ಮಂಗಳೂರು | ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼವೆಬ್ ಡೆವಲಪ್‌ಮೆಂಟ್ʼ ಕುರಿತು ಎರಡು ದಿನಗಳ ಕಾರ್ಯಾಗಾರ

ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗವು ವೆಬ್ ಡೆವಲಪ್‌ಮೆಂಟ್ ಕುರಿತು ಎರಡು ದಿನಗಳ ಕಾರ್ಯಗಾರವನ್ನು ಆಯೋಜಿಸಿತು.
ಕಾರ್ಯಾಗಾರದಲ್ಲಿ ವೆಬ್ ಡೆವಲಪ್‌ಮೆಂಟ್ ಪರಿಕಲ್ಪನೆಗಳ ಬಗ್ಗೆ ಮತ್ತು ಆಧುನಿಕ ವೆಬ್ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಅಮನ್, ಬಾತಿಶಾ ಮತ್ತು ನಿಶಾ ಮಾರ್ಗದರ್ಶನ ನೀಡಿದರು.
ಕಾರ್ಯಗಾರದ ಉದ್ಘಾಟಣೆ ವೇಳೆ ಬಿಐಟಿ ಮಂಗಳೂರಿನ ಪ್ರಾಂಶುಪಾಲರಾದ ಡಾ. ಎಸ್. ಐ. ಮಂಝೂರ್ ಬಾಷಾ ಮತ್ತು ಎಐ & ಡಿಎಸ್ ಮುಖ್ಯಸ್ಥರಾದ ಡಾ. ಮೆಹಬೂಬ್ ಮುಜಾವರ್ ಹಾಗೂ ವಿಭಾಗದ ಇತರ ಅಧ್ಯಾಪಕರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ನಾದಿಯಾ ಅವರು ಸ್ವಾಗತಿಸಿದರು. ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಮೆಹಬೂಬ್ ಮುಜಾವರ್ ಅವರು ಕಾರ್ಯಾಗಾರವನ್ನು ಸಂಯೋಜಿಸಿದರು.
Next Story







