Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸುಹಾಸ್ ವಿರುದ್ಧ ರೌಡಿಶೀಟರ್ ತೆರೆದಾಗ...

ಸುಹಾಸ್ ವಿರುದ್ಧ ರೌಡಿಶೀಟರ್ ತೆರೆದಾಗ ಯಾಕೆ ಮಾತನಾಡಿಲ್ಲ: ಬಿಜೆಪಿ ಶಾಸಕರಿಗೆ ಮಂಜುನಾಥ ಭಂಡಾರಿ ಪ್ರಶ್ನೆ

ವಾರ್ತಾಭಾರತಿವಾರ್ತಾಭಾರತಿ5 May 2025 2:40 PM IST
share
ಸುಹಾಸ್ ವಿರುದ್ಧ ರೌಡಿಶೀಟರ್ ತೆರೆದಾಗ ಯಾಕೆ ಮಾತನಾಡಿಲ್ಲ: ಬಿಜೆಪಿ ಶಾಸಕರಿಗೆ ಮಂಜುನಾಥ ಭಂಡಾರಿ ಪ್ರಶ್ನೆ

ಮಂಗಳೂರು, ಮೇ 5: ರೌಡಿ ಶೀಟರ್ ಸುಹಾಸ್ ಕೊಲೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಯಾರೂ ಈ ರೀತಿ ಕೊಲೆಯಾಗಬಾರದು. ಆದರೆ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂದು ಹೇಳುವ ಬಿಜೆಪಿ ಶಾಸಕರು, ಅವರ ಸರಕಾರವಿದ್ದಾಗ, ಅವರದ್ದೇ ಗೃಹ ಸಚಿವರು ಇದ್ದಾಗ ಸುಹಾಸ್ ಮೇಲೆ ರೌಡಿಶೀಟರ್ ಹಾಕಿದಾಗ ವಿಧಾಸಭೆಯಲ್ಲಿ ಯಾಕೆ ಪ್ರತಿಭಟಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.

ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿಯು ದಲಿತ ಕಾರ್ತಿಕ್ ಎಂಬವನ ಕೊಲೆಯ ಆರೋಪಿಯೂ ಆಗಿದ್ದು, ಹಾಗಿದ್ದರೆ ದಲಿತರು ಹಿಂದೂಗಳೆಂದು ಬಿಜೆಪಿಯವರು ಒಪ್ಪುವುದಿಲ್ಲವೇ ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಮನ್ನಣೆ ನೀಡಿ ಪ್ರತ್ಯೇಕ ನೀತಿ ಜಾರಿ, ಗೋವಾ ಪ್ರವಾಸೋದ್ಯಮ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ರಾತ್ರಿ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆೆಸಿದೆ. ಖುದ್ದು ಉಪ ಮುಖ್ಯಮಂತ್ರಿಯವರು ಈಗಾಗಲೇ ಕರಾವಳಿ ಶಾಸಕರ ಸಭೆ ನಡೆಸಿದ್ದಾರೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮದ ಜತೆಗೆ ವೈಭವದ ನಗರವಾಗಿ ಗತಕಾಲದ ವೈಭವವನ್ನು ಮರಳಿಸುವ ಆಶಾಭಾವನೆ ಮೂಡಿಸಿತ್ತು. ಆದರೆ ಬಿಜೆಪಿಯವರು ಇಂತಹ ಕೊಲೆಗಳನ್ನು ರಾಜಕೀಯಕ್ಕೆ ಬಳಸುವ ಮೂಲಕ ಕರಾವಳಿಯ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಕೊಲೆ ಮಾಡಿದವರು ಹಾಗೂ ಈ ಕೊಲೆಯ ಹಿಂದೆ ಇರುವರನ್ನು ಗುರುತಿಸಿ ಶಿಕ್ಷೆ ಆಗಲೇಬೇಕು. ಜತೆಗೆ ಕೋಮು ಪ್ರಚೋದನೆಯನ್ನೂ ನಾವು ಖಂಡಿಸುತ್ತೇವೆ. ಎರಡು ವರ್ಷಗಳ ಹಿಂದೆ ಭಾಷಣವೊಂದರಲ್ಲಿ ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು, ದ.ಕ.ಜಿಲ್ಲೆಯಲ್ಲಿ ಹಿಂದು, ಮುಸ್ಲಿಂ ಕ್ರೈಸ್ತರು ಒಗಟ್ಟಾಗಿ ಜಾತಿ ಮತ, ಧರ್ಮದ ಬೇಧವಿಲ್ಲದೆ ಬದುಕುತ್ತಿದ್ದೆವು. ಆದರೆ ನಾಯಕರು ಮತ ಪೆಟ್ಟಿಗೆಗೆ ಕೈ ಹಾಕಿದ ಬಳಿಕ ಕೋಮು ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯವರು ಕೊಲೆ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸುವ ವೇಳೆ ಆ ವ್ಯಕ್ತಿಯ ಹಿನ್ನೆಲೆಯನ್ನೂ ನೋಡಬೇಕು. ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಸೇರಿದಂತೆ ಯಾವುದೇ ರೀತಿಯ ತನಿಖೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕೋಮು ಗಲಭೆಗಳಲ್ಲಿ ಜೈಲಿಗೆ ಹೋದವರಿಗೆ ಹಾರ ತುರಾಯಿ ಹಾಕಿ ಯುವಕರನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಾರೆ. ಸುಹಾಸ್ ಶೆಟ್ಟಿಯಿಂದ ಹಿಂದೂವೊಬ್ಬನ ಕೊಲೆಯಾದಾಗ ಬಿಜೆಪಿ ಖಂಡಿಸಬೇಕಿತ್ತು ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿಕೆಶಿ ಮೇಲೂ ಪ್ರಕರಣಗಳಿವೆ ಎಂದು ಎಂದು ಹೇಳುವ ಶಾಸಕರು, ರೌಡಿಶೀಟರ್, ಕೊಲೆ ಆರೋಪಗಳಂತಹ ಪ್ರಕರಣಗಳು ಹಾಗೂ ಇತರ ಪ್ರಕರಣಗಳ ಬಗ್ಗೆ ಕನಿಷ್ಟ ಜ್ಞಾನವನ್ನು ಹೊಂದಿಲ್ಲವೇ ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಉಡುಪಿ ಮಠಕ್ಕೆ ಮುಸ್ಲಿಂ ಬಾಂಧವರ ಕೊಡುಗೆ ಇದೆ ಎಂದು ಹೇಳಿ, ವಿರೋಧದ ನಡುವೆಯೂ ಇಫ್ತಾರ್ ಕೂಟವನ್ನು ಆಯೋಜಿಸಿ ಸೌಹಾರ್ದತೆಯ ಸಂದೇಶ ನೀಡಿದ್ದ ಉಡುಪಿಯ ಹಿಂದಿನ ಶ್ರೀಗಳ ಶಿಷ್ಯರಾಗಿರುವ ಹಾಲಿ ಶ್ರೀಗಳು ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ, ದೇಶವನ್ನಾಳುತ್ತಿರುವ ಸರಕಾರ ಹಿಂದೂಗಳಿಗೆ ರಕ್ಷಣೆ ಕೊಡುತ್ತಿಲ್ಲ ಎಂದು ಅವರು ಹೇಳಿತ್ತಿದ್ದರೆ, ನೇರವಾಗಿ ಅವರ ರಾಜೀನಾಮೆ ಕೇಳಿ ಎಂದು ಉಡುಪಿ ಶ್ರೀಗಳ ಹೇಳಿಕೆ ಬಗ್ಗೆ ಸವಾಲೆಸೆದರು.

ರಾಜ್ಯದಲ್ಲಿ ಹಿಂದೂ ಯುವಕರಿಗೆ ರಕ್ಷಣೆ ಇಲ್ಲ ಎನ್ನುವ ಉಡುಪಿಯ ಶ್ರೀಗಳು, ವಸುದೇವ ಕುಟುಂಬಕಂ ಎಂದು ಹೇಳಿ ಶ್ರೀಕೃಷ್ಣನನ್ನು ಆರಾಧಿಸುವ ಮಠದ ಪೀಠಾಧಿಪತಿಗಳು ಭಗವದ್ಗೀತೆಯನ್ನು ಮತ್ತೊಮ್ಮೆ ಓದಬೇಕು. ನ್ಯಾಯಾಂಗ, ಕಾರ್ಯಾಂಗ, ರಾಜ್ಯಾಂಗ ಯಾವುದೂ ಸರಿಯಿಲ್ಲ ಎಂದು ಹೇಳುವ ಶ್ರೀಗಳಿಗೆ ಯಾವ ಸರಕಾರ ತರಬೇತು ಎಂದು ಹೇಳುತ್ತಿದ್ದಾರೆ. ಉಡುಪಿ ಮಠದ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ, ಶ್ರೀಗಳು ಇಂತಹ ಕ್ಷುಲ್ಲಕ ಹೇಳಿಕೆ ನೀಡಬಾರದು. ಬಿಜೆಪಿಯವರು ಕೊಲೆ ವಿಚಾರದಲ್ಲಿ ರಾಜಕೀಯ ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಿ. ಕ್ಲುಲ್ಲಕ ರಾಜಕಾರಣ, ದ್ವೇಷದ ರಾಜಕಾರಣ ಬಿಡಿ ಎಂದು ಮಂಜುನಾಥ ಭಂಡಾರಿ ಆಗ್ರಹಿಸಿದರು.

