫಾನ್ ಬಿಳಿಯೂರ್, ಸಂಚಾಲಕರಾಗಿ ಶಮ್ಮಾಸ್ ಉಪ್ಪಿನಂಗಡಿ, ಸದಸ್ಯರಾಗಿ ಇರ್ಷಾದ್ ಮುಯೀನಿ ಮಠ, ಅನೀಸ್ ಕರ್ವೇಲ್, ಸುಹೈಲ್ ತಂಙಳ್, ಶೆರೀಫ್ ವಳಾಲ್, ರಾಫಿಹ್ ವಳಾಲ್, ಅಪ್ಸಲ್ ಉಪ್ಪಿನಂಗಡಿ, ಸಹಲ್ ಮಠ, ಶಮ್ಮಾಸ್ ಮಠ, ಜುನೈದ್ ಕೊಪ್ಪಳ, ಫಾಲಿಳಿ ಕೊಪ್ಪಳ, ಝಯಾನ್ ಉಪ್ಪಿನಂಗಡಿ, ಸಮಾಝ್ ಮಠ, ಜಾಹಿದ್ ಬಿಲಿಯೂರು, ಆಬಿದಾನ್ ಬಿಳಿಯೂರು ಅವರನ್ನು ಆಯ್ಕೆ ಮಾಡಲಾಗಿದೆ.
ನಂತರ ನೂತನ ಕಾರ್ಯದರ್ಶಿಯಾದ ಅಬ್ದುಲ್ ರಹ್ಮಾನ್ ಅನ್ವರಿ ಅವರು ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.







