ಕರಾಯದಲ್ಲಿ ಜು.13ರಂದು ಸಮಸ್ತ ಮಹಲ್ಲ್ ಪ್ರತಿನಿಧಿ ಸಂಗಮ
ಉಪ್ಪಿನಂಗಡಿ : ಕರಾಯ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಮಸ್ತ ವಿದ್ಯಾರ್ಥಿ ಸಂಘ SKSSF ಕರಾಯ ಶಾಖೆಯ ಇಬಾದ್ ವಿಂಗ್ ಸಮಸ್ತ ಉಲಮಾ ಒಕ್ಕೂಟ ಇದರ ವತಿಯಿಂದ ಸಮಸ್ತ ನೂರನೇ ವಾರ್ಷಿಕ ಮಹಾ ಸಮ್ಮೇಳನ ಪ್ರಯುಕ್ತ ಜು.13ರ ಆದಿತ್ಯವಾರ ಸಂಜೆ 7 ಗಂಟೆಗೆ ಬೃಹತ್ ಸಮಸ್ತ ಮಹಲ್ಲ್ ಸಂಗಮ ಕರಾಯ ಬದ್ರಿಯಾ ಹಾಲಿನಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಕೆ.ಕೆ ಶಾಹುಲ್ ಹಮೀದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಸ್ಥಳೀಯ ಮುದರ್ರಿಸ್ ಬಹು ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ ಇವರು ಚಾಲನೆ ನೀಡಲಿದ್ದು, ಸಮಕಾಲೀನ ವಿಷಯದ ಕುರಿತು ಖ್ಯಾತ ಬ್ಯಾರಿ ಭಾಷಣಕಾರ ಮೌಲಾನಾ ಅಬ್ದುಲ್ ಖಾದರ್ ದಾರಿಮಿ, ಕುಕ್ಕಿಲ ತರಬೇತಿ ನೀಡಲಿದ್ದಾರೆ.
ಸಮಿತಿ ಅಧ್ಯಕ್ಷರಾದ ಬಹು ಯೂಸುಫ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡುವ ಸಮಾವೇಶದಲ್ಲಿ ಜಮಾಅತಿನ ವಿವಿಧ ಸಂಘ ಸಂಸ್ಥೆಗಳ ನೇತಾರರು, ಊರಿನ ಪ್ರಮುಖರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಸಮಿತಿ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