ಶಾಸಕ ಹರೀಶ್ ಪೂಂಜ ಮುಸ್ಲಿಮರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ಹೇಳಿದ ಮಂಜುನಾಥ ಭಂಡಾರಿ, ಸಾಮಾಜಿಕ ಜಾಲ ತಾಣಗಳಲ್ಲಿಯೂ ಕೋಮು ಪ್ರಚೋದನೆ ನೀಡುವ ಬರಹಗಳನ್ನು ಬರೆಯುವವರು ಹಾಗೂ ಅದನ್ನು ಹಂಚುವವರ ಬಗ್ಗೆ ಶಿಕ್ಷೆಯಾಗಬೇಕು. ಈಬಗ್ಗೆ ಗೃಹ ಸಚಿವರ ಗಮನಕ್ಕೆ ತರುವಂತೆ ಜಿಲ್ಲಾ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಪೊಲೀಸ್ ವರಿಷ್ಟರನ್ನೂ ಭೇಟಿಯಾಗಿ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವವರ ವಿರುದ್ಧ ಸ್ವಯಂ ಪೇರಿತವಾಗಿ ಪ್ರಕರಣ ದಾಖಲಿಸಲು ತಿಳಿಸಲಾಗುವುದು ಎಂದು ಹೇಳಿದರು.

ಆ್ಯಂಟಿ ಕಮ್ಯೂನಲ್ ವಿಂಗ್ ಹಿಂದೆ ಮಂಗಳೂರು ನಗರಕ್ಕೆ ಮಾತ್ರವೇ ಇದ್ದು, ಇದೀಗ ಅದನ್ನು ದ.ಕ. ಮತ್ತು ಉಡುಪಿಗೆ ವಿಸ್ತರಿಸಿ ಜಾರಿಗೊಳಿಸಲು ಗೃಹಸಚಿವರು ಆದೇಶಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪದ್ಮರಾಜ್ , ಜಿ. ಎ. ಬಾವ, ರಕ್ಷಿತ್ ಶಿವರಾಂ, ಮಿಥುನ್ ರೈ, ಇನಾಯತ್ ಅಲಿ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್ , ವಿಕಾಸ್ ಶೆಟ್ಟಿ, ಸುಧೀರ್ ಟಿ. ಕೆ. , ಲಾರೆನ್ಸ್ ಡಿಸೋಜ, ಕೃಷ್ಣಪ್ಪ, ಶುಭಾಸ್ ಕೊಳ್ನಾಡ್, ಸುಹಾನ್ ಆಳ್ವ, ಶುಭೋದಯ ಅಳ್ವ, ಯೋಗೀಶ್, ಕೃಷ್ಣ ಶೆಟ್ಟಿ, ಬಶೀರ್ ಉಪಸ್ಥಿತರಿದ್ದರು.

‘ಗೃಹ ಸಚಿವರು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಮುಸ್ಲಿಂ ನಾಯಕ ಸಭೆ ಮಾಡಿಲ್ಲ. ಬದಲಾಗಿ ಅಂದು ಆರಂಭದಲ್ಲಿ ಕೆಲವರು ಅವರನ್ನು ಭೇಟಿಯಾಗಲು ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ್ದರು. ಮತ್ತೆ ಸುಮಾರು 30ರಿಂದ 40 ಮಂದಿ ಭೇಟಿಯಾಗಲು ಬಂದ ಕಾರಣ ಸ್ಥಳಾವಕಾಶದ ಕೊರತೆಯಿಂದ ಕೆಳಗಡೆ ಅವರಿಗೆ ಭೇಟಿ ಮಾಡಲು ಅವಕಾಶ ನೀಡಲಾಯಿತು. ಅದು ಸಭೆಯಾಗಿರಲಿಲ್ಲ. ತಮ್ಮನ್ನು ಕರೆದಿಲ್ಲ ಎಂದು ಹೇಳುವ ಶಾಸಕರಿಗೂ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ಧಾರಿ ಇದೆ. ಅವರೂ ಬಂದು ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಬಹುದಿತ್ತು. ಬಿಜೆಪಿ ಅವಧಿಯಲ್ಲಿಯೂ ಈ ರೀತಿಯ ಗಲಭೆ, ಸಂಘರ್ಷಗಳು ನಡೆದಾಗ, ಗೃಹ ಸಚಿವರು ಭೇಟಿಯ ವೇಳೆ ಭೇಟಿಗಳು ನಡೆದಿವೆ. ಈ ರೀತಿಯ ಆರೋಪ ಬಿಜೆಪಿಯ ಜಾಯಮಾನ’ ಎಂದು ಮಂಜುನಾಥ ಭಂಡಾರಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X