ವರ್ಕಾಡಿ ಗ್ರಾಪಂ ನೂತನ ಅಧ್ಯಕ್ಷ ಉಮರ್ ಬೋರ್ಕಳರಿಗೆ ಸನ್ಮಾನ

ಮಂಜೇಶ್ವರ, ಜ.8: ಉಳ್ಳಾಲ ಅಳೇಕಲದ ಮದನಿ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ಪ್ರಸಕ್ತ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಪಂ ಅಧ್ಯಕ್ಷ ಉಮರ್ ಬೋರ್ಕಳರನ್ನು ಗ್ರಾಪಂ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭ ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ಇಸ್ಮಾಯೀಲ್, ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಸ್ಕೂಲ್ ಪ್ರಾಂಶುಪಾಲ ವಿಜಯಕುಮಾರ್, ಟಿ.ಮೂಸ ತಿಮ್ಮಂಗೂರ್, ಎಸ್ವಿವಿ ಹೈಸ್ಕೂಲ್ ಶಿಕ್ಷಕ ಭವಾನಿ ಶಂಕರ್, ಕಳಿಯೂರು ಸಂತ ಜೋಸೆಫ್ ಶಾಲೆಯ ಶಿಕ್ಷಕರಾದ ರಾಜೇಶ್ ಡಿಸೋಜ, ಐವನ್ ಡಿಸೋಜ, ಇಮ್ತಿಯಾಝ್ ಮಜಿರ್ಪಳ್ಳ, ರವಿಶಂಕರ್ ತಿಮ್ಮಂಗೂರ್ ಉಪಸ್ಥಿತರಿದ್ದರು.
Next Story





