ಹಜ್ ಯಾತ್ರೆಗೆ ಮುನ್ನ ಮುಹಮ್ಮದ್ ಮಸೂದ್ ರನ್ನು ಭೇಟಿ ಮಾಡಿದ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು : ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್ ಅವರು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕುದ್ರೋಳಿ ಜಾಮಿಯಾ ಮಸೀದಿಯ ಖಾಜಿಯವರಾದ ಮೌಲಾನ ಶೈಖ್ ಮುತ್ತಹರ್ ಹುಸೈನ್ ಕಾಸ್ಮಿ, ಇಮಾಮರುಗಳಾದ ಮೌಲಾನ ಮುಫ್ತಿ ಅಬ್ದುಲ್ ಮನ್ನಾನ್ ಸಾಬ್, ಝುಬೈರ್ ಮೌಲಾನ, ಮಾಜಿ ಮೇಯರ್ ಕೆ.ಅಶ್ರಫ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಸುಡಾದ ಅಧ್ಯಕ್ಷರಾದ ಮುಸ್ತಫ ಸುಳ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಟಿ.ಎಂ. ಸಯ್ಯದ್ ತೆಕ್ಕಿಲ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಡಾಕ್ಟರ್ ಮೊಹಮ್ಮದ್ ಆರಿಫ್ ಮಸೂದ್, ಅಬೀದ್ ಜಲಿಹಾಲ್, ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್.ಎ.ಖಲೀಲ್ ಅಹಮದ್, ಬೋಳಾರದ ಶಾದಿ ಮಹಲ್ ನ ಅಧ್ಯಕ್ಷರಾದ ಹಾಜಿ ಮಕ್ಬೂಲ್ ಅಹಮದ್, ನಝೀರ್ ಮಠ, ಬಾವ ಕೆ.ಸಿ ರೋಡ್ ಮೊದಲಾದವರು ಉಪಸ್ಥಿತರಿದ್ದರು





