ವಿಟ್ಲ: ನಾಲ್ಕು ಗೋವುಗಳ ಕಳ್ಳತನ ಪ್ರಕರಣ; ಆರೋಪಿಯ ಬಂಧನ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಲ್ಲಿ ನಿದ್ರಿಸಿದ್ದ ನಾಲ್ಕು ಗೋವುಗಳನ್ನು 2025 ನವೆಂಬರ್ 18 ರಂದು ರಾತ್ರಿ ವೇಳೆ ಗೇಟ್ ಮುರಿದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಉಳ್ಳಾಲ ತಾಲೂಕು ಕೋಡಿ ನಿವಾಸಿ ಝುಲ್ಫಾನ್ ಮಾಲಿಕ್ ಉಳ್ಳಾಲ್ (30) ಎಂದು ಗುರುತಿಸಲಾಗಿದೆ. ಹುಲ್ಲು ಮೇಯಲು ಹೋಗಿದ್ದ ಗಣೇಶ ರೈ ಮತ್ತು ನಾರಾಯಣ ನಾಯ್ಕ ಅವರ ಒಟ್ಟು ನಾಲ್ಕು ದನಗಳು ಕಳ್ಳತನವಾಗಿರುವ ಬಗ್ಗೆ ಗಣೇಶ ರೈ ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 169/2025ರಂತೆ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡಿದ್ದ ಪೊಲೀಸರು 2026 ಜ. 8 ರಂದು ಆರೋಪಿನ್ನು ಬಂಧಿಸಿ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಜಿಲ್ಲಾ ಎಸ್‌ಪಿ ಮಾಹಿತಿ ನೀಡಿದ್ದಾರೆ.
Next Story





