Vittal | ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ಸಹಾಯ ಮಾಡಿದ ಆರೋಪ; ವಿಟ್ಲ ಪೊಲೀಸ್ ಕಾನ್‌ಸ್ಟೇಬಲ್ ಪ್ರದೀಪ್ ಬಂಧನ

ಬಂಟ್ವಾಳ: ಶಂಕಿತ ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಿಕೊಡಲು ಸಹಾಯ ಮಾಡಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿಟ್ಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದೆ. ಶಂಕಿತ ಬಾಂಗ್ಲಾ ಪ್ರಜೆ ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಪಡೆಯಲು ಸಹಾಯ ಆರೋಪ ಇವರ ಮೇಲಿದೆ. ಅದೇ ಠಾಣೆಯ ಕಾನ್ಸ್ಟೇಬಲ್ ಸಾಬೀ ಮಿರ್ಜಿ ನೀಡಿದ ದೂರಿನ ಆಧಾರದ ಮೇಲೆ ಕಾನ್ಸ್ಟೇಬಲ್ ಪ್ರದೀಪ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಶಕ್ತಿದಾಸ್ ನೀಡಿದ್ದ ಪಾಸ್ ಪೋರ್ಟ್ ಅರ್ಜಿಯನ್ನು ಸಾಬೀ ಮಿರ್ಜಿ ತಿರಸ್ಕರಿಸಿದ್ದರು. ಆದರೆ ಇತ್ತೀಚೆಗೆ ಸಾಬೀ ಮಿರ್ಜಿ ಕರ್ತವ್ಯ ನಿಮಿತ್ತ ಬೇರೆ ಕಡೆಗೆ ಹೋದಾಗ ಕಾನ್ಸ್ಟೇಬಲ್ ಪ್ರದೀಪ್ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ಕಾನ್ಸ್ಟೇಬಲ್ ಪ್ರದೀಪ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Next Story





